ಚುನಾವಣೆ ಮುಗಿದು ಇನ್ನೇನು ಫಲಿತಾಂಶಕ್ಕೆ ಎದುರು ನೋಡುತ್ತಿರುವ ಅದೆಷ್ಟೋ ಅಭ್ಯರ್ಥಿಗಳು ಅವರ ಕುಟುಂಬದವರು ಟೆಂಷನ್ ನಿವಾರಣೆಗೆಂದು ರೆಸಾರ್ಟ್ ಗಳಿಗೆ ಹಾಗೂ ಇನ್ನಿತರ ಲಡೆಗಳಿಗೆ ಪ್ರವಾಸ ಕೈಗೊಂಡಿದ್ದಾರೆ.. ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹೊರತಾಗಿಲ್ಲ.. ಈಗಾಗಲೇ ಮಗನ ಗೆಲುವಿಗಾಗಿ ಅನೇಕ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಹರಕೆ ಕಟ್ಟಿಕೊಂಡಿದ್ದಾರೆ..

ಇದೀಗ ಮಂಡ್ಯ ಅಭ್ಯರ್ಥಿ ನಿಖಿಲ್ ಅವರಿಗೆ ಅಭಿಷೇಕ್ ಅಂಬರೀಶ್ ನೇರವಾಗಿಯೇ ಟಾಂಗ್ ನೀಡಿದ್ದಾರೆ.. ಹೌದು ಮಂಡ್ಯದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಿಹಿಸಿದ್ದ ಅಭಿಷೇಕ್ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ.. ಸುಮಲತಾ ಅವರ ಚುನಾವಣಾ ಫಲಿತಾಂಶ ಮೇ 23ಕ್ಕೆ ಬರಲಿದ್ದು, ಅಂಬರೀಷ್ ಅವರ ಹುಟ್ಟುಹಬ್ಬ ಮೇ 29 ಇದೆ.. ಹಾಗೆಯೇ ನನ್ನ ಸಿನಿಮಾ ಅಮರ್ ಕೂಡ ಇದೇ ತಿಂಗಳು ಬಿಡುಗಡೆ ಆಗ್ತಾ ಇರೋದ್ರಿಂದ ಮೇ ತಿಂಗಳು ನಮ್ಮ ಕುಟುಂಬಕ್ಕೆ ಬಹಳ ವಿಶೇಷವಾಗಿದೆ ಎಂದ ಅವರು ನಿಖಿಲ್ ಬಗ್ಗೆ ಮಾತನಾಡಿದ್ರು..

ಯಾವ ಸರ್ವೆ ಮಾಡಿಸಿದ್ರು ಅಷ್ಟೇ, ಎಷ್ಟು ದೇವಾಲಯಗಳಿಗೆ ಭೇಟಿ ನೀಡಿದ್ರು ಅಷ್ಟೇ.. ಫಲಿತಾಂಶ ಮತಗಟ್ಟೆಯಲ್ಲಿ ಭದ್ರವಾಗಿದೆ.. ಅದು ಯಾವುದೇ ಕಾರಣಕ್ಕೂ ಬದಲಾಗಲ್ಲ.. ಮೇ 23 ಕ್ಕೆ ಆ ದೇವರೇ ಹೊರಹಾಕಲಿದ್ದಾರೆ.. ಎಂದು ಕುಮಾರಸ್ವಾಮಿ ಅವರ ಕುಟುಂಬಕ್ಕೆ ಟಾಂಗ್ ನೀಡಿದರು..

ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಅನೇಕ ಸರ್ವೆ ಗಳನ್ನು ಮಾಡಿಸಿದ್ದಾರೆ ಅದರಲ್ಲಿ ನಿಖಿಲ್ ಗೆಲುವು ಸಾಧಿಸಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿತ್ತು.. ಅದಕ್ಕಾಗಿಯೇ ನಿನ್ನೆ ಅಭಿಷೇಕ್ ಅವರು ಈ ವಿಷಯವಾಗಿ ಟಾಂಗ್ ನೀಡಿದ್ದಾರೆ..

ನಾವು ಯಾವುದೇ ಸರ್ವೆ ಮಾಡಿಸಿಲ್ಲ..ಆದರೆ ಚುನಾವಣೆ ನಡೆದ ದಿನವೇ ನಮಗೆ ಫಲಿತಾಂಶ ಗೊತ್ತಾಗಿದೆ.. ಮೇ 23 ಕ್ಕೆ ಪ್ರಕಟವಾಗಬೇಕು ಅಷ್ಟೇ ಎಂದರು..

ಅಷ್ಟೇ ಅಲ್ಲದೆ ಬೆಂಗಳೂರಿನ ಜೆಪಿ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಬರೀಶ್ ಅವರ ಮನೆ ಸಂಪೂರ್ಣಗೊಂಡ ಮೇಲೆ ಮಂಡ್ಯದಲ್ಲಿ ಮನೆ ಕಟ್ಟುವುದಾಗಿ ತಿಳಿಸಿದರು..

ಜೊತೆಗೆ ಚುನಾವಣಾ ಫಲಿತಾಂಶದ ಬಗ್ಗೆ ನಿಮಗೆ ಟೆಂಷನ್ ಇದೆಯಾ ಎಂದು ಕೇಳಿದ್ದಕ್ಕೆ ಅಮರ್ ಸಿನಿಮಾದ ಡೈಲಾಗ್ ಮೂಲಕ ” ನೋ ವೇ ಚಾನ್ಸೇ ಇಲ್ಲ” ಎಂದರು..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ