ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಭಿಮಾನಿಗಳ ಬಾಸ್ ಆಗಿರುವುದು ಬಹುಶಃ ಅವರ ಇಂತಹ ದೊಡ್ಡ ಗುಣಗಳಿಗೇ ಇರಬೇಕು.. ದರ್ಶನ್ ಅವರು ಅಭಿಮಾನಿಗಳನ್ನು ಸೆಲಿಬ್ರೆಟಿಗಳಾಗಿ ನೋಡ್ತಾರೆ. ಅಷ್ಟೇ ಅಲ್ಲದೆ ತಮ್ಮನ್ನು ಮಾತನಾಡಿಸಲು ದೂರದೂರಿನಿಂದ ಬಂದ ಅಭಿಮಾನಿಗಳಿಗೆ ತಮ್ಮ ರಜೆಯ ಸಮಯದಲ್ಲಿ ಅವಕಾಶ ನೀಡಿ ಅವರೊಂದಿಗೆ ಬೆರೆತು ಫೋಟೋ ತೆಗೆಸಿಕೊಳ್ತಾರೆ.

ಇದೀಗ ಇದೇ ದರ್ಶನ್ ಅವರು ಇಬ್ಬರ ಮದುವೆಯ ಜವಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಹೌದು ಯಾರವರು? ಇಲ್ಲಿದೆ ನೋಡಿ.. ದರ್ಶನ್ ಅವರ ಮನೆಯಲ್ಲಿ ನಡೆಯೋ ಹುಟ್ಟುಹಬ್ಬಗಳಿಗೆ ರಾಜ್ಯದ ನಾನಾ ಮೂಲೆಗಳಿಂದ ಅಭಿಮಾನಿಗಳು ಬರುತ್ತಾರೆ.. ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಅವರ ಹುಟ್ಟು ಹಬ್ಬ ಆಗುರಬಹುದು.. ಅಥವಾ ಮಗನ ಹುಟ್ಟುಹಬ್ಬ ಆಗಿರಬಹುದು..

ಅದೇ ರೀತಿಯಾಗಿ ಮೊನ್ನೆ ಮೊನ್ನೆಯೂ ಕೂಡ ಪುತ್ರ ವಿನೀಶ್ ಅವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು‌‌.. ಆದರೆ ಕಳೆದ ವರ್ಷ ಹೀಗೆ ವಿನೀಶ್ ಹುಟ್ಟುಹಬ್ಬದ ಸಮಯದಲ್ಲಿ ದೂರದ ಊರಿನಿಂದ ರಾಕೇಶ್ ಎನ್ನುವ ಅಭಿಮಾನಿಯೊರ್ವ ತನ್ನ ಬೈಕ್ ನಲ್ಲಿ ಬರುವಾಗ ಅಪಘಾತವಾಗಿ ದೂರಾಗಿದ್ದನು..

ನಂತರ ಆ ಕುಟುಂಬಕ್ಕೆ ದರ್ಶನ್ ಅವರೇ ಮಗನಾಗಿ ನಿಂತಿದ್ದರು.. ಈ ವರ್ಷ ಸ್ವತಃ ದರ್ಶನ್ ಅವರು ಆ ಘಟನೆಯನ್ನು ನೆನೆದು ಯಾರೂ ದೂರದ ಊರುಗಳಿಂದ ಬೈಕ್ ಗಳಲ್ಲಿ ಬರಬೇಡು ಎಂದು ಮನವಿ ಮಾಡಿಕೊಂಡಿದ್ದರು..

ಆನಂತರ ಈ ವರ್ಷ ವಿನೀಶ್ ಹುಟ್ಟುಹಬ್ಬಕ್ಕೆ ರಾಕೇಶ್ ಮನೆಯವರನ್ನು ದರ್ಶನ್ ಅವರು ತಮ್ಮ ಮನೆಗೆ ಕರೆಸಿಕೊಂಡಿದ್ದರು. ಈ ಸಮಯದಲ್ಲಿ ಅಭಿಮಾನಿ ರಾಕೇಶ್ ಅವರಿಗೆ ಇರುವ ಇಬ್ಬರು ಅಕ್ಕಂದಿರ ಮದುವೆಯನ್ನು ನಾನೇ ಮಾಡುತ್ತೇನೆ ಎಂದು ದರ್ಶನ್ ಅವರು ರಾಕೇಶ್ ಕುಟುಂಬಕ್ಕೆ ಮಾತು ಕೊಟ್ಟಿದ್ದಾರೆ. ಹೌದು ಇದೀಗ ದರ್ಶನ್ ಅವರ ಈ ನಡವಳಿಕೆಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು ಅಭಿಮಾನಿಗಳು ಹ್ಯಾಟ್ಸ್ ಆಫ್ ಹೇಳಿದ್ದಾರೆ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ