ವಿಷ್ಣು ದಶಾವತಾರ ಹಾಗೂ ರಾಧಾ ಕಲ್ಯಾಣ ಧಾರಾವಾಹಿಗಳ ಮೂಲಕ ಮನೆಮಾತಾಗಿರುವ ಹ್ಯಾಂಡ್ಸಮ್ ಹುಡುಗ ಅಮಿತ್ ಕಶ್ಯಪ್ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ..

ಆದರೆ ಸಂಭ್ರಮ ಆಚರಿಸಬೇಕಾದ ನಟನೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.. ಹೌದು ನಟ ಅಮಿತ್ ಕಶ್ಯಪ್ ಅವರು ಡೆಂಗ್ಯೂ ಖಾಯಿಲೆಗೆ ತುತ್ತಾಗಿದ್ದು ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ..

ಇಂದು ಅವರ ಹುಟ್ಟು ಹಬ್ಬ ಆಗಿರುವುದರಿಂದ ಧೃತಿ ಕ್ರಿಯೇಶನ್ಸ್ ನ ದಿಲೀಪ್ ಅವರು ಖುದ್ದು ಆಸ್ಪತ್ರೆಗೆ ತೆರಳಿ ಅಮಿತ್ ಅವರ ಹುಟ್ಟು ಹಬ್ಬವನ್ನು ಅಲ್ಲಿಯೇ ಕೇಕ್ ಕಟ್ ಮಾಡಿಸುವ ಮೂಲಕ ಆಚರಿಸಿದ್ದಾರೆ..

ಈ ವಿಷಯವನ್ನು ಹಂಚಿಕೊಂಡಿರುವ ಅಮಿತ್ ಅವರು.. ತಮ್ಮ ಹುಟ್ಟುಹಬ್ಬಕ್ಕೆ ಶುಭಕೋರಿರುವ ಎಲ್ಲಾ ಸ್ನೇಹಿತರಿಗೂ ಧನ್ಯವಾದಗಳನ್ನ ತಿಳಿಸಿದ್ದಾರೆ.. ಹಾಸ್ಪಿಟಲ್ ಬೆಡ್ ಮೇಲೆ ಮಲಗಿ ಹುಟ್ಟುಹಬ್ಬದ ಶುಭಾಶಯಗಳನ್ನ ಓದುವಾಗ ಕೊಂಚ ಎಮೋಷನಲ್ ಆಗಿರುವ ಅಮಿತ್ ಅವರು ವಿಶ್ ಮಾಡಿದ ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ಧನ್ಯವಾದಗಳನ್ನ ತಿಳಿಸಲು ಸಾಧ್ಯವಾಗುತ್ತಿಲ್ಲ.. ಎಲ್ಲರಿಗೂ ಥ್ಯಾಂಕ್ಸ್.. ಇಲ್ಲಿಯವರೆಗೂ ಬಂದು ಹುಟ್ಟುಹಬ್ಬ ಆಚರಿಸಿದ ದಿಲೀಪ್ ಸರ್ ಹಾಗೂ ವಿದ್ಯಾ ಅವರಿಗೂ ಧನ್ಯವಾದಗಳನ್ನ ತಿಳಿಸಿದ್ದಾರೆ..

ಕಿರುತೆರೆಯ ನೆಚ್ಚಿನ ಹೀರೋ.. ಅಮಿತ್ ಅವರು ಆದಷ್ಟು ಬೇಗ ಗುಣಮುಖರಾಗಿ ತೆರೆಯ ಮೇಲೆ ಬರಲಿ.. ಎಲ್ಲರ ಶುಭ ಹಾರೈಕೆಗಳು ಸದಾ ನಿಮ್ಮನ್ನು ಕಾಪಾಡಲಿ.. ಎಲ್ಲಾ ಕನ್ನಡಿಗರ ಪರವಾಗಿ ಹುಟ್ಟು ಹಬ್ಬದ ಶುಭಾಶಯಗಳು ಬ್ರದರ್..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ