ಬಿಗ್ ಬಾಸ್ ಮನೆಯಲ್ಲಿ ವಾರಪೂರ್ತಿ ಟಾಸ್ಕ್ ಇಲ್ಲದ ಸನಯದಲ್ಲಿ ಸುಮ್ಮನೆ ಡ್ರೆಸ್ ಮಾಡಿಕೊಂಡು ನಿಲ್ಲೋದು, ಕೂರೋದು ಕಾಮನ್.. ಆದರೆ ನಿನ್ನೆ ಆದ ಪಜೀತಿ ಮಾತ್ರ ನೋಡುಗರಿಗೆ ಹೊಟ್ಟೆ ಉಣ್ಣಾಗುವಷ್ಟು ನಗುವಂತೆ ಮಾಡಿದೆ..

ಹೌದು ಬಿಗ್ ಬಾಸ್ ಮನೆಯಲ್ಲಿ ಸದಾ ನೀಟ್ ಆಗಿ ರೆಡಿ ಆಗೋ ದೀಪಿಕಾ ಹಾಗೂ ಆಗಾಗ ರೆಡಿ ಆಗೋ ಪ್ರಿಯಾಂಕ ಅವರು ನಿನ್ನೆ ದೊಡ್ಡ ಪಜೀತಿ ಪಟ್ಟಿದ್ದಾರೆನ್ನಬಹುದು‌‌..

ನಿನ್ನೆ ದೀಪಿಕಾ ಹಾಗೂ ಪ್ರಿಯಾಂಕ ಇಬ್ಬರು ಮಂಡಿಗಿಂತ ಮೇಲೆ ಕಾಣುವಂತ ಅತೀ ಉದ್ದದ ಬಟ್ಟೆಯನ್ನು ಧರಿಸಿ ಅಲ್ಲಿಂದಿಲ್ಲಿಗೆ ಓಡಾಡುತ್ತಾ ನಿಂತಿದ್ದರು.. ಬಟ್ಟೆ ಅವರವರ ಇಚ್ಛೆ ಹಾಕಿಕೊಳ್ಳಲಿ.. ಅದು ಅವರಿಷ್ಟ.. ಆದರೆ ಪಾಪ ಅವರಿಬ್ಬರು ಪಡುತ್ತಿದ್ದ ಪಾಡು ಮಾತ್ರ ನೋಡಲಾಗುತ್ತಿರಲಿಲ್ಲ.. ಲಿವಿಂಗ್ ಏರಿಯಾದಲ್ಲಿ ಕ್ಯಾಪ್ಟನ್ ಶೈನ್ ಟಾಸ್ಕ್ ವಿಚಾರವಾಗಿ ತಿಳಿಸುವಾಗ ಲಿವಿಂಗ್ ಏರಿಯಾದಲ್ಲಿ ಕೂರಬೇಕಾದ ಸಂದರ್ಭ ಬಂದಾಗ ದೀಪಿಕಾ ಹಾಗೂ ಪ್ರಿಯಾಂಕ ಹುಡುಕಿ ತಡಕಿ ಎರಡು ದಿಂಬುಗಳನ್ನು ತಂದು ಅದನ್ನು ತಮ್ಮ ಮಂಡಿ ಮೇಲಿಟ್ಟುಕೊಂಡು ಕುಂತರು..

ಅದು ಹೋಗಲಿ ಆನಂತರ ಮನೆಯ ಸದಸ್ಯರು ಎರಡು ತಂಡಗಳಾದಾಗ.. ಪ್ರಿಯಾಂಕ ಹಾಗೂ ದೀಪಿಕಾ ಇಬ್ಬರೂ ವಾಸುಕಿ ತಂಡಕ್ಕೆ ಸೇರಿದರು.. ಆ ಸಮಯದಲ್ಲಿ ವಾಸುಕಿ ಬೆಡ್ ರೂಮ್ ಏರಿಯಾದಲ್ಲಿ ಗೇಮ್ ಪ್ಲಾನ್ ಮಾಡುವ ಸಮಯದಲ್ಲಿ ದೀಪಿಕಾ ಹಾಗೂ ಪ್ರಿಯಾಂಕ ಅಲ್ಲಿ ಕೂರುವ ಸಲುವಾಗಿ ಬೆಡ್ ಶೀಟ್ ಗಳನ್ನೆ ಎಳೆದು ಕಷ್ಟಪಟ್ಟು ಅದನ್ನು ಸುತ್ತಿಕೊಂಡು ಕೂತದ್ದಾಯಿತು..

ಇದಾದ ನಂತರ ಮತ್ತೆ ಶೈನ್ ಜೊತೆ ದೀಪಿಕಾ ಅಡುಗೆ ಮನೆಯಲ್ಲಿ ಮಾತನಾಡುತ್ತಾ ಹೋಗುವಾಗ ಕಾಲು ಸ್ಲಿಪ್ ಆಗಿ ಸಧ್ಯ ಅಲ್ಲೇ ಜಾರಿ ಕಪಾಟಿನ ಸಹಾಯ ಪಡೆದು ನಿಂತರು.. ಗಾಭರಿಗೊಂಡ ದೀಪಿಕಾ ಅವರ ಬಾಯಲ್ಲೇ.. “ಅಯ್ಯೋ ಶೈನ್ ನಾನೇನಾದರೂ ಈಕಡೆ ಬಿದ್ದಿದ್ದರೆ.. ನನ್ನ ಕತೆ ಏನಾಗಿರೋದು.. ನನ್ನ ಬಟ್ಟೆ ಕತೆ ಏನಾಗಿರೋದು” ಎಂದರು..

ಇದೆಲ್ಲವನ್ನು ನೋಡಿದ ಪ್ರೇಕ್ಷಕರ ಮನಸ್ಸಿನಲ್ಲಿ ಮೂಡುವ ಪ್ರಶ್ನೆ ಎಂದರೆ.. ತುಂಡು ಬಟ್ಟೆ ಹಾಕಿಕೊಂಡು ಈ ರೀತಿ ಕಷ್ಟ ಪಡೋದೇಕೆ ಅಂತ.. ಅವರಿಷ್ಟ ಹಾಕಿಕೊಳ್ಳಲಿ.. ಆದರೆ ಕನಿಷ್ಟಪಕ್ಷ ಜಾರಿ ಗೀರಿ ಬಿದ್ದಾಗ ಅವರಿಗೆ ಮುಜುಗರ ಆಗದಷ್ಟು ಉದ್ದದ ಬಟ್ಟೆಯನ್ನಾದರೂ ಹಾಕಿಕೊಂಡರೆ ಅವರಿಗೂ ಒಳ್ಳೆಯದು.. ಫ್ಯಾಮಿಲಿ ಸಮೇತ ಕೂತು ಬಿಗ್ ಬಾಸ್ ನೋಡುವ ಪ್ರೇಕ್ಷಕರಿಗೂ ಯಾವುದೇ ಮುಜುಗರ ಆಗುವುದಿಲ್ಲ.. ಅದನ್ನು ಬಿಟ್ಟು ಮೂರು ಹೊತ್ತು ಬೆಡ್ ಶೀಟ್ ಸುತ್ತಿಕೊಂಡು..‌ ದಿಂಬನ್ನು ಇಟ್ಟುಕೊಂಡು ಓಡಾಡುತ್ತಿದ್ದರೆ ಏನ್ ಚಂದ.. ಎನ್ನೋದು ವೀಕ್ಷಕರ ಅಭಿಪ್ರಾಯ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ