ಕನ್ನಡದ ಪ್ರಖ್ಯಾತ ಶೋ ವೀಕೆಂಡ್ ವಿತ್ ರಮೇಶ್ ಸೀಸನ್ 4 ಮುಕ್ತಾಯಗೊಂಡಿದ್ದು.. ಕಾರ್ಯಕ್ರಮವನ್ನು ಅರ್ಥಪೂರ್ಣ ವಾಗಿ‌ ಮುಗಿಸುವ ಸಲುವಾಗಿ ಹತ್ತಾರು ಸಾಧಕರನ್ನು.. ಸಾಧನೆಯ ಹಾದಿಯಲ್ಲಿರುವ ಒಂದಷ್ಟು ಮಂದಿಯನ್ನು ಕೊನೆಯ ಸಂಚಿಕೆಯಲ್ಲಿ ಕರೆಸಿ.. ಯುವ ಸಮೂಹದೊಂದಿಗೆ ಒಂದಿಷ್ಟು ಚರ್ಚೆಯನ್ನು ಮಾಡಿದರು..

ಕರುನಾಡ ಕೋಟ್ಯಾನುಕೋಟಿ ಅಭಿಮಾನಿಗಳು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಕರುನಾಡ ಸಿಂಗಂ ಅಣ್ಣಾಮಲೈ ಅವರನ್ನು ಕರೆಸಬೇಕೆಂದು ಬಹಳ ಒತ್ತಾಯ ಮಾಡಿದ್ದರು.. ಅವರ ಆಸೆಯಂತೆಯೇ ಕೊನೆಯ ಸಂಚಿಕೆಯಲ್ಲಿ ಒಂದಿಷ್ಟು ಸಮಯ ಕಾರ್ಯಕ್ರಮಕ್ಕೆ ಬಂದು ಮಾತನಾಡಿದ್ದರು.. ಇದೇ ಸಮಯದಲ್ಲಿ ಇನ್ನು ಮೂರು ತಿಂಗಳಿನಲ್ಲಿ ಒಂದು ಸಂಸ್ಥೆಯನ್ನು ತೆರೆದು ಅದರ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳುವೆ ಎಂಬುದನ್ನೂ ಅವರು ಇದೇ ವೇದಿಕೆಯಲ್ಲಿ ತಿಳಿಸಿದರು..

ಮೂಲತಃ ತಮಿಳುನಾಡಿನವರಾದರು ಇಡೀ ಕರುನಾಡು ಅಣ್ಣಾಮಲೈ ಅವರ ಕಾರ್ಯವೈಖರಿಗೆ ತಲೆಬಾಗಿತ್ತು.. ಕಾರ್ಯಕ್ರಮದಲ್ಲಿ ಅಣ್ಣಾಮಲೈ ಅವರು ಬಹಳ ಅರ್ಥಪೂರ್ಣವಾದ ಮಾತುಗಳನ್ನಾಡಿದರು.. ಆ ಮಾತುಗಳು ನಿಜಕ್ಕೂ ನಮ್ಮ ಸರಕಾರಕ್ಕೆ ಸವಾಲ್ ಹಾಕಿದಂತೆ ಇತ್ತು..

ರಾಜ್ಯದಲ್ಲಿ ಬಹಳಷ್ಟು ಜನ ಆಲ್ಕೋಹಾಲ್ ಕುಡಿತಾರೆ.. ನಮ್ಮ ಸರ್ಕಾರಕ್ಕೆ ಆಲ್ಕೋಹಾಲ್ ನಲ್ಲಿ ಒಟ್ಟು 20 ಸಾವಿರ ಕೋಟಿ ರೂಪಾಯಿ ಆದಾಯ ಬರ್ತಿದೆ.. ಕಮರ್ಷಿಯಲ್ ಟ್ಯಾಕ್ಸ್ ನಿಂದ ಒಟ್ಟು 30 ಸಾವಿರ ಕೋಟಿ ರೂಪಾಯಿ ಆದಾಯ ತರ್ತಿದೆ.. ಕಮರ್ಷಿಯಲ್ ಟ್ಯಾಕ್ಸ್ ಮೊದಲ ಸ್ಥಾನದಲ್ಲಿದ್ದರೆ.. ಸರಕಾರಕ್ಕೆ ಎರಡನೇ ಅತಿ ಹೆಚ್ಚು ಆದಾಯ ಈ ಆಲ್ಕೋಹಾಲ್ ನಿಂದಲೇ ಬರುತ್ತಿದೆ.. ಇದರಿಂದ ಬಹಳಷ್ಟು ಮನೆಗಳಲ್ಲಿ ತೊಂದರೆ ಆಗ್ತಿದೆ..

ಒಂದು ಸ್ಟೇಟ್ ಡಿಸೈಡ್ ಮಾಡ್ಬೇಕು.. ರಾಜ್ಯವನ್ನ ನಡೆಸ್ತಾ ಇರೋ ಸರಕಾರ ಡಿಸೈಡ್ ಮಾಡ್ಬೇಕು.. ನಿಜಕ್ಕೂ ಇಷ್ಟು ಆದಾಯ ಆಲ್ಕೋಹಾಲ್ ನಿಂದ ಬೇಕಾ?? ಇದರಿಂದ ಸರಕಾರದ ಆದಾಯ ಕಡಿಮೆ ಆದರೂ ಜನರು ನೆಮ್ಮದಿ ಇಂದ ಇರ್ತಾರೆ.. ಜನರೇ ಶ್ರೀಮಂತರಾಗ್ತಾರೆ..
ಆದಾಯ ಇಲ್ಲದಿದ್ದರೆ ಸರಕಾರ ನಡೆಸೋದು ಕಷ್ಟ ನಿಜ… ಆದರೆ ಇದನ್ನೆಲ್ಲಾ ಪಬ್ಲಿಕ್ ಡಿಸೈಡ್ ಮಾಡಿ ಸರಕಾರಕ್ಕೆ ತಿಳಿಸಬೇಕು.. ನಮಗೆ ಇದು ಬೇಕಾ ಅಂತ..

ಅಣ್ಣಾಮಲೈ ಅವರು ಹೇಳಿದ ಮಾತುಗಳು ನಿಜಕ್ಕೂ ಅಕ್ಷರಶಃ ಸತ್ಯ.. ರಾಜ್ಯದಲ್ಲಿ ಆಲ್ಕೋಹಾಲ್ ನಿಷೇಧವಾದರೆ.. ಖಂಡಿತವಾಗಿಯೂ ಅದೆಷ್ಟೋ ಬಡ ಕುಟುಂಬಗಳು ನೆಮ್ಮದಿಯಾಗಿ ತಿಂಗಳ ಸಂಸಾರವನ್ನು ಸಾಗಿಸುತ್ತವೆ.. ಕುಡಿದು ಮಹಿಳೆಯರ ಮೇಲೆ ಆಗುವ ದೌರ್ಜನ್ಯವೂ ಕಡಿಮೆಯಾಗುತ್ತದೆ.. ಸರ್ಕಾರ ಈ ಬಗ್ಗೆ ಯೋಚಿಸಿದರೆ ಒಳ್ಳೆಯದು..

ಈ ರೀತಿ ಜನರಲ್ಲಿ ಸಾಮಾನ್ಯ ಜನರೂ ಕೂಡ ಯಾವುದೇ ಖರ್ಚಿಲ್ಲದೇ ಅರಿವು ಮೂಡಿಸುವ ಮೂಲಕ ಸೋಷಿಯಲ್ ವರ್ಕ್ ಮಾಡಬಹುದು ಎಂದು ಅಲ್ಲಿ ನೆರದಿದ್ದ ಯುವ ಸಮೂಹವಷ್ಟೇ ಅಲ್ಲದೇ ಇಡೀ ರಾಜ್ಯದ ಜನರಿಗೆ ಉತ್ಸಾಹ ತುಂಬಿದರು..

ನಿಜಕ್ಕೂ ಅಣ್ಣಾಮಲೈ ಅವರು ಸ್ಪೂರ್ತಿಯ ಸೆಲೆ ಎಂದೇ ಹೇಳಬಹುದು.. ಅವರಿಗಿರುವ ಆಲೋಚನೆಗಳು.. ಅವರಿಗೆ ಸಮಾಜದ ಮೇಲಿರುವ ಕಾಳಜಿ.. ನಿಜಕ್ಕೂ ಹ್ಯಾಟ್ಸ್ ಆಫ್ ಸರ್..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ