ಚಾಲೆಂಜಿಂಗ್ ಸ್ಟಾರ್ ದರ್ಶನ್ ರನ್ನು ಸ್ಯಾಂಡಲ್ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಕರೆಯಲಾಗುತ್ತದೆ.. ಸದ್ಯ ಇದೀಗ ಒಡೆಯಾ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದರೆ.. ಅತ್ತ ರಾಬರ್ಟ್ ಚಿತ್ರ ಇನ್ನೇನು ಕೊನೆಯ ಹಂತದಲ್ಲಿದೆ..

ಜೊತೆಗೆ ಇನ್ನೇನು ಡಿಸೆಂಬರ್ 6 ರಂದು ರಾಕ್ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದಲ್ಲಿ ದರ್ಶನ್ ಅವರ ಮುಂದಿನ ಸಿನಿಮಾ ಮದಕರಿ ನಾಯ್ಕ ಸಿನಿಮಾ ಸೆಟ್ಟೇರಲಿದೆ..

ಇದೆಲ್ಲದರ ನಡುವೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕಿರುತೆರೆಗೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.. ಹೌದು ಈಗಾಗಲೇ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಸುದೀಪ್ ಶಿವರಾಜ್ ಕುಮಾರ್, ರವಿಚಂದ್ರನ್, ಜಗ್ಗೇಶ್, ಗಣೇಶ್ ಹೀಗೆ ಬಹಳಷ್ಟು ಸ್ಟಾರ್ ಗಳು ಕಿರುತೆರೆಯಲ್ಲಿ‌ ಮಿಂಚಿದ್ದರು..

ಆದರೆ ದರ್ಶನ್ ಅವರು ಮಾತ್ರ ಸಿನಿಮಾ ಬಿಟ್ಟು ಮತ್ತೆಲ್ಲೂ ಕಾಣಿಸಿಕೊಳ್ಳುತ್ತಿರಲಿಲ್ಲ.. ಜಾಹೀರಾತಿನಲ್ಲಿಯೂ ಕೂಡ ದರ್ಶನ್ ಕಾಣಿಸಿಕೊಳ್ಳುತ್ತಿರಲಿಲ್ಲ.. ಕೆಲ ದಿನಗಳ ಹಿಂದೆ ವಾಹಿನಿಯೊಂದರ ಒಂದೇ ಒಂದು ಜಾಹಿರಾತಿನಲ್ಲಿ ಮಾತ್ರ ಕಾಣಿಸಿಕೊಂಡಿದ್ದರಷ್ಟೇ.. ಅದನ್ನು ಹೊರತು ಪಡಿಸಿ ಕಿರುತೆರೆಗೂ ದರ್ಶನ್ ರಿಗೂ ಅಜಗಜಾಂತರವೆಂದೇ ಹೇಳಬಹುದು..

ಆದರೆ ಈಗ ಕಿರುತೆರೆಯಲ್ಲಿಯೂ ದರ್ಶನ್ ಅವರ ಆರ್ಭಟ ಶುರುವಾಗಲಿದೆ ಎಂಬ ಮಾಹಿತಿ ತಿಳಿದುಬಂದಿದೆ.. ಹೌದು ಖಾಸಗಿ ವಾಹಿನಿಯೊಂದರ ಶೋ ವೊಂದನ್ನು ದರ್ಶನ್ ಅವರು ನಿರೂಪಣೆ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.. ಆದರೆ ಯಾವ ವಾಹಿನಿ ಯಾವ ಶೋ ಅನ್ನೋದು ಮಾತ್ರ ಇನ್ನೂ ರಿವೀಲ್ ಮಾಡಿಲ್ಲ..

ದರ್ಶನ್ ಅವರು ಶೋ ನಿರೂಒಅಣೆ ಮಾಡೋದು ಬಹುತೇಕ ಖಚಿತವೆಂದೇ ಹೇಳಲಾಗುತ್ತಿದ್ದು, ಇನ್ನು ಮುಂದೆ ಡಿ ಬಾಸ್ ಅಭಿಮಾನಿಗಳಿಗೆ ಹಬ್ಬವೆಂದೇ ಹೇಳಬಹುದಾಗಿದೆ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ