ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಬ್ಬರು ಪ್ರಾಣಿ ಪ್ರೇಮಿ ಎ‌ನ್ನುವುದು ಎಲ್ಲರಿಗೂ ತಿಳಿದೇ ಇದೆ.. ಮೈಸೂರಿನಲ್ಲಿರುವ ದರ್ಶನ್ ಅವರ ತೂಗುದೀಪ ಫಾರ್ಮ್ ಒಂದು ರೀತಿಯ ಮಿನಿ ಮೃಗಾಲಯ ಇದ್ದಂತೆ ಇದೆ..

ಜೊತೆಗೆ ದರ್ಶನ್ ಅವರ ಪ್ರಾಣಿ ಪ್ರೀತಿ ಪರಿಸರ ಮೇಲಿನ ಕಾಳಜಿಯನ್ನು ನೋಡಿ ಅರಣ್ಯ ಇಲಖೆ ದರ್ಶನ್ ಅವರನ್ನು ಬ್ರಾಂಡ್ ಅಂಬಾಸಿಡರ್ ಅನ್ನಾಗಿ ಮಾಡಿಕೊಂಡಿತ್ತು.. ಅದರಂತೆಯೇ ಕಾಡನ್ನು ಉಳಿಸುವ ಹಾಗೂ ಗಿಡಗಳನ್ನು ನೆಡುವ ಸಲುವಾಗಿ ದರ್ಶನ್ ಅವರು ಜನರಿಗೆ ಅರಿವು ಮೂಡಿಸುತ್ತಿದ್ದರು.

ಅಷ್ಟೇ ಅಲ್ಲದೆ ದರ್ಶನ್ ಅವರು ಸ್ವತಃ ತಿಂಗಳಿಗೊಮ್ಮೆ ರಾಜ್ಯದ ವಿವಿಧ ಕಾಡುಗಳಿಗೆ ಭೇಟಿ ನೀಡುತ್ತಾ ಅಲ್ಲಿನ ಪ್ರಾಣಿಗಳ ಫೋಟೋವನ್ನು ತೆಗೆಯುತ್ತಿದ್ದರು.. ಪ್ರೊಫೆಷನಲ್ ಫೋಟೋಗ್ರಾಫರ್ ರಂತೆಯೇ ಅದ್ಭುತ ಛಾಯಾಚಿತ್ರಗಳನ್ನು ದರ್ಶನ್ ಅವರು ಸೆರೆ ಹಿಡಿದಿದ್ದಾರೆ.

ಮೊನ್ನೆ ಮೊನ್ನೆಯಷ್ಟೇ ದರ್ಶನ್ ಅವರು ಕಬಿನಿ ಹಿನ್ನೀರು ಜಲಾಶಯಕ್ಕೆ ಹೋದ ಸಂದರ್ಭದಲ್ಲಿ ಆನೆಯೊಂದರ ಛಾಯಾಚಿತ್ರವನ್ನು ಸೆರೆ ಹಿಡಿದಿದ್ದರು..

ಇದೀಗ ಅದೇ ಫೋಟೋವನ್ನು ನಟ ಚಿಕ್ಕಣ್ಣ ಕೊಂಡುಕೊಂಡಿದ್ದಾರೆ. ಅದರಲ್ಲೂ ಚಿಕ್ಕಣ್ಣ ಆ ಫೋಟೋಗೆ ಕೊಟ್ಟಿದ್ದು ಬರೋಬ್ಬರಿ ಒಂದು ಲಕ್ಷ ರೂಪಾಯಿ ಹಣ..

ಅದೂ ಕೂಡ ಛಾಯಾಚಿತ್ರವನ್ನು ತಮಗಾಗಿ ಕೊಂಡುಕೊಳ್ಳದೆ ಅರಣ ಸಂರಕ್ಷಣೆಯ ಸಲುವಾಗಿ ಆ ಹಣವನ್ನು ಕೊಟ್ಟು ಫೋಟೋವನ್ನು ಖರೀದಿಸಿದ್ದಾರೆ..

ಈ ವಿಷಯವನ್ನು ಸ್ವತಃ ದರ್ಶನ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು.. “ನಮ್ಮ ಚಿಕ್ಕಣ್ಣ ನಾನು ಸೆರೆಹಿಡಿದಿದ್ದ ಆನೆಯ ಫೋಟೋವನ್ನು ಅರಣ್ಯ ಇಲಾಖೆಯ ನೆರವಿಗಾಗಿ ೧ ಲಕ್ಷ ರೂಪಾಯಿಗಳನ್ನು ನೀಡಿ ಖರೀದಿ ಮಾಡಿರುವುದು ಶ್ಲಾಘನೀಯ. ಅವರ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ನನ್ನ ಕೃತಘ್ನತೆಗಳು” ಎನ್ನುವ ಮೂಲಕ ಕೃತಜ್ಞತೆ ತಿಳಿಸಿದ್ದಾರೆ..

ಅದೇನೆ ಹೇಳಿ ಹಳ್ಳಿಯ ಒಬ್ಬ ಹುಡುಗ ತನ್ನ ಪರಿಶ್ರಮದಿಂದ ಈ ಎತ್ತರಕ್ಕೆ ಬೆಳೆದು, ಇದೀಗ ಅರಣ್ಯ ಸಂರಕ್ಷಣೆಗೆ ನೆರವಾಗುವ ಸಲುವಾಗಿ ಲಕ್ಷ ಕೊಟ್ಟು ಫೋಟೋ ಖರೀದಿಸುವ ಮಟ್ಟಕ್ಕೆ ಬೆಳೆದರು ಎಂದರೆ ನಿಜಕ್ಕೂ ಗ್ರೇಟ್..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ