ನಮ್ಮ ದೇಶ.. ನಮ್ಮ ಸೇನೆ.. ನಮ್ಮ ರೈತರ ಮೇಲೆ ನಮಗೆ ಇರುವ ಅಭಿಮಾನಕ್ಕೆ ಕಾರಣ ಹುಡುಕಲು ಸಾಧ್ಯವಿಲ್ಲ.. ಅವರ ವಿಷಯ ಮಾತನಾಡಿದರೆ ನಮ್ಮ ಮೈ ರೋಮಗಳು ಎದ್ದು ನಿಲ್ಲುತ್ತವೆ.. ನಮ್ಮ ಸೇನೆ ಮಾಡುವ ತ್ಯಾಗ ಬಲಿದಾನಗಳು ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಡುವ ಪ್ರತಿಯೊಬ್ಬ ಯೋಧನಿಗೂ ಹ್ಯಾಟ್ಸ್ ಆಫ್..

ರಾಜ್ಯದಲ್ಲಿ ಪ್ರವಾಹವಾಗಿ ರಕ್ಷಣಾ ಕಾರ್ಯಗಳು ನಡೆಯುತ್ತಿವೆ.. ನಮ್ಮ ರಕ್ಷಣೆಗೆಂದು ಬಂದವರು ಮತ್ಯಾರೂ ಅಲ್ಲ ನಮ್ಮ ಹೆಮ್ಮೆಯ ಸೇನೆ.. ಹೌದು ನಮ್ಮ ಸೈನಿಕರು ದೇಶ ಕಾಯೋಕು ಸಿದ್ಧ.. ದೇಶದ ಒಳಗಿರುವ ಜನರ ಕಾಯೋಕು ಸಿದ್ಧ.. ಜನರಿಗೆ ತೊಂದರೆ ಎಂದರೆ ಮೊದಲು ಹಾಜರಾಗೋದು ನಮ್ಮ ಸೇನೆ..

ಹೀಗೆ ರಾಜ್ಯದ ಹಲವೆಡೆ ಸೇನೆಯಿಂದ ರಕ್ಷಣಾ ಕಾರ್ಯ ನಡೆಯುತ್ತಿದ್ದು ಸಾವಿರಾರು ಜನರ ಪ್ರಾಣವನ್ನು ಉಳಿಸಿದ್ದಾರೆ.. ಹೀಗೆ ಪ್ರಾಣ ರಕ್ಷಣೆಗಾಗಿ ತೆರಳಿದವರು ಅಪಾಯಕ್ಕೆ ಸಿಲುಕಿದ ಅದೆಷ್ಟೋ ಘಟನೆ ನಡೆದಿದೆ..

ಆದರೆ ಇಲ್ಲಿ ನಮ್ಮ ಹೆಮ್ಮೆಯ ವೀರನ ಸಾಹಸ ಕೇಳಿದರೆ ಮೈ ಜುಮ್ಮೆನ್ನುವುದು.. ಹೌದು.. ಸಾವಿರಾರು ಸಂತ್ರಸ್ತರನ್ನು ಪ್ರವಾಹದಲ್ಲಿ ಪ್ರಾಣಾಪಾಯದಿಂದ ಪಾರು ಮಾಡಿ ನಿರಂತರ ಸೇವೆಯಲ್ಲಿ ಇಂದೂ ವಿರೂಪಾಪೂರದ ತುಂಗಭದ್ರಾ ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣೆಗೆ ಕಮಾಂಡರ್ ಡಾ.ಚೇತನ್ ತೆರಳಿದ್ದರು.. ಆದರೆ ವಿಧಿಯ ಆಟ ಬೋಟ್ ಮಗಚಿ ನೀರಿನ ಸೆಳೆತಕ್ಕೆ ಸಿಲುಕಿ ಡಾ.ಚೇತನ್ ಕೊಚ್ಚಿ ಹೋದರು.. ಅವರಿನ್ನಿಲ್ಲ ಎಂದುಕೊಂಡು ಅದೆಷ್ಟೋ ಜನರು ಕಣ್ಣೀರಿಟ್ಟರು..

ಆದರೆ ನಮ್ಮ ವೀರ ಅಷ್ಟು ಸುಲಭವಾಗಿ ಸಾಯುವುದಿಲ್ಲ ಸ್ವಾಮಿ.. ಕಮಾಂಡರ್ ಡಾ. ಚೇತನ್ ಅವರು ಸುಮಾರು 12 ಕಿಮೀ ಪ್ರವಾಹದ ನೀರಿನಲ್ಲಿ ಈಜಿಕೊಂಡು ಹೋಗಿ.. ಒಂದು ಗಿಡವನ್ನು ಆಸರೆಯಾಗಿಸಿಕೊಂಡು ಸತತ 4 ಗಂಟೆಗಳ ಕಾಲ ನೀರಿನಲ್ಲೇ ಜೀವನ್ಮರಣದ ನಡುವೆ ಹೋರಾಡಿ.. ನಂತರ ಸೇನಾ ಹೆಲಿಕಾಪ್ಟರ್ ನಲ್ಲಿ ಸುರಕ್ಷಿತವಾಗಿ ಬದುಕಿ ಬಂದಿದ್ದಾರೆ..

ನಿಜಕ್ಕೂ ಕಮಾಂಡರ್ ಡಾ.ಚೇತನ್ ಸೇರಿದಂತೆ ಎಲ್ಲಾ ನಮ್ಮ ವೀರ ಸೈನಿಕರಿಗೆ ಕನ್ನಡಿಗರ ಪರವಾಗಿ ಹ್ಯಾಟ್ಸ್ ಆಫ್.. ಸಾವು ಗೆದ್ದು ಬಂದ ಆ ಮಹಾನುಭಾವ ಆಡೋ ಮಾತುಗಳನ್ನು ಕೇಳಿದರೆ ಎದ್ದು ನಿಂತು ಸಲ್ಯೂಟ್ ಹೊಡೆಯುವಿರು.. ಕೆಳಗಿನ ವೀಡಿಯೋದಲ್ಲಿ ಕೇಳಿ ಅವರ ಮಾತನ್ನು..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ