ಸ್ಯಾಂಡಲ್ವುಡ್ ನ ಆಕ್ಷನ್ ಪ್ರಿನ್ಸ್ ಧೃವ ಸರ್ಜಾ ತನ್ನ ಬಾಲ್ಯದ ಗೆಳತಿ ಪ್ರೇರಣಾ ಅವರೊಂದಿಗೆ ಇದೇ ನವೆಂಬರ್ 24 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ಈಗಾಗಕೇ ಆಪ್ತರು ಸ್ನೇಹಿತರ ಮನೆಗೆ ಖುದ್ದು ಧೃವ ಸರ್ಜಾ ಅವರೇ ತೆರಳಿ ಮದುವೆ ಆಮಂತ್ರಣ ಪತ್ರಿಕೆ ನೀಡಿ ಬರುತ್ತಿದ್ದಾರೆ.

ಇತ್ತ ಸಾಮಾಜಿಕ ಜಾಲತಾಣದ ತುಂಬೆಲ್ಲಾ ಧೃವ ಸರ್ಜಾ ಅವರ ಮದುವೆ ಇನ್ವಿಟೇಷನ್ ನದ್ದೇ ವೀಡಿಯೋ ಫೋಟೋಗಳು ಹರಿದಾಡುತ್ತಿವೆ. ಅದ್ಧೂರಿ ಹುಡುಗನ ಮದುವೆ ಆಮಂತ್ರಣ ಪತ್ರಿಕೆ ಕೂಡ ಭರ್ಜರಿಯಾಗಿಯೇ ಇದ್ದು, ಮದುವೆ ಪತ್ರಿಕೆ ಎನ್ನುವುದಕ್ಕಿಂತ ದೊಡ್ಡ ಪುಸ್ತಕದಂತೆ ಭಾಸವಾಗುತ್ತದೆ.. ಪತ್ರಿಕೆ ತುಂಬೆಲ್ಲಾ ಆಂಜನೇಯಸ್ವಾಮಿಯ ಫೋಟೋಗಳೇ ರಾರಾಜಿಸುತ್ತಿದೆ.

ಬಹುಶಃ ಮದುವೆ ಮುಗಿದರೂ ಕೂಡ ಯಾರೂ ಆಮಂತ್ರಣ ಪತ್ರಿಕೆಯನ್ನು ಬಿಸಾಡುವುದಿಲ್ಲ.. ಬದಲಾಗಿ ಗಿಫ್ಟ್ ಬಾಕ್ಸ್ ರೀತಿ ಬಳಸಿಕೊಳ್ಳಲೂಬಹುದಾಗಿದೆ..

ಇನ್ನು ಮೇಲ್ಭಾಗದಲ್ಲಿ ಆಂಜನೇಯನ ಅದ್ಭುತ ಫೋಟೋ ಇದ್ದು, ಪತ್ರಿಕೆ ತೆರೆಯುತ್ತಿದ್ದಂತೆ ಧೃವ ಪ್ರೇರಣಾರ ಫೋಟೋ ಕಾಣುತ್ತದೆ.. ಬಲಭಾಗದಲ್ಲಿ ಇಂಗ್ಲೀಷ್ ಹಾಗೂ ಕನ್ನಡ ಎರಡರಲ್ಲೂ ಪತ್ರಿಕೆ ಇದ್ದು, ಮುಹೂರ್ತ ಹಾಗೂ ಸ್ಥಳ ಮತ್ತು ರೂಟ್ ಮ್ಯಾಪ್ ನ ಮಾಹಿತಿ ಇದೆ.. ಜೊತೆಗೆ ಆಂಜನೇಯಸ್ವಾಮಿ ಚಿತ್ರವಿರುವ ಎರಡು ಪುಟ್ಟ ಡಬ್ಬಿಗಳಲ್ಲಿ ಹರಿಷಿಣ ಕುಂಕುಮ ಮತ್ತು ಕೇಸರಿ ಇದೆ.. ಹಾಗೂ ಪತ್ರಿಕೆ ತೆಗೆದು ನೋಡಿದರೆ ಹಸಿರಿನ ಗಾಜಿನ ಬಳೆಗಳು ಮತ್ತು ಹರಿಷಿಣದ ಕೊಂಬೊಂದನ್ನು ಉಡುಗೊರೆಯಾಗಿ ನೀಡಲಾಗಿದೆ.

ಒಟ್ಟಿನಲ್ಲಿ ಇದು ಆಂಜನೇಯನ ಭಕ್ತನ ಮದುವೆ ಎಂದು ಪತ್ರಿಕೆ ನೋಡಿದೊಡನೆ ಅರ್ಥವಾಗಿ ಬಿಡುತ್ತದೆ.. ಇನ್ನು ಇಂತಹ ಅದ್ಧೂರಿ ಪತ್ರಿಕೆಗೆ ಧೃವ ಸರ್ಜಾ ಮಾಡಿರುವ ಖರ್ಚು ನಿಜಕ್ಕೂ ಆಶ್ಚರ್ಯವನ್ನುಂಟು ಮಾಡುತ್ತದೆ.

ಹೌದು ಧೃವ ಅವರ ಮದುವೆಯ ಒಂದು ಆಮಂತ್ರಣ ಪತ್ರಿಕೆಯ ಬೆಲೆ ಬರೋಬ್ಬರಿ 15 ಸಾವಿರ ರೂಪಾಯಿಗಳು.. ಮದುವೆಯ ನಂತರವೂ ನಮ್ಮ ಮದುವೆಯ ನೆನಪು ಸ್ನೇಹಿತರ ಬಳಿ ಇರಲೆಂದು ಸ್ವತಃ ಧೃವ ಸರ್ಜಾ ಅವರೇ ಡಿಸೈನ್ ಮಾಡಿಸಿರುವ ಆಮಂತ್ರಣ ಪತ್ರಿಕೆ ಇದಾಗಿದೆ.

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ