ಕಳೆದ ವಾರ ಬಿಗ್ ಬಾಸ್ ನಲ್ಲಿ ಎರೆಡೆರೆಡು ಚಟುವಟಿಕೆ ಒಂದೇ ಸಮಯದಲ್ಲಿ ನಡೆಯಿತು. ಒಂದು ಲಾಟಿನ್ ಹಿಡಿದು ಮನೆಯಲ್ಲಿ ಓಡಾಡಬೆಕಾದದ್ದು ಒಂದಾದರೆ, ರಾಜಾಧಿಪತ್ಯದ ಚಟುವಟಿಕೆ ಮತ್ತೊಂದು.

ಮನೆಯ ಸದಸ್ಯರು ಲಾಟಿನ್ ಹಿಡಿದು ಅದ್ಭುತವಾಗಿಯೇ ಟಾಸ್ಕ್ ಮುಗಿಸಿದರು. ಕೊನೆಯಲ್ಲಿ 20 ಸಾವಿರಕ್ಕೂ ಅಧಿಕ ಲಕ್ಸುರಿ ಬಡ್ಜೆಟ್ ಪಾಯಿಂಟ್ ಗಳೂ ಬಂದವು.. ಆದರೆ ಮನೆಯಲ್ಲಿ ಸದಸ್ಯರು ಮಾಡಿದ ತಪ್ಪಿಗೆ ಅದೇ ರೀತಿಯಾಗಿ ಅಧಿಕವಾಗಿಯೇ ಪಾಯಿಂಟ್ ಗಳು ಕಡಿತಗೊಂಡವು. ಅದರಲ್ಲೂ ಭೂಮಿ ಶೆಟ್ಟಿ ಅವರು ಕದ್ದು ತಿಂದ ಚಾಕ್ಲೆಟ್ ಬೆಲೆ ಕೊಂಚ ದುಬಾರಿಯೇ ಆಗಿತ್ತು. ಒಟ್ಟಿನಲ್ಲಿ ಮನೆಯ ಸದಸ್ಯರ ಎಲ್ಲಾ ತಪ್ಪಿಗೆ ಕಡಿತಗೊಂಡು ಕೊನೆಗೆ 6 ಸಾವಿರಕ್ಕೆ ಬಂದು ನಿಂತಿತು.

ಆದರೆ ಈ ಸಮಯದಲ್ಲಿ ಮನೆಯ ಹಿರಿಯ ಸದಸ್ಯ ಜೈಜಗದೀಶ್ ಅವರು ಒಂದು ಮಾತನಾಡಿದರು. ಫ್ಲೊ ನಲ್ಲಿ ಆಡಿದ ಮಾತಾದರೂ ಬಹಳ ಸೂಕ್ಷ್ಮವಾದ ಮಾತಾಗಿತ್ತು‌. ಹೌದು ಬಿಗ್ ಬಾಸ್ ಈ ರೀತಿ ಕೊಡೋದೇಕೆ, ಈಕಡೆ ಕಿತ್ಕೊಳೋದೇಕೆ.. ಕೊಡದೆ ಸುಮ್ಮನೆ ಇದ್ದುಬಿಡಿ ನಾವು ಗಂಜಿ ಕುಡಿದುಕೊಂಡು ಇರ್ತೀವಿ ಎಂದಿದ್ದರು.

ಈ ಮಾತನ್ನು ಜೈಜಗದೀಶ್ ಅವರು ಬಹಳ ಸೀರಿಯಸ್ ಆಗಿ ಆ ಸಮಯದಲ್ಲಿ ಮಾತನಾಡಿದ್ದರು. ನಿನ್ನೆಯ ವಾರದ ಕತೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಈ ವಿಷಯ ಪ್ರಸ್ತಾಪಿಸಿದ ಸುದೀಪ್ ಅವರು ನಯವಾಗಿಯೇ ಜೈ ಜಗದೀಶ್ ಅವರು ಮಾಡಿದ್ದು ತಪ್ಪು ಎಂದು ವಿವರಿಸಿದರು.

ಹಿರಿಯ ನಟನಾದುದರಿಂದ ಹೇಳುವ ಶೈಲಿ ಬೇರೆಯದ್ದೇ ರೀತಿಯಲ್ಲಿದ್ದದ್ದು ನೋಡುಗರಿಗೆ ಕಂಡುಬಂದದ್ದು ಸುಳ್ಳಲ್ಲ. ಹೌದು ಮನೆಯ ಇತರ ಸದಸ್ಯರ ತಪ್ಪಿಗೆ ನೇರವಾಗಿ ಹೇಳುವಷ್ಟು ಸುಲಭವಾಗಿ ಸುದೀಪ್ ಅವರಿಗೆ ಹೇಳಲು ಸಾಧ್ಯವಾಗಲಿಲ್ಲ.. ಇದಕ್ಕೆ ಹಿರಿಯ ನಟರ ಮೇಲಿನ ಗೌರವ ಕಾರಣವಿರಬಹುದು‌.. ಆದರೂ ವೃತ್ತಿ ಧರ್ಮ ಪಾಲನೆ ಮಾಡಬೇಕಾದ ಕಾರಣ ನಾಜೂಕಾಗಿ ಜೈಜಗದೀಶ್ ಅವರ ಬಾಯಿಯಲ್ಲಿಯೇ ಮತ್ತೊಮ್ಮೆ ಅದೇ ಮಾತನ್ನು ಹೇಳಿಸಿ ಅವರ ತಪ್ಪಿನ ಅರಿವು ಮಾಡಿಸಿದರು.

ಇನ್ನುಳಿದಂತೆ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಕೂಡ ಮುಗಿದಿದ್ದು, ದುನಿಯಾ ರಶ್ಮಿ ಅವರು ಮನೆಯಿಂದ ಹೊರ ಬಂದಿದ್ದಾರೆ. ಅದು ಇಂದಿನ ಸಂಚಿಕೆಯಲ್ಲಿ ಪ್ರಸಾರವಾಗಲಿದೆ.

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ