ಸದ್ಯ ಎಲ್ಲೆಲ್ಲೂ ಪ್ರೇಮಿಗಳ ದಿನಾಚರಣೆಯದ್ದೇ ವಿಚಾರಗಳ ವಿನಿಮಯ ನಡೆಯುತ್ತಿದೆ.. ನಿಜ ಹೇಳಬೇಕೆಂದರೆ ಪ್ರೇಮಿಗಳ ದಿನದ ಕ್ರೇಜ್ ಹೆಚ್ಚಾಗೋದೆ ಈ ನಮ್ಮ ಸೆಲಿಬ್ರೆಟಿಗಳಿಂದ.. ಅದೇ ರೀತಿ ಪ್ರೇಮಿಗಳ ದಿನಕ್ಕೆ ಹೊಸ ಹೊಸ ಸಿನಿಮಾದ ಟೀಸರ್ ಗಳು ಟ್ರೈಲರ್ ಗಳು ಬಿಡುಗಡೆಯಾಗೋದು ಕಾಮನ್..

ಆದರೆ ಬಿಡುಗಡೆಯಾದ ಎಲ್ಲಾ ಟ್ರೈಲರ್ ಗಳು ಸ್ಪೆಷಲ್ ಆಗೋದಿಲ್ಲ.. ಕೆಲವೊಂದು ಮಾತ್ರ ಸಿಕ್ಕಾಪಟ್ಟೆ ಸದ್ದು ಮಾಡುತ್ತದೆ.. ಹೌದು ಅದೇ ರೀತಿ ಸದ್ಯ ವ್ಯಾಲೆಂಟೈನ್ ಡೇ ಸ್ಪೆಷಲ್ ಆಗಿ ಬಿಡುಗಡೆಯಾಗಿರುವ ಪ್ರೇಮ್ ಅವರ ನಿರ್ದೇಶನದ ರಾಣಾ ಹಾಗೂ ರಚಿತಾ ರಾಮ್ ಅಭಿನಯದ ಏಕ್ ಲವ್ ಯಾ ಸಿನಿಮಾದ ಟ್ರೈಲರ್ ಸಿಕ್ಕಾಪಟ್ಟೆ ವೈರಲ್ ಆಗಿದೆ..

ಮೊದಲ ಸಿನಿಮಾ ಆದರೂ ಕೂಡ ರಾಣ ಅವರ ಅಭಿನಯ ನಿಜಕ್ಕೂ ಸ್ಯಾಂಡಲ್ವುಡ್ ನಲ್ಲಿ ಭರವಸೆಯ ನಟನಾಗೋದ್ರಲ್ಲಿ ಯಾವುದೇ ಸಂಶಯವಿಲ್ಲ.. ಇನ್ನು ನಮ್ಮ ಎವರ್ ಗ್ರೀನ್ ರಚಿತಾ ರಾಮ್ ಅವರು ಈ ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಲಿಪ್ ಲಾಕ್ ಸೀನ್ ಒಂದನ್ನು ಟ್ರೈಲರ್ ನಲ್ಲಿ ತೋರಿಸಲಾಗಿದೆ..

ಪ್ರೇಮಿಗಳ ದಿನದಂದು ಏಕ್ ಲವ್ ಯಾ ದ ಟ್ರೈಲರ್ ಪಡ್ಡೆ ಹೈಕ್ಲ ನಿದ್ದೆ ಗೆಡಿಸುವಂತಿದೆ ಎಂದರೂ ತಪ್ಪಾಗಲಾರದು.. ಒಟ್ಟಿನಲ್ಲಿ ಹಲವು ವರ್ಷಗಳ ಬಳಿಕ ಮತ್ತೆ ಪ್ರೇಮ್ ಅವರು ಕಂಪ್ಲೀಟ್ ಲವ್ ಸ್ಟೋರಿ ಒಂದನ್ನು ಮಾಸ್ ಎಲಿಮೆಂಟ್ ಗಳ ಜೊತೆಗೆ ಸಿನಿ ರಸಿಕರ ಮುಂದೆ ತರುತ್ತಿರುವುದು ಸಂತೋಷದ ವಿಚಾರ.. ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿರುವ ಟ್ರೈಲರ್ ಸಿನಿಮಾ ಮೇಲಿನ ಕುತೂಹಲವನ್ನು ಹೆಚ್ಚಿಸಿದೆನ್ನಬಹುದು..