ರಾಜ್ಯ ರಾಜಕೀಯ ಮುಖಂಡರು ಅದೇಕೋ ದಿನಕ್ಕೊಂದು ವಿವಾದದ ಹೇಳಿಕೆಗಳನ್ನು ನೀಡಿ ಜನರ ಮುಂದೆ ಸಣ್ಣವರು ಎನಿಸಿಕೊಳ್ಳುತ್ತಿದ್ದಾರೆ ಎಂದರೆ ತಪ್ಪಲ್ಲ. ನಿನ್ನೆಯಷ್ಟೇ ಈರ್ಶವರಪ್ಪ ಅವರು ಕಾಂಗ್ರೆಸ್ ಅವರೆಲ್ಲಾ ನರ ಸತ್ತ ನಾಮರ್ದರು ಎಂದು ಹೇಳಿಕೆ ನೀಡಿದ್ದರು. ಇದೀಗ ಈಶ್ವರಪ್ಪ ಅವರ ಈ ಮಾತಿಗೆ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.
ಹೌದು ಇಂದು ಡಿಕೆಶಿವಕುಮಾರ್ ಅವರು ತಮ್ಮ ೫೮ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಖಸಗಿ ಹೊಟೆಲ್ ನಲ್ಲಿ ಅಭಿಮಾನಿಗಳೊಂದಿಗೆ ಕೇಕ್ ಕತ್ತರಿಸಿ ಸಂಭ್ರಮ ಹಂಚಿಕೊಂಡಿದ್ದಾರೆ.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, ಈಶ್ವರಪ್ಪ ಅವರು ಕಾಂಗ್ರೆಸ್ ಅವರನ್ನು ನರ ಸತ್ತವರು ಎಂದಿದ್ದಕ್ಕೆ ತಿರುಗೇಟು ನೀಡಿದ್ದಾರೆ.
ಹೌದು ಈ ಕುರಿತು ಮಾತನಾಡಿದ ಡಿಕೆಶಿವಕುಮಾರ್ ಅವರು, ನರ ಇದೆಯೋ ಸತ್ತಿದೆಯೋ ಅಂತ ಪರೀಕ್ಷೆ ಮಾಡೋ ಶಕ್ತಿ ಅವರಿಗಿದ್ದರೆ ನಮ್ಮ ಜನ ತೋರಿಸುತ್ತಾರೆ. ನರ, ಗಂಡಸ್ತನದ ಬಗ್ಗೆ ಪರೀಕ್ಷೆ ಕೊಟ್ಟು ನೋಡಲಿ. ಗಂಡಸ್ತನದ ಬಗ್ಗೆ ಪರೀಕ್ಷೆ ಮಾಡಿಸಲಿ. ಆಗ ಯಾರು ಗಂಡಸು, ನರ ಸತ್ತವರು ಅನ್ನೋದು ತಿಳಿಯುತ್ತದೆ ಎಂದು ಸವಾಲ್ ಹಾಕಿದ್ದಾರೆ.

ಅಷ್ಟೇ ಅಲ್ಲದೆ ಈಶ್ವರಪ್ಪ ಅವರಿಂದಲೇ ನಮ್ಮ ಪಕ್ಷಕ್ಕೆ ಶ್ರೇಯಸ್ಸಾಗುತ್ತಿದೆ. ಅವರು ಈ ರೀತಿ ಕೆಟ್ಟದಾಗಿ ಮಾತನಾಡುವುದರಿಂದ ಅವರ ಸಂಸ್ಕೃತಿ ಜನರಿಗೆ ತಿಳಿಯುತ್ತದೆ ಎಂದಿದ್ದಾರೆ. ಇಂತಹವರ ರಾಜಕೀಯ ನೋಡೋಕೆ ಅಸಹ್ಯ ಆಗುತ್ತಿದೆ. ಇವರಿಗೆ ಅಧಿಕಾರ ಇಲ್ಲದಿದ್ದರೆ ಇರೋಕೆ ಆಗೋದೆ ಇಲ್ವಾ, ಅಧಿಕಾರ ಇದ್ದಾಗ ಬಳಸಿಕೊಳ್ಳಲಿಲ್ಲ. ಈಗ ಈ ರೀತಿ ಕೀಳು ಮಟ್ಟದಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದಿದ್ದಾರೆ.

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ