ಬಿಗ್ ಬಾಸ್ ದೊಡ್ಡ ಮನಸ್ಸು ಮಾಡಿ ಚೈತ್ರಾ ಕೊಟ್ಟೂರಿಗೆ ಎರಡನೇ ಅವಕಾಶ ಕೊಟ್ಟಿದ್ದೇ ತಪ್ಪಾಯ್ತಾ ಅಂತ ಪ್ರೇಕ್ಷಕರಿಗೆ ಮಾತ್ರವಲ್ಲ ಬಿಗ್ ಬಾಸ್ ಸದಸ್ಯರಿಗೂ ಅನಿಸುತ್ತಲೇ ಇದೆ..

ಎರಡನೇ ಬಾರಿ ಮನೆಯೊಳಗೆ ಹೋದಾಗಿನಿಂದಲೂ ಬರೀ ಜಗಳ ತೆಗೆಯೋದೆ ಆಯ್ತು.. ನಾನು ವೀಡಿಯೋ ನೋಡಿಕೊಂಡು ಬಂದಿದ್ದೀನಿ.. ವೀಡಿಯೋ ನೋಡಿಕೊಂಡು ಬಂದಿದ್ದೀನಿ.. ಯಾರೆಲ್ಲಾ ಏನೇನು ಮಾತಾಡಿದ್ದೀರಾ ಎಲ್ಲವೂ ನನಗೆ ಗೊತ್ತಿದೆ ಅನ್ನೋ ಮಾತನ್ನೇ ಹೇಳ್ತಿದ್ದಾರೆ..

ಇಂದು ಅಕ್ಷರಶಃ ಚೈತ್ರಾ ಅವರಿಂದ ಮನೆಯ ಶಾಂತಿ ಹಾಳಾಗಿದ್ದು ಸುಳ್ಳಲ್ಲ.. ಹೌದು ಕಿತ್ತಳೆ ಹಣ್ಣಿನ ಟಾಸ್ಕ್ ಮುಗಿದ ನಂತರ ಮನೆ ಸ್ವಲ್ಪ ಶಾಂತಿಯಾಗಿತ್ತು.. ಆದರೆ ಇಂದು ಚೈತ್ರಾ ಅವರು ಮನೆಯವರೆಲ್ಲರ ತಾಳ್ಮೆಯನ್ನು ಹಾಳು ಮಾಡಿದರು..

ನಿನ್ನೆ ಕಿಚ್ಚ ಸುದೀಪ್ ಅವರು ಮನೆಯಲ್ಲಿ ಪ್ಲೇನ್ ದೋಸೆ ಯಾರು ಅಂದಾಗ ಅದ್ಯಾವ ಪುಣ್ಯಾತ್ಮ ಚೈತ್ರಾ ಕೊಟ್ಟೂರ್ ಅವರನ್ನ ಪ್ಲೇನ್ ದೋಸೆ ಅಂದರೋ.. ಆಗಿನಿಂದ ಮನೆಯ ಸದಸ್ಯರಿಗೆಲ್ಲಾ ಟಾಂಗ್ ಕೊಟ್ಟು ಕೊಟ್ಟು ಮಾತನಾಡುತ್ತಿದ್ದಾರೆ..

ಇದೇ ವಿಷಯದ ಕುರಿತು ಮನೆಯ ಸದಸ್ಯರೆಲ್ಲಾ ಚರ್ಚೆ ಮಾಡುತ್ತಾ ಕುಳಿತಾಗ ಚೈತ್ರಾ ತಾವು ಮಾಡ್ತಾ ಇರೋದು ಸರಿ.. ಮಿಕ್ಕವರೆಲ್ಲಾ ತಪ್ಪು ಎನ್ನುವಂತೆಯೇ ಮಾತನಾಡುತ್ತಲೇ ಇದ್ದರು..

ಜೊತೆಗೆ ಪ್ಲೇನ್ ದೋಸೆ ಅಂತ ಬೇರೆ ಸದಸ್ಯರಿಗೆ ಹೇಳೋಕೆ ತಾಕತ್ ಇಲ್ಲ ದಮ್ ಇಲ್ಲ ಅಂತೆಲ್ಲಾ ಪದಬಳಕೆ ಮಾಡಿದಾಗ.. ಶೈನ್ ಹಾಗೂ ವಾಸುಕಿ ಮಾತನಾಡಲು ಶುರು ಮಾಡಿದರು.. ಆದರೆ ಬೇರೆ ಸದಸ್ಯರು ಮಾತನಾಡಲು ಬಿಡದೇ ಪದೇ ಪದೇ ಅವರೇ ಮದ್ಯ ಜೋರಾಗಿ ಮಾತು ಶುರು ಮಾಡುತ್ತಲೇ ಇದ್ದರು..

ಕೊನೆಗೆ ತಾಳ್ಮೆ ಕಳೆದುಕೊಂಡ ಶೈನ್ ತಮ್ಮ ಧ್ವನಿಯನ್ನು ಏರಿಸಿದರು… ಬೇರೆಯವರು ಮಾತನಾಡುವಾಗ ಸ್ವಲ್ಪ ತಾಳ್ಮೆಯಾಗಿ ಕೇಳಿಸಿಕೊಳ್ಳೋದನ್ನ ಕಲಿರಿ.. ಇದು ನಿಮ್ಮದು ಹೊಸದೇನಲ್ಲಾ.. ಮೊದಲಿನಿಂದಲೂ ನಿಮ್ಮದು ಇದೇ ಕತೆ.. ಬೇರೆಯವರ ಮಾತಿಗೂ ಗೌರವ ಕೊಡೋದನ್ನ ಕಲಿರಿ.. ತಾಕತ್ತು ದಮ್ ಅಂತೆಲ್ಲಾ ಮಾತನಾಡಬೇಡಿ ಎಂದು ಗುಡುಗಿದರು..

ಆದರೆ ಯಾವ ಮಾತನ್ನು ಕೂಡ ತಲೆಗೆ ಹಾಕಿಕೊಳ್ಳದ ಚೈತ್ರಾ ಕೊಟ್ಟೂರ್ ತಮ್ಮ ವಾದವನ್ನು ತಾವು ಮಾಡುತ್ತಲೇ ಇದ್ದರು.. ಕೊನೆಗೆ ಇವರ ಹತ್ತಿರ ಮಾತನಾಡಿ ಪ್ರಯೋಜನವಿಲ್ಲ ಎಂದು ಭಾವಿಸಿ ಕೊನೆಗೆ ಎಲ್ಲರೂ ಎದ್ದು ನಡೆದರು..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ