ಜೊತೆಜೊತೆಯಲಿ ಧಾರಾವಾಹಿಯಲ್ಲಿ ತಾನು ಮಾಡದ ತಪ್ಪಿನ ಹೊಣೆ ಹೊತ್ತ ಅನುಗೆ ಮತ್ತೊಂದು ಸಂಕಷ್ಟ ಕಾದಿತ್ತು.. ಅದುವೇ ಹರ್ಷವರ್ಧನ್.. ಹೌದು ಹರ್ಷವರ್ಧನ್ ತೆಗೆದುಕೊಳ್ಳುವ ನಿರ್ಧಾರವನ್ನು ಆರ್ಯವರ್ಧನ್ ಮರು ಪ್ರಶ್ನೆ ಮಾಡುವುದಿಲ್ಲವೆಂಬುದನ್ನು ತಿಳಿದಿರುವ ಮೀರಾಜಿ ಅನು ಮಾಡದ ತಪ್ಪನ್ನು ಹರ್ಷವರ್ಧನ್ ಬಳಿ ಹೇಳಿ ಕೆಲಸದಿಂದ ತೆಗೆದು ಹಾಕಿಸುವ ಸಲುವಾಗಿ ಆರ್ಯನಿಗೆ ತಿಳಿಯದಂತೆ ಮೀಟಿಂಗ್ ಕೂಡ ಅರೇಂಜ್ ಮಾಡಿದ್ದರು.

ಹರ್ಷವರ್ಧನ್ ಹೇಳಿದ ಸಮಯಕ್ಕೆ ಎಲ್ಲರೂ ಮೀಟಿಂಗ್ ಗೆ ಹಾಜರಾದರು.. 20 ವರ್ಷದ ಹಳೇ ಫೈಲ್ ಗಳು ಡಿಲೀಟ್ ಆಗಿವೆ ಎಂಬ ಕಾರಣಕ್ಕೆ ಅನುವನ್ನು ತಪ್ಪಿನ ಹೊಣೆಗಾರಳನ್ನಾಗಿ ಮಾಡುತ್ತಿರುವಾಗಲೇ..‌ ಅಂದುಕೊಂಡದ್ದನ್ನು ಸಾಧಿಸಿದ ಖುಷಿ ಮೀರಾ ಅವರ ಮುಖದಲ್ಲಿ ಕಂಡಿತ್ತು..

ಆದರೆ ಅಷ್ಟರಲ್ಲಾಗಲೇ ಆಫೀಸಿಗೆ ಬಂದ ಆರ್ಯ ಅನು ತನ್ನ ಜಾಗದಲ್ಲಿ ಇಲ್ಲದನ್ನು ನೋಡಿ ಎಫ್ ಎಂ ಬಳಿ ಮೀಟಿಂಗ್ ವಿಷಯವನ್ನು ತಿಳಿದರು..‌ ಇತ್ತ ಅನುವನ್ನು ಮೋಸದ ಬಲೆಯಲ್ಲಿ ಸಿಗಿಸುವ ಪ್ರಯತ್ನದಲ್ಲಿ ಮೀರಾ ಇದ್ದರು.. ಆದರೆ ಅಷ್ಟಕ್ಕೆ ಮೀಟಿಂಗ್ ರೂಮಿಗೆ ಹೀರೋ ಎಂಟ್ರಿ ಆಯಿತು.. ಏನ್ ನಡಿತಾ ಇದೆ ಎಂದು ಆರ್ಯವರ್ಧನ್ ಕೇಳಿದ ಕೂಡಲೇ ಇದ್ದವರೆಲ್ಲಾ ತಬ್ಬಿಬ್ಬಾದರು..

ನಡೆದದ್ದನು ಹರ್ಷವರ್ಧನ್ ವಿವರಿಸಿ ಅನು ತಪ್ಪು ಮಾಡಿದ್ದಾಳೆ ಎನ್ನುತ್ತಿದ್ದಂತೆ.. ಅಲ್ಲಿಯೇ ಇದ್ದ ನೀಲ್ ಸಮಸ್ಯೆ ಬಗೆ ಹರಿದಿದೆ.. ಎಲ್ಲಾ ಫೈಲ್ ರೀಸ್ಟೋರ್ ಆಗಿದೆ.. ಫೈಲ್ ಮತ್ತೆ ಸಿಗಲು ಅನುನೇ ಕಾರಣ ಎನ್ನಲೂ ಆರ್ಯವರ್ಧನ್ ರಿಂದ ಅನು ಹಾಗೂ ನೀಲ್ ಇಬ್ಬರಿಗೂ ಪ್ರಶಂಸೆ ಕೂಡ ಸಿಕ್ಕಿತು..

ಆದರೆ ಅಷ್ಟಕ್ಕೆ ಮುಗಿಯದ ಮೀಟಿಂಗ್.. ತನಗೆ ತಿಳಿಯದಂತೆ ಮೀಟಿಂಗ್ ಅರೇಂಜ್ ಮಾಡಿದ್ದಕ್ಕೆ ಮೀರಾರನ್ನು ತರಾಟೆಗೆ ತೆಗೆದುಕೊಂಡ ಆರ್ಯವರ್ಧನ್ ಮೀರಾ ವಿರುದ್ಧ ತಿರುಗಿಬಿದ್ದಿದ್ದಾರೆ.. ಸ್ವಲ್ಪನಾದರೂ ಸೀರಿಯಸ್ ನೆಸ್ ಇದೆಯಾ ಎಂದು ಗುಡುಗಿದ್ದಾರೆ. ಇನ್ನು ಆರ್ಯವರ್ಧನ್ ರ ಮಾತಿಗೆ ಮೀರಾ ಅವರ ರಿಯಾಕ್ಷನ್ ಏನು.. ಸರಿಯಾದ ಸಮಯಕ್ಕೆ ಆರ್ಯ ಬಂದು ಅನುವನ್ನು ಕಾಪಾಡಿದ್ದಕ್ಕೆ ಮುಂದೆ ಆರ್ಯ ಅನು ನಡುವೆ ನಡೆಯಬಹುದಾದ ಮಾತುಕತೆಯಾದರೂ ಏನು ಎಂಬುದನ್ನು ಇಂದಿನ ಸಂಚಿಕೆವರೆಗೂ ಕಾದು ನೋಡಬೇಕಿದೆ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ