ಇಂದು ಸ್ಯಾಂಡಲ್ವುಡ್ ನ ರಾಕಿಂಗ್ ಜೋಡಿ ರಾಧಿಕಾ ಹಾಗೂ ಯಶ್ ರ ಮುದ್ದು ಕಂದ ಐರಾಳ ಮೊದಲ ಹುಟ್ಟುಹಬ್ಬದ ಸಂಭ್ರಮ..

ಕಳೆದ 2018 ರ ಡಿಸೆಂಬರ್ 2 ರಂದು ರಾಕಿ ಬಾಯ್ ಮನೆಗೆ ಮುದ್ದು ಮಹಾಲಕ್ಷ್ಮಿಯ ಆಗಮನವಾಗಿತ್ತು.. ಇದೀಗ ಒಂದು ವರ್ಷ ಕಳೆದಿದ್ದು ಯಶ್ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿ ಹೋಗಿದೆ..

ರಾಧಿಕಾ ಪಂಡಿತ್ ಅವರು ಮದ್ಯರಾತ್ರಿಯಲ್ಲೇ ವಿಶೇಷ ಫೋಟೋವೊಂದನ್ನು ಹಾಕಿ ಮಗಳಿಗೆ ನನ್ನ ಹೃದಯದ ಒಂದು ಚೂರು ನೀನು, ನನ ಆತ್ಮದ ಭಾಗ ನೀನು.. ನನ್ನ ದೇವತೆಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ತಿಳಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು..

ಇದೀಗ ಯಶ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಮಗಳ ಜೊತೆಗಿನ, ಮಗಳನ್ನು ಆಕಾಶದೆತ್ತರಕ್ಕೆ ಕೈಚಾಚಿ ಎತ್ತಿಕೊಂಡಿರುವ ಸ್ಪೆಷಲ್ ಫೋಟೋವೊಂದನ್ನು ಹಂಚಿಕೊಂಡಿದ್ದು, ಮಗಳಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ..

ನೀನು ಬಂದ ಮೇಲೆ ಜೀವನ ಸಾಕಷ್ಟು ಬದಲಾಗಿದೆ.. ನಿನಗೆ ಅಪ್ಪನಾದ ಮೇಲೆ ನನ್ನೊಳಗಿನ ಮೃದು ಸ್ವಭಾವದ ವ್ಯಕ್ತಿತ್ವ ಆಚೆ ಬಂದಿದೆ.. ನೀನೆ ನನ್ಮ ಸ್ಟ್ರೆಂತ್, ನನ್ನ ವೀಕ್ನೆಸ್, ನನ್ನ ಪ್ರತಿಯೊಂದೂ ಕೂಡ ನೀನೆ.. ನನ್ನ ರಾಜಕುಮಾರಿಗೆ ಹುಟ್ಟು ಹಬ್ಬದ ಶುಭಾಶಯಗಳು.. ಎಂದು ಬರೆದು ಪೋಸ್ಟ್ ಮಾಡಿದ್ದಾರೆ..

ಯಶ್ ಅವರು ಹೇಳಿದ ಹಾಗೆ ಮಗಳ ಆಗಮನವಾದ ಮೇಲೆ ಕೆಜಿಎಫ್ ಸಿನಿಮಾ ಹಿಟ್ ಆಯಿತು.. ಯಶ್ ಅವರ ಸಿನಿ ಕೆರಿಯರ್ ನ ಬಹುದೊಡ್ಡ ತಿರುವು ಅದು ಎನ್ನಬಹುದು.. ಜೊತೆಗೆ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳು ಯಶ್ ಅವರನ್ನು ಹರಸಿ ಬಂದವು.. ಅಷ್ಟೇ ಅಲ್ಲದೆ ಮನೆಗೆ ಜೂನಿಯರ್ ರಾಕಿ ಬಾಯ್ ಆಗಮನವೂ ಆಯಿತು.. ಐರಾ ನಿಜಕ್ಕೂ ಯಶ್ ಮನೆಯ ಪುಟ್ಟ ಮಹಾಲಕ್ಷ್ಮಿ ಎಂದೇ ಹೇಳಬೇಕು.. ಹುಟ್ಟು ಹಬ್ಬದ ಶುಭಾಶಯಗಳು ಕಂದ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ