ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನ ಅಭಿಮಾನಿಗಳು ಪ್ರೀತಿಯಿಂದ ಬಾಸ್ ಬಾಸ್ ಎಂದು ಕರೆಯುತ್ತಿದ್ದರು.. ಬರು ಬರುತ್ತಾ ಅದು ಡಿ ಬಾಸ್ ಎಂದಾಯಿತು.. ಎಷ್ಟರ ಮಟ್ಟಕ್ಕೆ ಈಗ ಆ ಹೆಸರು ಚಾಲ್ತಿಯಲ್ಲಿದೆ ಎಂದರೆ ಸಿನಿಮಾ ಇಂಡಸ್ಟ್ರಿ ಅವರೂ ಕೂಡ ಡಿ ಬಾಸ್ ಎಂದೇ ಕರೆಯುತ್ತಾರೆ.‌ಅಷ್ಟೇ ಏಕೆ ಮಾಧ್ಯಮದವರೂ ಕೂಡ ಡಿ ಬಾಸ್ ಎಂದೇ ಸುದ್ದಿ ಬಿತ್ತರಿಸುತ್ತಾರೆ ಅಷ್ಟರ ಮಟ್ಟಕ್ಕೆ ದರ್ಶನ್ ಅವರನ್ನು ಡಿ ಬಾಸ್ ಎಂದು ಒಪ್ಪಿಕೊಳ್ಳಲಾಗಿದೆ.

ಇಂತಹ ಡಿ ಬಾಸ್ ತಮ್ಮ ಅಭಿಮಾನಿಗಳನ್ನು ಸೆಲಿಬ್ರೆಟಿಗಳೆಂದು ಕರೆಯುವುದು ಎಲ್ಲರಿಗೂ ತಿಳಿದಿದೆ. ಆದರೆ ದರ್ಶನ್ ಅವರು ಒಬ್ಬರನ್ನ ಮಾತ್ರ ದಾದಾ ಎಂದೇ ಪ್ರೀತಿಯಿಂದ ಕರೆಯುತ್ತಾರೆ. ಅವರ್ಯಾರು? ಅವರು ನಮ್ಮ ನಾಡಿನ ಹೆಮ್ಮೆಯ ಮಾಣಿಕ್ಯಗಳಲ್ಲಿ ಒಬ್ಬರು..

ಹೌದು ಅವರು ಮತ್ಯಾರೂ ಅಲ್ಲ.. ಕನ್ನಡ ನಾಡಿನ ಸಾಹಸಸಿಂಹ ಡಾ.ವಿಷ್ಣು ವರ್ಧನ್ ಅವರು.. ದರ್ಶನ್ ಅವರು ಈಗಲೂ ವಿಷ್ಣುವರ್ಧನ್ ಅವರ ಬಗ್ಗೆ ಮಾತನಾಡುವಾಗ ದಾದಾ ಎಂದೇ ಮಾತನಾಡುತ್ತಾರೆ.. ಕನ್ನಡಿಗರ ಯಜಮಾನ ಎನ್ನುತ್ತಾರೆ.

ಕಳೆದ ಸೆಪ್ಟೆಂಬರ್ 18 ರಂದು ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ದಿನದಂದೂ ಕೂಡ ಅವರನ್ನು ಸ್ಮರಿಸುವಾಗಲೂ ದಾದಾ ಎಂದೆ ಕರೆದು ಹುಟ್ಟುಹಬ್ಬದ ಶುಭ ಕೋರಿದ್ದರು.. ಇಲ್ಲಿದೆ ನೋಡಿ ದರ್ಶನ್ ಅವರು ಬರೆದ ಸಾಲುಗಳು.. “ಕನ್ನಡಿಗರ ಯಜಮಾನ, ನಮ್ಮೆಲ್ಲರ ನಲ್ಮೆಯ ‘ಅಭಿನಯ ಭಾರ್ಗವ’ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಸರ್ ರವರ ಜನ್ಮದಿನೋತ್ಸವ ಇಂದು. ಯುಗ ಯುಗಗಳೇ ಸಾಗಲಿ ನಮ್ಮ ಪ್ರೀತಿ ಶಾಶ್ವತ.. ಹ್ಯಾಪಿ ಬರ್ತ್ ಡೇ ವಿಷ್ಣು ದಾದಾ..” ಎಂದು ಬರೆದು ಈ ಬಂಧನ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರೊಟ್ಟಿಗೆ ತೆಗೆದ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು..

ಇವೆಲ್ಲವನ್ನು ನೋಡಿದಾಗ ಮನಸ್ಸಿನ ಮೂಲೆಯಲ್ಲೆಲ್ಲೋ ವಿಷ್ಣುವರ್ಧನ್ ಅವರು ಇದ್ದಿದ್ದರೆ ಎನ್ನುವ ನೆರವೇರದ ಆಸೆಯೊಂದು ಹಾದು ಹೋಗುತ್ತದೆ.. ಅದೇನೇ ಆಗಲಿ ದರ್ಶನ್ ಅವರು ಹೇಳಿದ ಹಾಗೆ ಡಾ.ವಿಷ್ಣುವರ್ಧನ್ ಅವರು ಅಭಿಮಾನಿಗಳ ಮನಸ್ಸಿನಲ್ಲಿ ಎಂದೆಂದೂ ಶಾಶ್ವತ..

Leave comment

Your email address will not be published. Required fields are marked with *.

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ