ಬಿಗ್ ಬಾಸ್ ಸೀಸನ್ 7 ರಲ್ಲಿ ಮೂರನೇ ವಾರ ಮುಕ್ತಾಯವಾಗುತ್ತಿದ್ದಂತೆ ವೈಲ್ಡ್ ಕಾರ್ಡ್ ಮೂಲಕ ಕನ್ನಡದ ಪ್ರಖ್ಯಾತ ಆರ್ ಜೆ ಒಬ್ಬರು ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದಿದ್ದಾರೆ.

ಹೌದು ಈ ವಾರ ಬಿಗ್ ಬಾಸ್ ನಲ್ಲಿ ಟ್ವಿಸ್ಟ್ ಕೊಟ್ಟಿರುವ ಕಿಚ್ಚ ಅವರು, ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದ ಸದಸ್ಯನ ಕೈನಲ್ಲಿ ಎನ್ವಲಪ್ ಒಂದನ್ನು ಮನೆಯೊಳಗೆ ಕಳುಹಿಸಿಕೊಟ್ಟಿದ್ದು, ಆ ಎನ್ವಲಪ್ ನಲ್ಲಿ ಮನೆಯಿಂದ ಹೊರ ಹೋಗುವ ಸ್ಪರ್ಧಿಯ ಹೆಸರನ್ನು ಬರೆಯಲಾಗಿತ್ತು‌..

ಹೌದು ಮನೆಗೆ ಎಂಟ್ರಿ ಪಡೆದವರು ಮತ್ಯಾರೂ ಅಲ್ಲ.. ಕನ್ನಡದ ಪ್ರಖ್ಯಾತ ಆರ್ ಜೆ ಪೃಥ್ವಿ ಅವರು.. ಹೌದು ಬೆಳ್ ಬೆಳಗ್ಗೆ ಎಫ್ ಎಂ ಕೇಳೋ ಬೆಂಗಳೂರಿಗರಿಗರಿಗೆ ಇವರು ಪರಿಚಿತರಾದರೂ ಇನ್ನುಳಿದಂತೆ ರಾಜ್ಯದ ಜನತೆಗೆ ಅಷ್ಟಾಗಿ ಇವರ ಬಗ್ಗೆ ತಿಳಿದಿಲ್ಲ..

ಇವರು ವೃತ್ತಿಯಲ್ಲಿ ರೇಡಿಯೋ ಜಾಕಿಯಾದರೂ ಇವರೊಬ್ಬರು ಪೈಲಟ್.. ಹೌದು ಇವರು ಸರ್ಟಿಫೈಡ್ ವಿಮಾನ ಚಾಲಕ.. ಮನೆಯೊಳಗೆ ಇವರ ಬಗ್ಗೆ ಮತ್ತಷ್ಟು ತಿಳಿಯಬಹುದಾ ಕಾದು ನೋಡಬೇಕಿದೆ..

ಸದ್ಯ ಮೂರನೇ ವಾರದ ಎಲಿಮಿನೇಷನ್ ನಲ್ಲಿ ಮನೆಯಿಂದ ರಶ್ಮಿ ಹೊರ ಬಂದರೆ ವೈಲ್ಡ್ ಕಾರ್ಡ್ ಮೂಲಕ ಆರ್ ಜೆ ಪೃಥ್ವಿ ಮನೆಗೆ ಎಂಟ್ರಿ ಪಡೆದಿದ್ದಾರೆ.

ಇಷ್ಟು ದಿನ ಇದ್ದ ಅಷ್ಟೂ ಕ್ಯಾರೆಕ್ಟರ್ ಗಳ ಜೊತೆಗೆ ಮತ್ತೊಂದು ಕ್ಯಾರೆಕ್ಟರ್ ಆಡ್ ಆಗಿದ್ದು ಮನೆಯೊಳಗೆ ಸದ್ಯಕ್ಕೆ ಇರುವ ಸದಸ್ಯರು ಪೃಥ್ವಿ ಅವರನ್ನು ಸಹಿಸುತ್ತಾರೋ ಅಥವಾ ಸೀನಿಯಾರಿಟಿ ಬೇಸ್ ಮೇಲೆ ಅವರನ್ನು ಮೂಲೆಗುಂಪು ಮಾಡುತ್ತಾರೋ ಕಾದು ನೋಡಬೇಕಿದೆ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ