ಬಿಗ್ ಬಾಸ್ ನ ಈ ಸೀಸನ್ ನ ಸ್ಪರ್ಧಿಗಳಿಗೆ ಮೊದಲ ವಾರ ಇದ್ದ ಮಾನವೀಯತೆ ಮನುಷ್ಯತ್ವ ಅದ್ಯಾಕೋ ಬರುಬರುತ್ತಾ ಕಡಿಮೆ ಆಗೋದಿರಲಿ ಸಂಪೂರ್ಣ ಬತ್ತಿಹೋದಂತೆ ಕಾಣುತ್ತಿದೆ.

ಹೌದು ಈ ಬಗ್ಗೆ ಇದಾಗಲೇ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದ್ದು, ಎಲ್ಲರೂ ಕೂಡ ಇವರ ನಡವಳಿಕೆಯನ್ನು ಟೀಕಿಸಿದ್ದಾರೆ. ಇದೆಲ್ಲಾ ಮಾತಿಗೆ ಕಾರಣ ಮನೆಯ ಕೆಲ ಸದಸ್ಯರು ಚಂದನ ವಿಷಯದಲ್ಲಿ ನಡೆದುಕೊಂಡ ರೀತಿ..

ಹೌದು ಈ ವಾರ ಬಿಗ್ ಬಾಸ್ ಮನೆಯಲ್ಲಿ ನಡೆಯುತ್ತಿರುವ ರಣರಂಗ ಟಾಸ್ಕ್ ನ ಭಾಗವಾಗಿ ನಿನ್ನೆ ನಡೆದ ಹಗ್ಗ ಹಿಡಿದು ನಿಲ್ಲುವ ಟಾಸ್ಕ್ ನಲ್ಲಿ ಮನೆಯ ಕೆಲ ಸದಸ್ಯರು ನಿಜಕ್ಕೂ ಅತ್ಯಂತ ಕೀಳು ಮಟ್ಟದಲ್ಲಿ ನಡೆದುಕೊಂಡರೆನ್ನಬಹುದು..

ದೀಪಿಕಾ ಹಾಗೂ ಭೂಮಿ ಇಬ್ಬರ ತಂಡದ ಸದಸ್ಯರೂ ಹಗ್ಗ ಹಿಡಿದು ನಿಂತ ಸಮಯದಲ್ಲಿ ಅವರಿಗೆ ಕೆಳಗೆ ಇದ್ದ ಸದಸ್ಯರು ನೀರು ಎರಚುವ ಮೂಲಕ ಕೆಳಗೆ ಇಳಿಸಲು ಪ್ರಯತ್ನ ಮಾಡಬಹುದಿತ್ತು..

ಆದರೆ ಅದನ್ನೇ ದೊಡ್ಡದಾಗಿ ಸ್ವೀಕರಿಸಿದ ಕೆಲವರು ಹಗ್ಗ ಹಿಡಿದು ನಿಂತಿದ್ದ ಚಂದನ ಮೇಲೆ ಬಕೆಟ್ ಗಟ್ಟಲೆ ನೀರನ್ನು ಮುಖಕ್ಕೆ ರಾಚಿದ ರೀತಿ ಬಹುಶಃ ಯಾವ ಪ್ರಾಣಿಯನ್ನೂ ಕೂಡ ಆ ರೀತಿ ನಡೆಸಿಕೊಳ್ಳುವುದಿಲ್ಲ ಎನ್ನುವಂತಿತ್ತು.. ಈ ವಿಷಯ ಮನೆಯ ಕ್ಯಾಪ್ಟನ್ ಹರೀಶ್ ರಾಜ್ ಅವರ ಗಮನಕ್ಕೆ ಬಂದರೂ ಕೂಡ ಏನೂ ಮಾಡುವಂತಿರಲಿಲ್ಲ..

ಹಗ್ಗ ಹಿಡಿದು ಬಹಳಷ್ಟು ಗಂಡಸರು ನಿಂತಿದ್ದರೂ ಕೂಡ ಅವರುಗಳನ್ನು ಬೀಳಿಸುವ ಪ್ರಯತ್ನ ಮಾಡದೇ, ಅವರನ್ನು ಬೀಳಿಸಲು ನಮ್ಮ ಕೈನಲ್ಲಿ ಆಗಲ್ಲ ಎಂದುಕೊಂಡು ಕೇವಲ ಚಂದನ ರನ್ನು ಟಾರ್ಗೆಟ್ ಮಾಡಿದ್ದು ಮನೆಯ ಮಿಕ್ಕ ಸದಸ್ಯರಿಗೇ ಅಸಹ್ಯ ಎನಿಸಿದೆ..

ಇವರ ನೀರೆರೆಚಾಟ ತಡೆಯಲಾಗದೆ ಕೊನೆಗೆ ಚಂದನ ಕೆಳಗೆ ಇಳಿದದ್ದು ಮಾತ್ರವಲ್ಲ ಮನೆಯ ಒಂದು ಕ್ಯಾಮರಾ ಕೂಡ ಸಂಪೂರ್ಣ ಕೆಟ್ಟು ಹೋಗಿದ್ದು, ಇಂದು ಬಿಗ್ ಬಾಸ್ ಅದೇ ಕ್ಯಾಮರಾದ ಫೋಟೋಗೆ ಹಾರ ಹಾಕಿ ಮನೆಗೆ ಕಳುಹಿಸಿಕೊಟ್ಟಿದ್ದು, ಜೈಜಗದೀಶ್ ಅವರು ಮತ್ತು ರಾಜು ತಾಳಿಕೋಟೆ ಅವರು ಪ್ರತಿ ಕ್ಯಾಮರಾದ ಬಳಿಯೂ ಹೋಗಿ ಮಾಡಿದ್ದು ತಪ್ಪಾಯ್ತು ಎಂದು ಕ್ಷಮೆ ಕೇಳಿಯೂ ಆಯಿತು‌..

ಈ ಕುರಿತು ಮನೆಯಲ್ಲೇ ಮಿಕ್ಕೆಲ್ಲಾ ಸದಸ್ಯರ ನಡುವೆ ಚರ್ಚೆ ನಡೆದಿದ್ದು ಚಂದನಾಗೆ ರಾಜು ತಾಳಿಕೋಟೆ ಅವರು ಮಾಡಿದ್ದು ಸರಿ ಅಲ್ಲ ಎನ್ನುವ ಅಭಿಪ್ರಾಯ ಮೂಡಿದೆ.. ಟಾಸ್ಕ್ ನಲ್ಲಿ ಆಡಬೇಕು ನಿಜ‌‌.. ಆದರೆ ಮಾನವೀಯತೆಯನ್ನೇ ಮರೆತು ಆಡಿ ಎಂದು ಯಾರೂ ಹೇಳುವುದಿಲ್ಲ.. 98 ದಿನಗಳ ಇರುವಿಕೆಗಾಗಿ ಇಷ್ಟು ವರ್ಷದ ವ್ಯಕ್ತಿತ್ವವನ್ನೇ ಕಳೆದುಕೊಳ್ಳುತ್ತಿದ್ದಾರಾ ಎಂಬ ಪ್ರಶ್ನೆ ಪ್ರೇಕ್ಷಕನಲ್ಲಿ ಮೂಡುವುದು ಸಹಜ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ