ಮಕ್ಕಳು ಎಷ್ಟೇ ಬೆಳೆದು ದೊಡ್ಡವರಾದರೂ ಸರಿಯೇ ತಾಯಿಗೆಂದೂ ಅವರು ಸಣ್ಣ ಮಕ್ಕಳೇ.. ಬಿಗ್ ಬಾಸ್ ಮನೆಯ ಜರ್ನಿ ಶುರುವಾಗಿ 8 ವಾರಗಳು ಕಳೆದಿವೆ..

ಮನೆಯವರನ್ನೆಲ್ಲಾ ಬಿಟ್ಟು ಬಂದರೂ ಗಟ್ಟಿಯಾಗಿದ್ದ ಶೈನ್ ಇಂದು ಬಿಕ್ಕಿ ಬಿಕ್ಕಿ ಅತ್ತಿದ್ದು ನಿಜಕ್ಕೂ ನೋಡುಗರ ಮನಸ್ಸೇಕೋ ಭಾರವಾದಂತೆ ಭಾಸವಾಯಿತೆನ್ನಬಹುದು..

ಇದಕ್ಕೆ ಕಾರಣ ಶೈನ್ ಶೆಟ್ಟಿ ಅವರ ತಾಯಿ ಬರೆದ ಪತ್ರ.. ಹೌದು ಈ ವಾರ ಮನೆಯವರಿಂದ ಬಂದ ಪತ್ರಗಳನ್ನು ಬಿಗ್ ಮನೆಯ ಸದಸ್ಯರಿಗೆ ನೀಡಲಾಗಿತ್ತು.. ನಿನ್ನೆ ಶೈನ್ ಅವರಿಗೂ ಪತ್ರ ಬಂತು..

ಮೊದ ಮೊದಲಿಗೆ ಪತ್ರ ತೆರೆಯುವ ವರೆಗೂ ಮನಸ್ಸನ್ನು ಗಟ್ಟಿ ಮಾಡಿಕೊಂಡು ಕೂತಿದ್ದ ಶೈನ್ ಶೆಟ್ಟಿ.. ಪತ್ರ ಓದಿ ಒಂದೆರೆಡು ಸಾಲುಗಳಿಗೆ ಕಣ್ಣೀರಿಡಲು ಶುರು ಮಾಡಿದರು.. ಅಮ್ಮ ಬರೆದ ಸಾಲುಗಳು ಬಿಕ್ಕಿ ಬಿಕ್ಕಿ ಅಳುವಂತೆ ಮಾಡಿದವು..

ಹೌದು ಶೈನ್ ಅವರು ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ಬಹಳಷ್ಟು ಕಷ್ಟ ಪಟ್ಟಿದ್ದರು.. ಧಾರಾವಾಹಿ ಬಿಟ್ಟ ಬಳಿಕ ಬಹಳ ಸಾಲ ಮಾಡಿಕೊಂಡು.. ಆನಂತರ ಜೀವನಕ್ಕೆ ಒಂದು ದಾರಿ ಹುಡುಕಲೇ ಬೇಕು ಎಂದು ಫುಡ್ ಟ್ರಕ್ ಅನ್ನು ತೆರೆದಿದ್ದರು..

ಕಿರುತೆರೆಯಲ್ಲಿ ಮಿಂಚುತ್ತಿದ್ದಾಗ ಕೈ ತುಂಬಾ ಹಣ ಇದ್ದಾಗ ಎಲ್ಲಾ ಸ್ನೇಹಿತರೂ ಇದ್ದರು.. ಆದರೆ ಜೀವನ ಕೈಕೊಟ್ಟಾಗ ಇದ್ದದ್ದು ಮಾತ್ರ ಶೈನ್ ಅವರ ತಂದೆ ತಾಯಿ.. ಅದರಲ್ಲೂ ತನ್ನ ತಾಯಿ ಶೈನ್ ಅವರ ಪ್ರತಿಯೊಂದು ಕಷ್ಟಗಳನ್ನು ನೋಡಿ ಕಣ್ಣೀರಿಟ್ಟಿದ್ದರು..

ಪತ್ರದಲ್ಲಿ ಇದನ್ನೇ ಬರೆದಿದ್ದರು.. “ನೀನು ಹೊರಗೆ ಕಷ್ಟ ಪಟ್ಟಿದ್ದು ಸಾಕು ಮಗ.. ಮನೆಯೊಳಗೆ ಖುಷಿಯಾಗಿರು.. ಇನ್ನು ಮುಂದೆ ನಿನ್ನ ಕಷ್ಟಗಳೆಲ್ಲಾ ಹೊರಟೋಗಲಿ.. ಹೊಟೆಲ್ ಬಗ್ಗೆ ಯೋಚಿಸಬೇಡ.. ನೀನು ಬಿಗ್ ಬಾಸ್ ಮನೆಗೆ ಹೋದ ಮೇಲೆ ಹೋಟೆಲ್ ತುಂಬಾ ಚೆನ್ನಾಗಿ ನಡಿತಿದೆ.. ಅಮ್ಮನಿಗೆ ಕೆಲಸ ಜಾಸ್ತಿ ಆಯ್ತು ಅಂತ ನೀನು ಯೋಚಿಸಬೇಡ.. ಇವೆಲ್ಲಾ ಪರವಾಗಿಲ್ಲ.. ನಾನು ಮಾಡುತ್ತೇನು.. ನೀನು ಸಂತೋಷವಾಗಿದ್ದರೆ ಸಾಕು..” ಹೀಗೆ ಪತ್ರದ ತುಂಬೆಲ್ಲಾ ಮಗನ ಕಾಳಜಿ ಸಂತೋಷದ ಬಗ್ಗೆಯೇ ಬರೆದಿದ್ದ ತಾಯಿಯ ಮಮತೆ ಕಂಡು ಕಣ್ಣೀರಿಟ್ಟರು..

ಶೈನ್ ಅವರು ಮೊದಲೆ ಹೇಳಿದಂತೆ.. ಎಲ್ಲವೂ ಇದ್ದಾಗ ಇದ್ದ ಸ್ನೇಹಿತರು ಯಾರೂ ಈಗ ನನ್ನ ಜೊತೆ ಇಲ್ಲ.. ನಾನು ಬಿಗ್ ಬಾಸ್ ಮನೆಗೆ ಬಂದ ನಂತರ ನನ್ನ ಅಮ್ಮನೇ ಈಗ ಫುಡ್ ಟ್ರಕ್ ನೋಡಿಕೊಳ್ಳಬೇಕು..‌ ಎಂದಿದ್ದರು..

ಅದರಂತೆ ಮಗ ಬಿಗ್ ಬಾಸ್ ಮನೆಗೆ ಹೋದ ನಂತರ ಶೈನ್ ಅವರ ತಾಯಿಯೇ ಫುಡ್ ಟ್ರಕ್ ಅನ್ನು ನೋಡಿಕೊಳ್ಳುತ್ತಿದ್ದು, ಮಗನ ಬೆನ್ನೆಲುಬಾಗಿ ನಿಂತಿದ್ದಾರೆ ಎನ್ನಬಹುದು..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ