ತಾಯಿ ಎಂದರೇ ಹಾಗೆ ಆಕೆಗೆ ಸರಿಸಮಾನರು ಯಾರಿಲ್ಲಾ.. ಆದರೆ ಆಕೆಯನ್ನು ಕಳೆದುಕೊಂಡರೆ ಅದರಂತಹ ನೋವು ಇನ್ನೊಂದಿಲ್ಲ.. ಇಲ್ಲೊಂದು ಅದ್ಭುತ ಘಟನೆ ನಡೆದಿದೆ.. ಆಕೆ ತಾನು 4ನೇ ಮಗುವಿಗೆ ಜನ್ಮ ನೀಡುವ ಸಂದರ್ಭದಲ್ಲಿ ಸತ್ತು ಹೋದರು.. ಆದರೆ 5 ತಿಂಗಳ ನಂತರ ನಡೆದ ಫ್ಯಾಮಿಲಿ ಫೋಟೋಶೂಟ್ ನಲ್ಲಿ ಅದೇ ತಾಯಿ ಕಾಣಿಸಿಕೊಂಡಿದ್ದಾರೆ..

ಇದೆಂತಹಾ ವಿಚಿತ್ರ ಸತ್ತವರು ಹೇಗೆ ಫೋಟೋದಲ್ಲಿ ಬಂದರು ಎಂದುಕೊಳ್ಳಬೇಡಿ.. ಇದೊಂದು ನಿಜಕ್ಕೂ ಅದ್ಭುತ ಸಂಗತಿ.. ಅಡೆಲಿನ್ ನೆಲ್ಡಾ ಎಂಬುವರೇ ಆ ತಾಯಿ.. ಆಕೆ ತನ್ನ ನಾಲ್ಕನೇ ಮಗು ಹೊಟ್ಟೆಯಲ್ಲಿರುವಾಗಲೇ ಮಗು ಹುಟ್ಟಿದ ನಂತರ ಫ್ಯಾಮಿಲಿ ಫೋಟೋ ಶೂಟ್ ಮಾಡಿಸಬೇಕು ಎಂದು ಫೋಟೋಗ್ರಾಫರ್ ಜಾರಾ ಎಂಬುವವರನ್ನು ಸಂಪರ್ಕಿಸಿದ್ದರು.. ಇದಕ್ಕೆ ಜಾರಾ ಕೂಡ ಒಪ್ಪಿಕೊಂಡಿದ್ದರು.. ಡೆಲಿವರಿ ಆದ ನಂತರ ಫೋಟೋಶೂಟ್ ಮಾಡುವುದಾಗಿ ತಿಳಿಸಿದ್ದರು..

ಆದರೆ ದುರ್ವಿಧಿ ಅಡೆಲಿನ್ ಹೆರಿಗೆ ಸಮಯದಲ್ಲಿ ಮೃತಪಟ್ಟಿದ್ದಾಳೆ.. ಈಕೆ ಸತ್ತದ್ದು ಅವರ ಕುಟುಂಬಕ್ಕೆ ಮಾತ್ರವಲ್ಲದೆ ಫೋಟೋಗ್ರಾಫರ್ ಜಾರಾ ಅವರಿಗೂ ಬಹಳ ನೋವನ್ನುಂಟು ಮಾಡಿತ್ತು.. ಆದರೆ ಆಕೆಯ ಆಸೆ ಈಡೇರಲೇ ಬೇಕು ಎಂದು ಪಣತೊಟ್ಟ ಜಾರಾ.. 5 ತಿಂಗಳ ನಂತರ ಹೆಡಲಿನ್ ಕುಟುಂಬದ ಫೋಟೋಶೂಟ್ ಮಾಡುವುದಾಗಿ ತಿಳಿಸಿ.. ನಾಲ್ಕು ಮಕ್ಕಳು ಹಾಗೂ ಆ ತಂದೆಯ ಫೋಟೋಗಳನ್ನು ತೆಗೆದಿದ್ದಾರೆ..

ಅಷ್ಟೇ ಅಲ್ಲದೇ ಫೋಟೋಗಳಲ್ಲಿ ಜಾರಾ ಅವರ ಕೈಚಳಕದಿಂದ ಅಡೆಲಿನ್ ಅವರನ್ನು ಜೀವಂತವಾಗಿ ಉಳಿಸಿಕೊಂಡಿದ್ದಾರೆ.. ಹೌದು ಫೋಟೋಗಳಲ್ಲಿ ಅಡೆಲಿನ್ ಕೂಡ ಇರುವ ಹಾಗೆ ಜಾರಾ ಎಡಿಟ್ ಮಾಡಿದ್ದು.. ನಿಜಕ್ಕೂ ಈ ಫೋಟೋಗಳು ಮನಕಲಕುವಂತಿದೆ.. ಸ್ವರ್ಗದಿಂದಲೇ ಬಂದು ತನ್ನ ನಾಲ್ಕು ಮಕ್ಕಳಿಗೆ ಆಶೀರ್ವಾದ ಮಾಡಿದಂತಿವೆ..

ಜಾರಾ ಅವರ ಈ ಅದ್ಭುತ ಕೈಚಳಕ ಹಾಗೂ ಅವರ ಮಾನವೀಯತೆಗೆ ಇದೀಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದ್ದು.. ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ..

ಆ ತಾಯಿ ಇಲ್ಲದಿದ್ದರೂ ಆ ತಾಯಿಯ ಆಸೆ ಈಡೇರಿಸಿದ ಅಡೆಲಿನ್ ಅವರಿಗೆ ಧನ್ಯವಾದಗಳು..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ