ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಬಾಸ್ ಎಂದರೂ ಕೂಡ ಅವರು ನಾನು ಸದಾ ನಿಮ್ಮ ದಾಸ ಎನ್ನುವಷ್ಟು ಸರಳ ವ್ಯಕ್ತಿತ್ವ ದರ್ಶನ್ ರದ್ದು..

ಅದೇ ರೀತಿಯಾಗಿ ನಿನ್ನೆ ಕಾರ್ಯಕ್ರಮವೊಂದರಲ್ಲಿ ರಾಧಿಕಾ ಕುಮಾರಸ್ವಾಮಿ ಅವರು ತಮಗೇನಾಗಬೇಕೆಂದು ತಿಳಿಸಿದ್ದಾರೆ. ಹೌದು ರಾಧಿಕಾ ಕುಮಾರಸ್ವಾಮಿ ಅವರು ಮೊನ್ನೆಯಷ್ಟೇ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಹುಟ್ಟು ಹಬ್ಬದ ಪ್ರಯುಕ್ತ ರಾಧಿಕಾ ಅವರು ನಟಿಸಿರುವ ಹೊಸ ಸಿನಿಮಾ ದಮಯಂತಿ ಸಿನಿಮಾದ ಟ್ರೈಲರ್ ಬಿಡುಗಡೆ ಸಮಾರಂಭವನ್ನು ನಿನ್ನೆ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದವರು ಮತ್ಯಾರೂ ಅಲ್ಲ.. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು.. ಹೌದು ಸ್ವತಃ ದರ್ಶನ್ ಅವರೇ ಬಂದು ರಾಧಿಕಾ ಅವರ ದಮಯಂತಿ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದರು..

ನಂತರ ಮಾತನಾಡಿದ ಅವರು, ರಾಧಿಕಾ ಕುಮಾರಸ್ವಾಮಿ ಅವರು ನನಗೆ ಸ್ನೇಹಿತರು ಮಾತ್ರ ಅಲ್ಲ.. ಅವರು ನನಗೆ ಸೀನಿಯರ್ ಆಗಬೇಕು.. ನಾನು ಮೆಜೆಸ್ಟಿಕ್ ನಲ್ಲಿ ಅಭಿನಯಿಸುವ ಮೊದಲೇ ಅವರು ಚಿತ್ರರಂಗಕ್ಕೆ ಬಂದಿದ್ದವರು.. ದೊಡ್ಡ ಕಲಾವಿದರು ಅವರು.. ಆನಂತರ ಇಬ್ಬರೂ ಒಟ್ಟಿಗೆ ಮಂಡ್ಯ ಮತ್ತು ಅನಾಥರು ಸಿನಿಮಾದಲ್ಲಿ ನಟಿಸಿದೆವು.

ಅದಾದ ಬಳಿಕ ಇಂದು ವೇದಿಕೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದೇವೆ. ನಿಜಕ್ಕೂ ಇದು ಸಂತೋಷದ ಕ್ಷಣ ಎಂದರು. ಎಷ್ಟೇ ದೊಡ್ಡ ಸ್ಟಾರ್ ಆದರೂ ಕೂಡ ತುಂಬಿದ ವೇದಿಕೆಯಲ್ಲಿ ಒಬ್ಬರು ನಟಿಯನ್ನು ತನಗಿಂತ ಸೀನಿಯರ್ ಅವರು ಎಂದು ಗೌರವ ಕೊಟ್ಟದ್ದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು..

ಇನ್ನು ರಾಧಿಕಾ ಅವರು ಮಾತನಾಡಿ, ಮನೆಯಲ್ಲಿ ನನ್ನ ಮಗಳು ನನ್ನ ಅಣ್ಣನ ಮಕ್ಕಳು ಎಲ್ಲರೂ ದರ್ಶನ್ ಅವರ ದೊಡ್ಡ ಫ್ಯಾನ್ಸ್.. ದರ್ಶನ್ ಅವರು ಮೊದಲಿನಿಂದಲೂ ಅಮ್ಮ ಎಂದೇ ಮಾತನಾಡಿಸುತ್ತಾರೆ. ಶೂಟಿಂಗ್ ಸಮಯದಲ್ಲೂ ಗೌರವದಿಂದ ನಡೆದುಕೊಳ್ಳವ ದೊಡ್ಡ ವ್ಯಕ್ತಿ ಅವರು. ಅವರು ಇಂದು ನಮ್ಮ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದ್ದು, ನನ್ನ ಹುಟ್ಟಿದ ಹಬ್ಬಕ್ಕೆ ದೊಡ್ಡ ಉಡುಗೊರೆ ನೀಡಿದಂತಾಯ್ತು.. ಇದಕ್ಕಿಂತ ಬೇರೆ ಏನು ಉಡುಗೊರೆ ಬೇಕು ಹೇಳಿ ಎಂದು ಮೆಚ್ಚುಗೆಯ ಮಾತನಾಡಿದರು‌.

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ