ಬಿಗ್ ಬಾಸ್ ಸೀಸನ್ 7 ರ 13ನೇ ವಾರದ ಮೊದಲ ದಿನವೇ ಮನೆಗೆ ಕುರಿ ಪ್ರತಾಪ್ ಅವರ ಪತ್ನಿ ಹಾಗೂ ಮಕ್ಕಳ ಆಗಮನವಾಗಿದೆ.. ಅಡುಗೆ ಮನೆಯಲ್ಲಿ ಏನೋ ಕೆಲಸ ಮಾಡುತ್ತಾ ಕುರಿ ನಿಂತಿದ್ದರು.. ಇತ್ತ ಬಿಗ್ ಬಾಸ್ ಮನೆಯ ಮುಖ್ಯ ಗೇಟ್ ಮೂಲಕ ಕುರಿ ಪ್ರತಾಪ್ ಅವರ ಮಡದಿ ಮತ್ತು ಮಗಳು ಬಂದರು.. ಕಾಕತಾಳಿಯ ಎಂದರೆ ಮೊದಲು ನೋಡಿದ್ದೇ ಪ್ರಿಯಾಂಕ ಅವರು.. ನೋಡಿದ ತಕ್ಷಣ ಕುರಿ ನಿಮ್ಮನೆಯವರು ಬಂದರು ಎಂದರು..

ನಿಂತಲ್ಲಿಯೇ ಸ್ಮೈಲ್ ಕೊಟ್ಟ ನಮ್ ಕುರಿ ಪ್ರತಾಪ್ ಅವರು ಹೆಂಡತಿಯ ನೋಡಿ ಬ್ಲಶ್ ಆಗಿ ಹೋದರು.. ಆದರೆ ಕುರಿ ಪ್ರತಾಪ್ ಅವರಿಗೆ ಹೆಂಡತಿ ಮೇಲೆ ಇಷ್ಟೊಂದು ಹೊಟ್ಟೆ ಕಿಚ್ಚಾ ಎನ್ನುವಂತಿತ್ತು ಅವರ ಮಾತುಗಳು..

ಹೆಂಡತಿಯನ್ನು ಎಲ್ಲರಿಗೂ ಪರಿಚಯ ಮಾಡಿಸಿದರು.. ಸರಿತಾ ಅವರು ತಂದ ತಿಂಡಿ ಬಾಕ್ಸ್ ಅನ್ನು ವಾಸುಕಿ ಅವರ ಕೈಗೆ ಕೊಟ್ಟರು.. ನಂತರ ಮಾತನಾಡಿಸುತ್ತಾ ಗಾರ್ಡನ್ ಏರಿಯಾಗೆ ಬಂದರು.. ಆ ತಕ್ಷಣ ಸ್ಟೋರ್ ರೂಮಿನ ಹಾರ್ನ್ ಆದ ಕಾರಣ ಶೈನ್ ಸ್ಟೋರ್ ರೂಮಿಗೆ ಹೋಗಿ ನೋಡಿದಾಗ ಶಾಕ್ ಆದರು.. ಅಲ್ಲಿ ಕುರಿ ಅವರ ಮಗ ವಿಪುಲ್ ನ ಎಂಟ್ರಿಯಾಗಿತ್ತು..

ಈ ಹಿಂದೆ ನಾನು ಯಾವುದೇ ಕಾರಣಕ್ಕೂ ಅಳೋದಿಲ್ಲ ಎಂದಿದ್ದ ಕುರಿ ಮಕ್ಕಳು ಹೆಂಡತಿಯನ್ನು ನೋಡಿ ಕಣ್ಣೀರಿಟ್ಟರು.. ಆದರೂ ಕೂಡ ಇದೆಲ್ಲದರ ನಡುವೆ ಕುರಿ ಅವರ ಪತ್ನಿ ಮನೆಗೆ ಬಂದಾಗಿನಿಂದ ಸರಿತಾ ಅವರು ವಾಪಸ್ ಹೋಗುವ ವರೆಗೂ ಕೂಡ ಕುರಿ ಪ್ರತಾಪ್ ಅವರು ಹೆಚ್ಚಾಗಿ ಆಡಿದ್ದು ಒಂದೇ ಮಾತು.. ಅದು “ಏನೇ ಇಷ್ಟ್ ದಪ್ಪ ಆಗ್ಬಿಟ್ಟಿದ್ದೀಯಾ..‌ ಏನೇ ಇಷ್ಟ್ ದಪ್ಪ ಆಗ್ಬಿಟ್ಟಿದ್ದೀಯಾ” ಇದೊಂದು ಮಾತು ಬಿಟ್ಟು ಕುರಿ ಪ್ರತಾಪ್ ಬೇರೆ ಮಾತನಾಡಿದ್ದು ಕಾಣಲಿಲ್ಲ..

ಅಷ್ಟಕ್ಕೂ ಸುಮ್ಮನಾಗದೆ ಮನೆಯ ಇತರ ಸದಸ್ಯರ ಮುಂದೆ ಬಂದು ಚೆನ್ನಾಗಿ ಪಾನಿಪುರಿ ಗೋಬಿ ತಿಂದು ತಿಂದೂ ದಪ್ಪ ಆಗ್ಬಿಟ್ಟವ್ಳೆ ಎಂದರು… ಆಗಲೂ ಸರಿತಾ ಅವರು ನಕ್ಕು ಸುಮ್ಮನಾದರು.. ಆನಂತರ ಇಬ್ಬರೂ ಗಾರ್ಡನ್ ಏರಿಯಾದಲ್ಲಿ ಬಂದು ನಿಂತು ಮಾತನಾಡುವಾಗಲೂ ಕೂಡ ಕುರಿ ಮಾತ್ರ ಮತ್ತೆ ಹೇಳಿದ್ದು ಅದೇ ಮಾತು.. ಏನೇ ಚೆನ್ನಾಗಿ ತಿಂದು ತಿಂದು ದಪ್ಪ ಆಗ್ಬಿಟ್ಟಿದ್ದೀಯಾ ಅಂತ.. ಅಲ್ಲಾ ಕುರಿ.. ಎಲ್ರೂ ಮನೆಯವರು ಬಂದಾಗ “ನಿನ್ನ ತುಂಬ ಮಿಸ್ ಮಾಡ್ಕೊಂಡೆ ಅದು ಇದು” ಅಂತ ಹೇಳಿದ್ರೆ.. ನೀವ್ ಮಾತ್ರ ಹೆಂಡತಿ ಬಂದು ಹೋದಾಗಿನಿಂದ ಹೇಳಿದ್ ಮಾತ್ರ ಇದೇ ಮಾತು.. ಹೆಂಡತಿ ಮೇಲೆ ಇಷ್ಟೊಂದು ಹೊಟ್ಟೆ ಕಿಚ್ಚಾ ನಿಮಗೆ ಎಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಕುರಿ ಪ್ರತಾಪ್ ಅವರನ್ನು ತಮಾಷೆಯಾಗಿ ಟ್ರೋಲ್ ಮಾಡಲಾಗುತ್ತಿದೆ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ