ಇನ್ನೇನು ಕೆಲವೇ ದಿನಗಳಲ್ಲಿ ಕನ್ನಡದ ಬಿಗ್ ಬಾಸ್ ಸೀಸನ್ 7 ಪ್ರಾರಂಭವಾಗಲಿದ್ದು, ಈಗಾಗಲೇ ಸಂಭಾವ್ಯ ಸ್ಪರ್ಧಿಗಳ ಪಟ್ಟಿ ಹರಿದಾಡುತ್ತಿದೆ.

ಇನ್ನು ಬಿಗ್ ಬಾಸ್ ಮನೆಗೆ ಕನ್ನಡದ ಪ್ರಖ್ಯಾತ ಹಾಸ್ಯ ನಟರೊಬ್ಬರ ಎಂಟ್ರಿ ಪಕ್ಕಾ ಆಗಿದ್ದು, ಬಿಗ್ ಬಾಸ್ ಮನೆಯಲ್ಲಿ ಈ ಬಾರಿ ಮನರಂಜನೆ ಕನ್ಫರ್ಮ್ ಆಗಿ ಸಿಗಲಿದೆ ಎನ್ನಬಹುದು.

ಹೌದು ಈ ಬಾರಿ ಕುರಿ ಪ್ರತಾಪ್ ಅವರು ಬಿಗ್ ಬಾಸ್ ಮನೆ ಪ್ರವೇಶಿಸಲಿದ್ದಾರೆ. ಈ ಬಗ್ಗೆ ಬಲ್ಲ ಮೂಲಗಳಿಂದ ಮಾಹಿತಿ ದೊರೆತಿದ್ದು, ಅಕ್ಟೋಬರ್ 13 ರಿಂದ ಬಿಗ್ ಬಾಸ್ ಮನೆಯಲ್ಲಿ ಕುರಿ ಪ್ರತಾಪ್ ಅವರನ್ನು ನೋಡಬಹುದಾಗಿದೆ.

ಈಗಾಗಲೇ ಮಜಾ ಟಾಕೀಸ್ ನಲ್ಲಿ ಮೋಡಿ ಮಾಡಿರುವ ಕುರಿ ಪ್ರತಾಪ್ ಅವರ ಕಾಮಿಡ್ ಸೆನ್ಸ್ ಎಲ್ಲರಿಗೂ ಇಷ್ಟವಾಗಿದ್ದು, ಬಿಗ್ ಬಾಸ್ ಮನೆಯಲ್ಲಿ ಕುರಿ ಪ್ರತಾಪ್ ಅವರನ್ನು ನೋಡಲು ಕೌತುಕರಾಗಿದ್ದಾರೆ ಎನ್ನಬಹುದು. ಕುರಿ ಪ್ರತಾಪ್ ಅವರು ಕಳೆದ ಸೀಸನ್ ನಲ್ಲಿಯೇ ಬಿಗ್ ಬಾಸ್ ಮನೆಗೆ ಹೋಗಬೇಕಾಗಿತ್ತು. ಆದರೆ ಮಜಾ ಟಾಕೀಸ್ ನಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದ ಕುರಿ ಪ್ರತಾಪ್ ಅವರು ಬಿಗ್ ಬಾಸ್ ಮನೆಗೆ ಹೋಗಿದ್ದರೆ ಮಜಾ ಟಾಕೀಸಿಗೆ ಹೊಡೆತ ಬೀಳಬಹುದೆಂಬ ಲೆಕ್ಕಾಚಾರದಿಂದ ಕಳೆದ ಸೀಸನ್ ನಲ್ಲಿ ಕುರಿ ಪ್ರತಾಪ್ ಅವರಿಗೆ ಅವಕಾಶ ಸಿಕ್ಕಿರಲಿಲ್ಲ.

ಆದರೆ ಈಗ ಮಜಾ ಟಾಕೀಸ್ 500 ಸಂಚಿಕೆ ಪೂರ್ಣಗೊಂಡ ಕಾರಣ ಮಜಾ ಟಾಕೀಸ್ ಗೆ ಅಲ್ಪ ವಿರಾಮ ಹಾಕಿ ಶೋ ಅನ್ನು ಮುಗಿಸಲಾಗಿದೆ. ಆದ ಕಾರಣ ಇದೀಗ ಕುರಿ ಪ್ರತಾಪ್ ಅಬರು ಇನ್ನುಮುಂದೆ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಸಿನಿ ಮೂಲಗಳ ಪ್ರಕಾರ ಕುರಿ ಪ್ರತಾಪ್ ಅವರಿಗೆ ವಾರಕ್ಕೆ ಒಂದು ಲಕ್ಷ ರೂಪಾಯಿ ಸಂಭಾವನೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ