ರಾಜಕೀಯದ ಆಚೆಗೆ ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂಬ ಮಾತೀಗ ನಿಖಿಲ್ ಹಾಗೂ ಅಭಿಷೇಕ್ ಅವರ ವಿಚಾರದಲ್ಲಿ ಸತ್ಯವಾಗಿದೆ.. ಹೌದು ನಿಖಿಲ್ ಕುಮಾರಸ್ವಾಮಿ ಹಾಗೂ ಅಭಿಷೇಕ್ ಅಂಬರೀಶ್ ಅವರು ಮೊದಲಿನಿಂದಲೂ ಒಳ್ಳೆಯ ಸ್ನೇಹಿತರು.. ಆದರೆ ಕಳೆದ ಲೋಕ ಸಭಾ ಚುನಾವಣೆಯಿಂದಾಗಿ ಇಬ್ಬರು ಕೊಂಚ ದೂರಾಗಿದ್ದರು..

ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ನಿಖಿಲ್ ಅವರು.. ರಾಜಕೀಯದ ಹೊರಗೆ ನಾವಿಬ್ಬರೂ ಈಗಲೂ ಒಳ್ಳೆಯ ಸ್ನೇಹಿತರು ಎಂದಿದ್ದರು.. ಅಷ್ಟೇ ಅಲ್ಲದೆ ಅಭಿಷೇಕ್ ಅವರ ಚೊಚ್ಚಲ ಸಿನಿಮಾ ಅಮರ್ ಬಿಡುಗಡೆ ಸಂದರ್ಭದಲ್ಲಿಯೂ ಶುಭ ಹಾರೈಸಿದ್ದರು..

ಅಭಿಷೇಕ್ ಅವರೂ ಕೂಡ ನಿಖಿಲ್ ಅವರ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಿದ್ದರು.. ಸುಮಲತಾ ಅವರಿಗೆ ಶುಭ ಕೋರಿದಾಗ.. ಅಭಿಷೇಕ್ ಪ್ರತಿಕ್ರಿಯೆ ನೀಡಿ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ ಇರೋಣ ಎಂದಿದ್ದರು..

ಇದೀಗ ಅಮರ್ ಸಿನಿಮಾದ ನಂತರ ಅಭಿಷೇಕ್ ಅವರು ಮತ್ತೊಂದು ಸಿನಿಮಾಗೆ ಸಿದ್ಧತೆ ನಡೆಸುತ್ತಿದ್ದು.. ಹೊಸ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.. ಇದೇ ಸಿನಿಮಾ ಸಂಬಂಧಪಟ್ಟ ಹೊಸ ಲುಕ್ ನ ಫೋಟೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು..

ಇದೇ ಫೋಟೋಗೆ ನಿಖಿಲ್ ಅವರು ಕಮೆಂಟ್ ಕೂಡ ಮಾಡಿದ್ದಾರೆ.. ಹೌದು ನಿಖಿಲ್ ಅವರು ಲುಕಿಂಗ್ ಶಾರ್ಫ್ ಎಂದು ಅಭಿಷೇಕ್ ಫೋಟೋಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಷ್ಟೇ ಅಲ್ಲದೆ ಮುಂದಿನ ಸಿನಿಮಾಗೆ ಶುಭ ಕೋರಿದ್ದಾರೆ..

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಭಿಷೇಕ್ ಅವರು ನಿಖಿಲ್ ಅವರ ಕುರುಕ್ಷೇತ್ರ ಸಿನಿಮಾದಲ್ಲಿ ಅಭಿಮನ್ಯು ಪಾತ್ರದ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದು.. ಆದಷ್ಟು ಬೇಗ ಮತ್ತೊಂದು ಸಿನಿಮಾ ಮಾಡಿ ಎಂದಿದ್ದಾರೆ..

ಇದನ್ನು ನೋಡಿದ ಅಭಿಮಾನಿಗಳು ಇಬ್ಬರೂ ಕೂಡ ಒಟ್ಟಿಗೆ ತೆರೆ ಮೇಲೆ ಬರಬೇಕೆಂದು ಕಮೆಂಟ್ ಹಾಕುತ್ತಿದ್ದಾರೆ.. ನಿಜ ಜೀವನದ ಈ ಸ್ನೇಹಿತರು ದೊಡ್ಡ ಪರದೆಯ ಮೇಲೆ ಒಟ್ಟಾಗಿ ಕಾಣಿಸಿಕೊಳ್ಳುವರ ಕಾದು ನೋಡಬೇಕಿದೆ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ