ಮೂರು ವರ್ಷದ ಹಿಂದೆ ಸಾವಿರಾರು ಕನಸು ಕಂಡು ಮದುವೆಯಾದಳು, ನನ್ನ ಸಂಸಾರ ಜೀವನ ಹೇಗೇಗೆಲ್ಲಾ ಇರಬಹುದು ಎಂದು ಆಸೆ ಇಟ್ಟುಕೊಂಡಿದ್ದಳು. ಆ ಜೋಡಿಗೆ ಮುದ್ದಾದ ಗಂಡು ಮಗುವೂ ಹುಟ್ಟಿತು. ಆದರೆ ಮೂರೇ ವರ್ಷಕ್ಕೆ ಪುಟ್ಟ ಕಂದನಿಗೆ ಮಗುವೇ ಕ್ಷಮಿಸು ಎಂದು ಪತ್ರ ಬರೆದು ಸಾಔಇನ ಮನೆಗೆ ಹೋಗಿಯೇ ಬಿಟ್ಟಳು ಈ ನತದೃಷ್ಟ ತಾಯಿ.

ಈಕೆಯ ಹೆಸರು ಮಂಜುಳಾ, ಸಾಯವ ವಯಸ್ಸಲ್ಲಾ ಸ್ವಾಮಿ, ಆಕೆಗೆ ಕೇವಲ ೨೭ ವರ್ಷ, ಮೂರು ವರ್ಷದ ಹಿಂದೆ ಗಿರೀಶ್ ಎಂಬುವವರನ್ನು ಮದುವೆಯಾಗಿದ್ದಳು. ಗಂಡ ಮಗು ಎಂದು ಸಂಸಾರ ಸುಖದ ಸಾಗರದಲ್ಲಿ ತೇಲಬೇಕಿತ್ತು. ಆದರೆ ದುರವಿಧಿ, ಜೀವನವೇ ಕೊನೆಯಾಗಿ ಹೋಯಿತು. ಆ ಮುದ್ದು ಕಂದ ಅನಾಥವಾಗಿ ಹೋಯಿತು.

ಮದುವೆಯಾಗಿ ಗಂಡನ ಆಶ್ರಯ ಬಯಸಿ ಬಂದವಳಿಗೆ ಸಿಕ್ಕಿದ್ದು ಗಂಡನ ಮನೆಯಲ್ಲಿ ಕಿರುಕುಳ, ಗಂಡ ಹಾಗೂ ಆತನ ಅಕ್ಕನಿಂದ ಪ್ರತಿದಿನ ವರದಕ್ಷಿಣೆಗಾಗಿ ಚಿತ್ರಂಹಿಂಸೆ ನಿಡುತ್ತಲೇ ಇದ್ದರು. ತಾಳುವಷ್ಟು ತಾಳಿ ಇದೀಗ ಸಾಧ್ಯವೇ ಇಲ್ಲವೆಂದು ನೇಣಿಗೆ ಕೊರಳೊಡ್ಡಿಯೇ ಬಿಟ್ಟಳು ಈ ತಾಯಿ.

ವರದಕ್ಷಿಣೆ ಎಂಬ ದಾಹ ಒಂದು ಕಡೆ, ಹಿಂಸೆ ತಾಳಲಾರದೆ ಬಾರದ ಲೋಕಕ್ಕೆ ಹೋದ ತಾಯಿ ಮತ್ತೊಂದು ಕಡೆ. ಈ ನಡುವೆ ಅನಾಥವಾಗಿದ್ದು ಮಾತ್ರ ಏನೂ ಅರಿಯದ ಎಳೇ ಕಂದ.

ಈ ಘಟನೆ ನಡೆದಿರುವುದು ಬೆಂಗಳುರಿನ ರಾಜರಾಜೇಶ್ವರಿನಗರದಲ್ಲಿ. ನೇಣಿಗೆ ಕೊರಳೊಡ್ಡುವ ಮುನ್ನ ಡೆತ್ ನೊಟ್ ಬರೆದಿಟ್ಟಿರುವ ಈಕೆ, ತನ್ನ ಗಂಡನ ಮನೆಯಲ್ಲಿ ನೀಡುತ್ತಿದ್ದ ಕಿರುಕುಳದ ಬಗ್ಗೆ ವಿವರಿಸಿದ್ದಾಳೆ. ಅಷ್ಟೇ ಅಲ್ಲದೆ ಅವರಿಗೆ ಕಾನೂನು ರೀತಿ ಶಿಕ್ಷೆಯಾಗಲಿ ಎಂದೂ ಕೂಡ ಬರೆದಿದ್ದಾಳೆ. ತನ್ನ ಮಗುವಿನ ಬಳಿ ಕ್ಷಮೆ ಕೇಳಿರುವ ಈಕೆಯ ಅಸಾಹಯಕತನ ನಿಜಕ್ಕೂ ಕರುಳು ಕಿತ್ತು ಬರುವಂತಿದೆ. ತನ್ನ ಮಗುವನ್ನು ನನ್ನ ತಂದೆ ತಾಯಿಗೆ ಕೊಡಿ, ಅಪ್ಪ ಅಮ್ಮ ನನ್ನ ಮಗುವನ್ನು ಚೆನ್ನಾಗಿ ನೊಡಿಕೊಳ್ಳಿ ಎಂದು ಬೇಡಿಕೊಂಡಿದ್ದಾಳೆ.

ಸದ್ಯ ಪೊಲೀಸರು ಗಿರೀಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅದೇನೆ ಆಗಲಿ ಆ ಕಂದನಿಗೆ ತಾಯಿ ಪ್ರೀತಿ ಕೊಡಲು ಯಾರಿಂದ ಸಾಧ್ಯ? ಬದುಕಿರುವಷ್ಟು ದಿನ ಅಮ್ಮನಿಲ್ಲದ ನರಕಯಾತನೆ ಆ ಕಂದ ಅನುಭವಿಸುವುದಾದರೂ ಹೇಗೆ? ದಯವಿಟ್ಟು ಯಾರೂ ಕೂಡ ಹೆಂಡತಿ ಮಕ್ಕಳ ನೋಯಿಸಬೇಡಿ. ಒಮ್ಮೆ ಹೋದ ಜೀವ ಮತ್ತೆ ಬಾರದು. ಅಮ್ಮನನ್ನು ಕಳೆದುಕೊಂಡ ಆ ಮಗುವಿನ ಕಷ್ಟ ನಿಜಕ್ಕೂ ಅನುಭವಿಸಿದವರಿಗೆ ಮಾತ್ರವೇ ಗೊತ್ತು. ಹಾಗೆಯೇ ಕಷ್ಟ ಎಂದು ಯಾವ ತಾಯಿಯೂ ದುಡುಕಿ ಇಂತಹ ನಿರ್ಧಾರ ತೆಗೆದುಕೊಳ್ಳಬೇಡಿ, ಮಕ್ಕಳನ್ನು ಅನಾಥರನ್ನಾಗಿ ಮಾಡಬೇಡಿ.

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ