ಸಾಹಸಸಿಂಹ ಡಾ.ವಿಷ್ಣುವರ್ಧನ್ ಹಾಗೂ ಅನಿರುದ್ಧ್ ಅಭಿಮಾನಿಗಳಿಗೆ ಇದು ನಿಜಕ್ಕೂ ಹೆಮ್ಮೆಯ ಸಂಗತಿ..

ಅನಿರುದ್ಧ್ ಅವರು ಅಭಿನಯಿಸಿರುವ ಜೊತೆಜೊತೆಯಲಿ ಧಾರಾವಾಹಿ ದಾಖಲೆ ಮೇಲೆ ದಾಖಲೆ ಬರೆಯುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ಮತ್ತೊಮ್ಮೆ ಅನಿರುದ್ಧ್ ಅವರು ದಾಖಲೆ ಬರೆದಿದ್ದಾರೆ. ಆದರೆ ಈ ಬಾರಿ ಧಾರಾವಾಹಿ ವಿಷಯಕ್ಕಲ್ಲ..

ಹೌದು ಧಾರಾವಾಹಿಗೂ ಬರುವ ಮುನ್ನ ಅನಿರುದ್ಧ್ ಅವರು ಏನು ಮಾಡುತ್ತಿದ್ದರು? ನೀವು ಬೇಗ ಧಾರಾವಾಹಿಗೆ ಬರಬಾರದಿತ್ತಾ ಸರ್ ಎಂದು ಬಹಳಷ್ಟು ಮಂದಿ ಕೇಳಿದ್ದೂ ಇದೆ.

ಆದರೆ ವಾಸ್ತವ ಬೇರೆಯೇ ಇದೆ.. ಬಹುಶಃ ಅನಿರುದ್ಧ್ ಅವರು ಹುಟ್ಟಿದ್ದೇ ದಾಖಲೆಗಳ ನಿರ್ಮಿಸೋದಕ್ಕೇನೋ‌ ಎನ್ನುವಂತಿದೆ. ಇದಕ್ಕೆ ಕಾರಣ ಅನಿರುದ್ಧ್ ಅವರು ಧಾರಾವಾಹಿಗೆ ಬರುವ ಮುನ್ನ ಮಾಡಿರುವ ಕೆಲಸಗಳು..

ಹೌದು ಅನಿರುದ್ಧ್ ಅವರು ಅದ್ಭುತ ನಟ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಈ ಅದ್ಭುತ ನಟನೊಳಗೆ ಒಬ್ಬ ಬುದ್ಧಿವಂತ ಬರಹಗಾರ ಮತ್ತು ನಿರ್ದೇಶಕನಿರುವ ವಿಚಾರ ಕೆಲವರಿಗಷ್ಟೇ ತಿಳಿದಿದೆ..

ಹೌದು ಅನಿರುದ್ಧ್ ಅವರು ತಾವೇ ಬರೆದು ನಿರ್ದೇಶಿಸಿರುವ ಸಾಮಾಜಿಕ ಕಳಕಳಿಯುಳ್ಳ ಕಿರು ಚಿತ್ರಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವುದಷ್ಟೇ ಅಲ್ಲದೆ ಅನಿರುದ್ಧ್ ಅವರ ಹೆಸರಿನಲ್ಲೀಗ ಹಲವಾರು ದಾಖಲೆಗಳು ನಿರ್ಮಾಣಗೊಂಡಿವೆ..

ಹೌದು ಕೀರ್ತಿ ಇನ್ನೋವೇಷನ್ ಅಡಿಯಲ್ಲಿ ಪತ್ನಿ ಕೀರ್ತಿ ವಿಷ್ಣುವರ್ಧನ್ ಅವರು ನಿರ್ಮಾಣ ಮಾಡಿರುವ ಅನಿರುದ್ಧ್ ಅವರು ಬರೆದು ನಿರ್ದೇಶಿಸಿರುವ ಸಾಮಾಜಿಕ ಕಳಕಳಿಯುಳ್ಳ ಕಿರುಚಿತ್ರಗಳಿಗಾಗಿ ಅನಿರುದ್ಧ್ ಅವರು ಒಂದಲ್ಲಾ ಎರಡಲ್ಲಾ ಬರೋಬ್ಬರಿ 5 ಕಲಾಂ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಕಲಾಂ ಗೋಲ್ಡನ್ ಅವಾರ್ಡ್, 4 ಏಷಿಯಾ ಬುಕ್ ಆಫ್ ರೆಕಾರ್ಡ್, ಒಂದು ಸ್ಪೆಷಲ್ ಏಷಿಯಾ ಬುಕ್ ಆಫ್ ರೆಕಾರ್ಡ್, 5 ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಅನ್ನು ಬಾಚಿಕೊಂಡಿರುವುದು ಕನ್ಮಡಿಗರು ಹೆಮ್ಮೆ ಪಡುವ ವಿಷಯವಾಗಿದೆ..

ಹೌದು ಕೀರ್ತಿ ಇನ್ನೋವೇಷನ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಅನಿರುದ್ಧ್ ಅವರು ತಾವೇ ಬರೆದು, ನಿರ್ದೇಶನ ಮಾಡಿರುವ 6 ಸಾಮಾಜಿಕ ಕಳಕಳಿಯುಳ್ಳ ಕಿರುಚಿತ್ರಗಳಿಗಾಗಿ ಅನಿರುದ್ಧ್ ಅವರ್ಯ್ ವಿವಿಧ ವಿಭಾಗಗಳಲ್ಲಿ ಈ ದಾಖಲೆಗಳನ್ನು ನಿರ್ಮಿಸಿದ್ದಾರೆ.

ಹೌದು ಈ ಎಲ್ಲಾ ಕಿರುಚಿತ್ರಗಳು 2018 ರ ಸೆಪ್ಟೆಂಬರ್ 18 ಅಂದರೆ ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ದಿನದಂದ್ಯ್ ಬಿಡುಗಡೆಯಾದವು. ಒಂದೇ ದಿನ ಇಷ್ಟು ಕಿರುಚಿತ್ರಗಳನ್ನು ಬಿಡುಗಡೆ ಮಾಡಿದ ಖ್ಯಾತಿಯೂ ಕೂಡ ಕೀರ್ತಿ ವಿಷ್ಣುವರ್ಧನ್ ಅವರಿಗೆ ಸಲ್ಲುತ್ತದೆ.

ಜೊತೆಗೆ ಎಲ್ಲಾ ಕಿರುಚಿತ್ರಗಳೂ ಕೂಡ ಸಾಮಾಜಿಕ ಕಳಕಳಿಯುಳ್ಳದ್ದಾಗಿದೆ. ಹಾಗೆಯೇ ಈ ಎಲ್ಲಾ ಕಿರುಚಿತ್ರಗಳಲ್ಲಿ ಯಾವುದೇ ಸಂಭಾಷಣೆ ಇಲ್ಲದೇ ಎಲ್ಲವೂ ವಿಭಿನ್ನ ಶೈಲಿಯಲ್ಲಿ ಚಿತ್ರೀಕರಣಗೊಂಡಿರುವುದು ಮತ್ತೊಂದು ವಿಶೇಷ..

ಇವಿಷ್ಟೇ ಅಲ್ಲದೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಬರೆದ ಟಾಪ್ 100 ರಲ್ಲಿ ಅನಿರುದ್ಧ್ ಅವರೂ ಕೂಡ ಒಬ್ಬರು.. ಅದರಲ್ಲೂ ಇವರು ನಮ್ಮ ಸಾಹಸಿಂಹನ ಅಳಿಯ ಅನ್ನೋದು ಮತ್ತೊಂದು ಸಂತೋಷದ ವಿಷಯ..

ಈ ಬಗ್ಗೆ ಅನಿರುದ್ಧ್ ಅವರ ಬಳಿ ಕೇಳಿದಾಗ.. “ಇವೆಲ್ಲಾ ಸಾಧ್ಯವಾಗಿದ್ದು ಅಪ್ಪಾವ್ರು ಡಾ.ವಿಷ್ಣುವರ್ಧನ್ ಅವರು ಹಾಗೂ ಇಡೀ ಕರ್ನಾಟಕ ಜನತೆಯ ಆಶೀರ್ವಾದದಿಂದ, ನನ್ನ ಸಂಪೂರ್ಣ ತಂಡ, ಕೀರ್ತಿಜಿ ಅವರು ಮತ್ತು ನನ್ನ ಕುಟುಂಬದ ಸಹಕಾರದಿಂದ.. ಈ ಎಲ್ಲಾ ದಾಖಲೆಗಳನ್ನು ನಾನು ಕನ್ನಡಿಗರಿಗೆ ಡೆಡಿಕೇಟ್ ಮಾಡಲು ಇಷ್ಟ ಪಡ್ತೇನೆ” ಎಂದು ಎಂದಿನಂತೆ ದೊಡ್ಡ ಮಾತುಗಳನ್ನಾಡಿ ಸರಳತೆ ಮೆರೆದರು..

ಅದೇನಾದರೂ ಆಗಲಿ ನಮ್ಮ ಹೆಮ್ಮೆಯ ಕನ್ನಡಿಗ ಅನಿರುದ್ಧ್ ಅವರಿಗೆ ಎಲ್ಲಾ ಕನ್ನಡಿಗರ ಪರವಾಗಿ ಅಭಿನಂದನೆಗಳು. ನಿಮ್ಮ ಈ ದಾಖಲೆಯ ಪಯಣ ಹೀಗೆ ಮುಂದುವರೆಯಲಿ… ಇನ್ನಷ್ಟು ರೆಕಾರ್ಡ್ ಗಳು ನಮ್ಮ ಕನ್ನಡಾಂಬೆಯ ಮಡಿಲು ಸೇರಲಿ ಎಂಬುದೇ ಕನ್ನಡಿಗರ ಹಾರೈಕೆ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ