ಇಂದು ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮುದ್ದು ಕಂದ ಐರಾ ಅವರ ಮೊದಲ ವರ್ಷದ ಹುಟ್ಟುಹಬ್ಬ.. ಎಲ್ಲರೂ ಅಂದುಕೊಂಡಂತೆ ಯಶ್ ಇಂದು ಅದ್ಧೂರಿಯಾಗಿ ಮಗಳ ಹುಟ್ಟುಹಬ್ಬವನ್ನು ಆಚರಿಸಿದರು..

ಹೌದು ಸ್ಯಾಂಡಲ್ವುಡ್ ನ ಬಹುತೇಕ ಸೂಪರ್ ಸ್ಟಾರ್ ಗಳೆಲ್ಲರೂ ಐರಾ ಹುಟ್ಟುಹಬ್ಬದಲ್ಲಿ ಭಾಗಿಯಾದರು. ಭಾರತಿ ವಿಷ್ಣುವರ್ಧನ್ ಅವರು, ಸುಮಲತಾ ಅಂಬರೀಶ್ ಅವರು, ದರ್ಶನ್ ಅವರು, ಅನಿರುದ್ದ್ ಹಾಗೂ ಕೀರ್ತಿ ವಿಷ್ಣುವರ್ಧನ್, ದೃವ ಸರ್ಜಾ, ಅಭಿಷೇಕ್ ಅಂಬರೀಶ್ ಸೇರಿದಂತೆ ಬಹುತೇಕ ಎಲ್ಲಾ ಸಿನಿಮಾ ಸ್ನೇಹಿತರು ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿ ಪುಟ್ಟ ಕಂದನಿಗೆ ಶುಭ ಹಾರೈಸಿದರು..

ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಜೀವನದ ಸ್ಪೆಷಲ್ ಸಂದರ್ಭದಲ್ಲಿ ಎಲ್ಲಾ ವಿಚಾರಗಳನ್ನು ಅಭಿಮಾನಿಗಳಿಗೆ ತಿಳಿಸುವಾಗ ಕೊಂಚ ವಿಶೇಷವಾಗಿಯೇ ತಿಳಿಸುತ್ತಾ ಬಂದಿದ್ದರು.. ಐರಾ ಅವರ ಫೋಟೋ ಕೂಡ ಅಕ್ಷಯ ತೃತೀಯ ಹಬ್ಬದ ದಿನ ರಿವೀಲ್ ಮಾಡಿದ್ದರು.. ನಂತರ ಹೆಸರನ್ನೂ ಕೂಡ ವಿಶೇಷವಾಗಿ ಇಟ್ಟಿದ್ದರು..

ಅದಾದ ಬಳಿಕ ಎರಡನೇ ಮಗುವಿನ ವಿಚಾರವನ್ನು ಐರಾ ಮಾತುಗಳ ಮೂಲಕ ಹೇಳಿಸಿದ್ದೂ ಮತ್ತೂ ವಿಶೇಷವಾಗಿತ್ತು.. ಇದೀಗ ಮೊದಲ ವರ್ಷದ ಹುಟ್ಟು ಹಬ್ಬದ ಸಂಭ್ರಮವನ್ನು ಅದ್ಧೂರಿಯಾಗಿ ಏರ್ಪಡಿಸಿದ್ದು, ಆಪ್ತರು ಸಂಬಂಧಿಕರು ಹಾಗೂ ಯಶ್ ಮತ್ತು ರಾಧಿಕಾ ಅವರ ಕುಟುಂಬದ ಸದಸ್ಯರು ಮತ್ತು ಸಿನಿಮಾರಂಗದ ಆಪ್ತರು ಭಾಗಿಯಾಗಿದ್ದರು..

ಅದರಲ್ಲೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿರುತೆರೆಯ ಸೆನ್ಸೇಷನ್ ಆರ್ಯವರ್ಧನ್, ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧೃವ ಸರ್ಜಾ ಅವರು ಸದ್ಯ ತಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿಯೂ ಬಿಡುವು ಮಾಡಿಕೊಂಡು ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಹಾಜರಾಗಿ ಐರಾಗೆ ಶುಭ ಕೋರಿದ್ದು ವಿಶೇಷವಾಗಿತ್ತು.

ಅದರಲ್ಲೂ ಕಾರ್ಯಕ್ರಮದಲ್ಲಿ ಐರಾ ಹುಟ್ಟಿದ ದಿನದಿಂದ ಈಗಿನವರೆಗೆ ಕೆಲವೊಂದು ವಿಶೇಷ ಕ್ಷಣಗಳನ್ನು ವೀಡಿಯೋ ಮಾಡಿ ಅದನ್ನು ದೊಡ್ಡ ಪರದೆಯ ಮೇಲೆ ಬಂದ ಆಪ್ತರ ಮುಂದೆ ತೋರಿಸಿದ್ದು ಬಹಳ ಯಶ್ ಅವರ ಶೈಲಿಯಲ್ಲಿಯೇ ಇತ್ತೆನ್ನಬಹುದು..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ