ಕಳೆದ 14 ದಿನಗಳಿಂದ ಇಡಿ ಕಸ್ಟಡಿಯಲ್ಲಿರುವ ಡಿ ಕೆ ಶಿವಕುಮಾರ್ ಅವರಿಗೆ ಇಂದು ಬೇಲ್ ಸಿಗುವ ನಿರೀಕ್ಷೆ ಇತ್ತು.. ಆದರೆ ಎಲ್ಲಾ ನಿರೀಕ್ಷೆಗಳು ಹುಸಿಯಾಗಿದ್ದು.. ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.. ಡಿಕೆ ಶಿವಕುಮಾರ್ ಅವರಿಗೆ ಹೈಬಿಪಿ ಇರುವ ಕಾರಣ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಡಾಕ್ಟರ್ ಬಳಿ ತಪಾಸಣೆ ಮಾಡಿಸಿ.. ನಂತರ ಡಾಕ್ಟರ್ ಏನು ಹೇಳುತ್ತಾರೋ ಹಾಗೆ ಮಾಡಿ.. ಡಾಕ್ಟರ್ ಏನಾದರೂ ಫಿಟ್ ನೆಸ್ ಸರ್ಟಿಫಿಕೇಟ್ ಕೊಟ್ಟರೆ ಕಸ್ಟಡಿಗೆ ತೆಗೆದುಕೊಳ್ಳಿ.. ಇಲ್ಲವಾದರೆ ಚಿಕಿತ್ಸೆ ಮುಂದುವರೆಸಿ ಎಂದು ತೀರ್ಪು ನೀಡಲಾಗಿದೆ..

ಇವೆಲ್ಲದರ ನಡುವೆ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದ್ದು.. ಕಾಂಗ್ರೆಸ್ ನ ಮಹಿಳಾ ನಾಯಕಿಯ ಸಹೋದರನ ಹೆಸರಿನಲ್ಲಿ ಡಿ ಕೆ ಶಿವಕುಮಾರ್ ಅವರ ಬೇನಾಮಿ ಆಸ್ತಿ ಇದೆ ಎಂಬುದು ತಿಳಿದುಬಂದಿದ್ದು ಇದೀಗ ಆ ನಾಯಕಿಗೆ ಇಡಿ ತನಿಖೆಗೆ ಹಾಜರಾಗುವಂತೆ ನೋಟೀಸ್ ನೀಡಿದೆ..

ಹೌದು ಕಾಂಗ್ರೆಸ್ ನ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಸಹೋದರನ ಹೆಸರಿನಲ್ಲಿ ಡಿಕೆ ಶಿವಕುಮಾರ್ ಅವರು ಬೇನಾಮಿಯಾಗಿ ಆಸ್ತಿ ಮಾಡಿದ್ದಾರೆ ಎಂಬ ಅನುಮಾನ ಮೂಡಿರುವ ಹಿನ್ನೆಲೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ತನಿಖೆಗೆ ಹಾಜರಾಗುವಂತೆ ತಿಳಿಸಲಾಗಿದೆ.. ಅಷ್ಟೇ ಅಲ್ಲದೆ ಲಕ್ಷ್ಮಿ ಹೆಬ್ಬಾಳ್ಕರ್ ಅವರೊಡನೆ ಡಿಕೆಶಿ ಅವರು ಫೋನ್ ನಲ್ಲಿ ಮಾತನಾಡಿರುವ ಕಾಲ್ ಲಿಸ್ಟ್ ಕೂಡ ತನಿಖಾಧಿಕಾರಿಗಳ ಕೈ ಸೇರಿದ್ದು.. ಎಲ್ಲಾ ಸಾಕ್ಷಿಗಳನ್ನು ಇಟ್ಟುಕೊಂಡು ನೋಟೀಸ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ.. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನೋಟೀಸ್ ನೀಡಿರುವುದು ನಿಜ..‌ ನಾನು ತನಿಖೆಗೆ ಹಾಜರಾಗುತ್ತೇನೆ ಎಂದು ತಿಳಿಸಿದ್ದಾರೆ..

ಇತ್ತ ಎದೆ ನೋವು ಎಂದರೂ ಬೇಲ್ ಸಿಗದೇ ಹೋದದ್ದು ಡಿಕೆಶಿ ಪರ ವಕೀಲರಿಗೆ ಹಿನ್ನೆಡೆಯಾಗಿದೆ.. ಕೋರ್ಟ್ ಆದೇಶದಂತೆ ಜೈಲಿನ ಪೊಲೀಸರು ವಶಕ್ಕೆ ಪಡೆದಿದ್ದಾರೆ.. ನಾಳೆ ಜಾಮೀನು ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ.. ಆದರೆ ನಾಳೆ ಡಿಕೆಶಿ ಕೋರ್ಟ್ಗೆ ಹಾಜರಾಗಬೇಕಾಗಿಲ್ಲ.. ಚಿಕಿತ್ಸೆ ಪಡೆಯಬಹುದಾಗಿದೆ.. ನಾಳೆ ಕೋರ್ಟ್ ನಲ್ಲಿ ಜಾಮೀನು ಸಿಕ್ಕರೆ ತಾತ್ಕಾಲಿಕ ರಿಲೀಫ್ ಸಿಗಲಿದೆ.. ಆದರೆ ಮೂಲಗಳ ಪ್ರಕಾರ ಜಾಮೀನು ಸಿಗುವುದು ಸಂದೇಹವಾಗಿದ್ದು ನ್ಯಾಯಾಂಗ ಬಂಧನ ಮುಂದುವರೆಯುವ ಸಾಧ್ಯತೆಗಳು ಹೆಚ್ಚಿವೆ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ