ಅದೆಷ್ಟೋ ಜನರು ಈ ಬಾರಿ ಬಿಗ್ ಬಾಸ್ ನೋಡುತ್ತಿದ್ದದ್ದೇ ರವಿ ಬೆಳೆಗೆರೆ ಅವರಿಗೋಸ್ಕರ, ಅವರ ಮಾತಿಗೋಸ್ಕರ, ಅವರ ತಿಳುವಳಿಕೆಗೋಸ್ಕರ, ಅವರು ಹಂಚಿಕೊಳ್ಳುತ್ತಿದ್ದ ಅನುಭವದ ಮಾತುಗಳಿಗೋಸ್ಕರ.. ಹೊರಗಡೆ ಅವರ ಬಗ್ಗೆ ಪಾಸಿಟೀವ್ ಹಾಗೂ ನೆಗಟೀವ್ ಎರಡೂ ಮಾತುಗಳು ಕೇಳಿ ಬರುತ್ತವೆ.

ಆದರೆ ಬಿಗ್ ಬಾಸಿನಲ್ಲಿ ಅವರನ್ನು ನೋಡಿದ ಅದೆಷ್ಟೋ ಜನರು ಅವರ ಫ್ಯಾನ್ ಆಗಿರುವುದು ಸುಳ್ಳಲ್ಲ.. ಬಿಗ್ ಬಾಸ್ ಮನೆಯ ಸದಸ್ಯನಾಗಿ ಹೋದ ರವಿ ಬೆಳೆಗೆರೆ ಅವರು ಆರೋಗ್ಯದ ಸಮಸ್ಯೆಯಿಂದಾಗಿ ಒಂದು ವಾರದ ಅತಿಥಿಯಾಗುವಂತಾಯಿತು.

ಇದ್ದ ಒಂದು ವಾರದಲ್ಲಿ ತಮ್ಮ ಅನುಭವದ ಅನೇಕ ಕತೆಗಳನ್ನು ಹಂಚಿಕೊಂಡರು.. ಜ್ಞಾನವನ್ನು ನೀಡಿದರು, ಸ್ಪೂರ್ತಿ ತುಂಬಿದರು, ಮನೆಯ ಸದಸ್ಯರ ಪ್ರೀತಿ ಪಡೆದು ಹೋದರು..

ಆದರೆ ಹೋಗುವ ಮುನ್ನ ಮನೆಯ ಸದಸ್ಯರಿಗೆ ಊಹಿಸಲಾಗದ ಉಡುಗೊರೆ ನೀಡಿ ಹೋದರು. ಹೌದು ಬಿಗ್ ಬಾಸ್ ಮನೆಯಲ್ಲಿ ಇರೋ ಸದಸ್ಯರೆಲ್ಲಾ ಶ್ರೀಮಂತರಲ್ಲ.. ಅನುಕೂಲರಸ್ತರಲ್ಲ.. ಜೀವನದಲ್ಲಿ ಗೆಲ್ಲುವ ಸಲುವಾಗಿ ಒಂದೊಂದೆ ಮೆಟ್ಟಿಲು ಏರಲು ಶ್ರಮ ಪಡುತ್ತಿರುವವರೂ ಇದ್ದಾರೆ.

ಇದೆಲ್ಲವನ್ನು ತಿಳಿದಿರುವ ರವಿ ಬೆಳೆಗೆರೆ ಅವರು ಮನೆಯಿಂದ ಹೊರ ಹೋಗುವ ಮುನ್ನ ಕೋಟಿಗೊಂದು ಮಾತನಾಡಿ ಹೋದರು.. ಇಲ್ಲಿದೆ ನೋಡಿ ಅವರ ಚಿನ್ನದಂತ ಮಾತುಗಳು.. “ನಿಮಗೆಲ್ಲಾ ಒಂದು ಮಾತು ಹೇಳ್ತೀನಿ, ನೀವು ಸೋತಾಗ, ಭವಿಷ್ಯ ಇಲ್ಲ ಅನಿಸ್ದಾಗ, ಈ ಬದುಕು ಸಾಕು ಅಂತ ಅನಿಸಿದಾಗ ಒಂದು ಫೋನ್ ಮಾಡಿ ಸಾಕು.. ನಾನಿದ್ದೀನಿ.. ನಾನ್ ಈ ಮಾತನ್ನ ಸುಮ್ನೆ ಹೇಳ್ತಿಲ್ಲ.. ಅಮ್ ಅ ವೆರಿ ವೆರಿ ವೆರಿ ಪವರ್ ಫುಲ್ ಮ್ಯಾನ್.. ನಾನ್ ಯಾರ ಜೊತೆ ಬೇಕಿದ್ರು ಫೈಟ್ ಮಾಡ್ತೀನಿ..

ದಯವಿಟ್ಟು ಬನ್ನಿ.. ನೋಡಿ ನಂದು ಊಟ ಆಗಿದೆ.. ನನ್ನ ತಟ್ಟೆ ಇಂದ ಆಚೆಗೆ ಒಂದಿಷ್ಟು ಊಟ ಉಳಿದಿದೆ. ನನಗೆ ತುಂಬಾ ದುಡ್ಡಿದೆ, ನಾನು ಮಲಗಿ ಸಾಕಾಗಿ ಇನ್ನಷ್ಟು ಜಾಗ ಇದೆ ನನ್ನ ಮನೆಯೊಳಗೆ.. ಕಸಾಯಿ ಖಾನೆಯ ಹಿಂದೆ ಬಿದ್ದಿರೋ ರಾಶಿ ಮೂಳೆಗಳಷ್ಟು ನನ್ನ ಮನೆಯಲ್ಲಿ ಪುಸ್ತಕಗಳಿವೆ.. ನೀವು ಯಾವುದು ಕೇಳ್ತೀರಿ ನಾನು ಕೊಡ್ತೀನಿ.. ನೀವು ಬೆಳೆಯಲಿಲ್ಲ ಅಂದ್ರೆ ನಾನು ನಿಮ್ಮನ್ನ ಇಗ್ನೋರ್ ಮಾಡ್ತೀನಿ.. ಎಂದಿದ್ದಾರೆ ಅಷ್ಟೇ ಅಲ್ಲದೆ ಪ್ರತಿ ಸದಸ್ಯನಿಗೂ ಕೂಡ ಪರ್ಸನಲ್ ಆಗಿ ಮಾತನಾಡಿಸಿ ಏನೇ ಕಷ್ಟ ಬಂದರೂ ನನಗೆ ಫೋನ್ ಮಾಡಿ, ಯಾವುದೇ ಹಿಂಜರಿಕೆ ಬೇಡ ಎಂದಿದ್ದಾರೆ.

ಅದರಲ್ಲೂ ಮನೆಯಲ್ಲಿ ತಮಗೆ ಮಗಳ ಪ್ರೀತಿ ಕೊಟ್ಟು ನೋಡಿಕೊಂಡ ಭೂಮಿ ಶೆಟ್ಟಿ, ದೀಪಿಕಾ ದಾಸ್ ಹಾಗೂ ಪ್ರಿಯಾಂಕರಿಗೆ ಮನೆಯಿಂದ ಹೊರ ಬಂದ ಮೇಲೆ ಏನೇ ಕಷ್ಟ ಇದ್ದರೂ ಈ ಅಪ್ಪನಿಗೆ ಒಂದು ಫೋನ್ ಮಾಡಿ ನಾನು ಬರ್ತೇನೆ ಎಂದಿದ್ದಾರೆ.

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ