ಕಿರುತೆರೆಯ ಸೆನ್ಸೇಷನ್ ಜೊತೆಜೊತೆಯಲಿ ಧಾರಾವಾಹಿಯ ಹೈಲೈಟ್ ಗಳಲ್ಲಿ ಒಂದು ಎಂದರೆ ಅದು ಆರ್ಯವರ್ಧನ್ ರ ಸ್ಟೈಲಿಷ್ ಲುಕ್.. ಈಗಾಗಲೇ ಆರ್ಯವರ್ಧನ್ ರ ಸಾಲ್ಟ್ ಅಂಡ್ ಪೆಪ್ಪರ್ ಗಡ್ಡದ ಲುಕ್ ಟ್ರೆಂಡ್ ಸೆಟ್ ಮಾಡಿದ್ದರೆ.. ಇತ್ತ ಆರ್ಯವರ್ಧನ್ ರ ಡ್ರೆಸ್ಸಿಂಗ್ ಸ್ಟೈಲ್ ನಿಜಕ್ಕೂ ಅದ್ಭುತ..

ಮನವನ್ನು ಸೆಳೆಯುವ ಅನಿರುದ್ಧ್ ರ ಅಭಿನಯದ ಜೊತೆಗೆ ಕಣ್ಣನ್ನು ಸೆಳೆಯುವ ಅನಿರುದ್ಧ್ ಅವರ ಡ್ರೆಸ್ ಹಿಂದೆ ಒಬ್ಬ ಸ್ಪೆಷಲ್ ವ್ಯಕ್ತಿಯ ಕೈಚಳಕ ಇದೆ.. ಕೈಚಳಕ ಅನ್ನೋದಕ್ಕಿಂತ ಪ್ರೀತಿ ಇದೆ ಎನ್ನಬಹುದು.. ಹೌದು ಅನಿರುದ್ಧ್ ಅವರು ಧಾರಾವಾಹಿಯಲ್ಲಿ ಬಳಸುವ ಸಂಪೂರ್ಣ ಡ್ರೆಸ್ ಗಳನ್ನು ಒಬ್ಬ ಸ್ಪೆಷಲ್ ವ್ಯಕ್ತಿ ಡಿಸೈನ್ ಮಾಡುತ್ತಿದ್ದಾರೆ..

ಆ ಸ್ಪೆಷಲ್ ವ್ಯಕ್ತಿ ಮತ್ಯಾರೂ ಅಲ್ಲ.. ಅನಿರುದ್ಧ್ ಅವರೇ ಹೇಳುವಂತೆ ಅವರ ಮನೆ ಹಾಗೂ ಮನದ ದೇವತೆ ಕೀರ್ತಿ ವಿಷ್ಣುವರ್ಧನ್ ಅವರು.. ಹೌದು ಪ್ರತಿಯೊಂದು ಸೂಟ್ ಗಳನ್ನು ಹೀಗೀಗೆ ಇದ್ದರೆ ಚೆಂದವೆಂದು ಅದಕ್ಕಾಗೆ ಬಹಳಷ್ಟು ಸಮಯ ಕೊಟ್ಟು ಡಿಸೈನ್ ಮಾಡುತ್ತಿದ್ದಾರೆ.. ನಿನ್ನೆಯ ಸಂಚಿಕೆಯಲ್ಲಿ ಮೆರೂನ್ ಕಲರ್ ಸೂಟ್ ನಲ್ಲಿ ಆರ್ಯವರ್ಧನ್ ರ ಎಂಟ್ರಿಗೆ ಜನರು ಫಿದಾ ಆದರು.. ಈ ಬಗ್ಗೆ ಅವರ ಡ್ರೆಸ್ ಬಗ್ಗೆ ಅನಿರುದ್ಧ್ ಅವರ ಬಳಿ ಮಾತನಾಡುವಾಗ, ನನ್ನ ಡ್ರೆಸ್ಸಿಂಗ್ ಸ್ಟೈಲ್ ನ ಸಂಪೂರ್ಣ ಕ್ರೆಡಿಟ್ಸ್ ಕೀರ್ತಿ ವಿಷ್ಣುವರ್ಧನ್ ಅವರಿಗೆ ಸಲ್ಲಬೇಕು.. ನನ್ನದೇನೂ ಅಲ್ಲ ಎನ್ನುತ್ತಾರೆ ಅನಿರುದ್ಧ್ ಅವರು‌‌..

ಇನ್ನೂ ಹೇಳಬೇಕು ಎಂದರೆ ಕೀರ್ತಿ ವಿಷ್ಣು ವರ್ಧನ್ ಅವರು ವಿಷ್ಣುವರ್ಧನ್ ಅವರ ಮೋಜುಗಾರ ಸೊಗಸುಗಾರ ಸಿನಿಮಾದಿಂದ ಹಿಡಿದು ಟ್ರೆಂಡ್ ಸೆಟ್ ಮಾಡಿದ್ದ ಆಪ್ತಮಿತ್ರ ಕೋಟಿಗೊಬ್ಬ ಯಜಮಾನ ಸಿನಿಮಾ ಸೇರಿದಂತೆ 75ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿಷ್ಣುವರ್ಧನ್ ಅವರ ಡ್ರೆಸ್ ಡಿಸೈನ್ ಮಾಡಿದ್ದೂ ಕೂಡ ಇವರೇ.. ಆದರೆ ಸರಳ ವ್ಯಕ್ತಿತ್ವದ ಕೀರ್ತಿ ವಿಷ್ಣುವರ್ಧನ್ ಅವರು ಎಲ್ಲೂ ಹೆಚ್ಚಾಗಿ ಈ ಬಗ್ಗೆ ಪ್ರಚಾರ ಪಡೆಯುತ್ತಿರಲಿಲ್ಲ.. ಆಗ ವಿಷ್ಣುವರ್ಧನ್ ಅವರು ಈಗ ಆರ್ಯವರ್ಧನ್ ಅವರ ಸ್ಟೈಲಿಷ್ ಲುಕ್ ಗಳ ಮೂಲಕ ಕೀರ್ತಿ ವಿಷ್ಣುವರ್ಧನ್ ಅವರು ಕಾಣಿಸಿಕೊಳ್ಳುತ್ತಿದ್ದಾರೆನ್ನಬಹುದು..

ಕೀರ್ತಿ ವಿಷ್ಣುವರ್ಧನ್ ಅವರ ಈ ಸೇವೆಯನ್ನು ಗುರುತಿಸಿ ಕರ್ನಾಟಕ ಚಿತ್ರ ರಸಿಕರ ಸಂಘದ ವತಿಯಿಂದ ಗೌರವಿಸಲಾಗಿದೆ.. ಆಗ ವಿಷ್ಣುವರ್ಧನ್ ಅವರು ಈಗ ಆರ್ಯವರ್ಧನ್ ಅವರ ಸ್ಟೈಲಿಷ್ ಲುಕ್ ಹಿಂದೆ ಇರುವ ಕೀರ್ತಿ ವಿಷ್ಣುವರ್ಧನ್ ಅವರಿಗೆ ಕನ್ನಡಿಗರ ಪರವಾಗಿ ಧನ್ಯವಾದಗಳು..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ