ಜೀ ವಾಹಿನಿಯ ಪ್ರಖ್ಯಾತ ಧಾರಾವಾಹಿ ಕಮಲಿ ಧಾರಾವಾಹಿ ತಂಡದವರ ಹಣಕ್ಕಾಗಿ ನಡೆಯುತ್ತಿದ್ದ ಒಳಜಗಳ ಇದೀಗ ಬೀದಿಗೆ ಬಿದ್ದಿದೆ.. ಸಹ ನಿರ್ಮಾಪಕ ಪೋಲೀಸರಿಗೆ ದೂರು ಸಹ ನೀಡಿದ್ದಾರೆ.. ಅಷ್ಟಕ್ಕೂ ಇಲ್ಲಿ ನಡೆದಿರುವ ನಿಜ ಘಟನೆಯಾದರೂ ಏನು ಗೊತ್ತಾ?

ಕಮಲಿ ಧಾರಾವಾಹಿಯ ನಿರ್ಮಾಪಕ ಕಂ ನಿರ್ದೇಶಕ ಅರವಿಂದ್ ಕೌಶಿಕ್, ಪತ್ನಿ ಶಿಲ್ಪಾ, ನವೀನ್ ಸಾಗರ್ ಹಾಗೂ ಜೀ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರ ವಿರುದ್ಧ ಅದೇ ಧಾರಾವಾಹಿಯ ಮತ್ತೊಬ್ಬ ನಿರ್ಮಾಪಕ ರೋಹಿತ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.. “ಧಾರಾವಾಹಿಯ ಲಾಭಾಂಶ ನೀಡುತ್ತಿಲ್ಲ.. ಜೊತೆಗೆ ನನ್ನ ಹೆಸರನ್ನು ತೆಗೆದು ಹಾಕಲಾಗಿದೆ” ಎಂಬುದು ರೋಹಿತ್ ಅವರ ದೂರಾಗಿದೆ..

ಆದರೆ ಈ ಬಗ್ಗೆ ಧಾರಾವಾಹಿಯ ನಿರ್ದೇಶಕ ಹಾಗೂ ನಿರ್ಮಾಪಕ ಆಗಿರುವ ಅರವಿಂದ್ ಕೌಶಿಕ್ ಅವರು ಹೇಳೊದೆ ಬೇರೆ.. ಇಲ್ಲಿದೆ ನೋಡಿ.. “ನಾನು ನನ್ನ ಪತ್ನಿ ಶಿಲ್ಪಾ ಹಾಗೂ ನವೀನ್ ಸಾಗರ್ ಮೂವರು ಸೇರಿಕೊಂಡು ಸತ್ವ ಮೀಡಿಯಾ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿದ್ವಿ.. ಆ ಸಂಸ್ಥೆಗೆ ಜೀ ವಾಹಿನಿಯವರು ಒಂದು ಸ್ಲಾಟ್ ಕೊಟ್ಟು ಒಂದು ಧಾರಾವಾಹಿ ಮಾಡಿಕೊಡಿ ಎಂದರು.. ಆದರೆ ನಮ್ಮ ಬಳಿ ಅಷ್ಟೊಂದು ಬಂಡವಾಳ ಇರಲಿಲ್ಲ.. ಈ ವಿಚಾರ ತಿಳಿದಿದ್ದ ಫೈನಾನ್ಸ್ ನ ರೋಹಿತ್ ಅವರು ನಮ್ಮನ್ನು ಹತ್ತಾರು ಬಾರಿ ಸಂಪರ್ಕಿಸಿ ಫೈನಾನ್ಸ್ ನೀಡುವುದಾಗಿ ಹೇಳಿದರು.. ಅವರು ಪರಿಚಯ ಇದ್ದ ಕಾರಣ ನಾನು ಕೂಡ ಒಪ್ಪಿಕೊಂಡೆ.. ಫೈನಾನ್ಸ್ ನೀಡಲು ಶುರು ಮಾಡಿದ ನಂತರ ಅವರು ನನಗೂ ಒಂದು ಹೆಸರು ಬೇಕು.. ನನ್ನನ್ನು ನಿರ್ಮಾಪಕ ಎಂದು ಹಾಕಬೇಕು ಎಂದರು..

ನಮ್ಮ ಸಂಸ್ಥೆಗೂ ಜೀ ವಾಹಿನಿಗೂ ಒಪ್ಪಂದ ಆಗಿದ್ದ ಕಾರಣ ಹೆಸರು ಹಾಕುವುದಕ್ಕೆ ನಮಗೆ ಯಾವುದೇ ತೊಂದರೆ ಇರಲಿಲ್ಲ.. ಅದಕ್ಕಾಗಿ ಅವರ ಹೆಸರನ್ನು ನಿರ್ಮಾಪಕರ ಹೆಸರಲ್ಲಿ ಸೇರಿಸಿದ್ವಿ.. ಜೊತೆಗೆ ಸಂಚಿಕೆಗೆ ಇಷ್ಟು ಅಂತ ಹಣವನ್ನು ನೀಡುತ್ತಿದ್ದೆವು.. ಇದೇ ರೀತಿ ಇನ್ನೂ ಕೆಲವರು ಧಾರಾವಾಹಿಗೆ ಫೈನಾನ್ಸ್ ನೀಡಿದ್ದರು..

ಹೇಗೋ ಧಾರಾವಾಹಿ ಶುರು ಆಯಿತು.. ಒಳ್ಳೆಯ ಹೆಸರೂ ಬಂತು.. ಒಳ್ಳೆಯ ಟಿ ಆರ್ ಪಿ ಕೂಡ ಬಂತು.. ಆ ಸಮಯದಲ್ಲಿ ರೋಹಿತ್ ಅವರು ಪ್ರತಿದಿನ ಸೆಟ್ ಗೆ ಬರಲು ಆರಂಭಿಸಿದರು.. ಅಲ್ಲೆಲ್ಲಾ ನಾನೇ ಧಾರಾವಾಹಿಯ ನಿರ್ಮಾಪಕ.. ಇವರೆಲ್ಲಾ ನಡೆಸಿಕೊಂಡು ಹೋಗ್ತಾ ಇದ್ದಾರೆ ಅಷ್ಟೇ.. ಎಂದು ಹೇಳಿಕೊಂಡು ಓಡಾಡುತ್ತಿದ್ದರು.. ನಂತರ ಕೆಲ ಪೇಪರ್ ಗಳಿಗೂ ನಾನೇ ನಿರ್ಮಾಪಕ ಎಂದು ಹೇಳಿಕೊಂಡಿದ್ದರು.. ಆದರೆ ನಾನು ಧಾರಾವಾಹಿಗಾಗಿ ಬೇರೆ ಫೈನಾನ್ಸ್ ಅವರಿಂದಲೂ ಹಣವನ್ನು ತಂದಿದ್ದೆ.. ಅವರೆಲ್ಲಾ ನನ್ನನ್ನು ಪ್ರಶ್ನೆ ಮಾಡಲು ಶುರು ಮಾಡಿದರು.. ದುಡ್ಡು ಪಡೆಯುವಾಗ ನಾನೇ ನಿರ್ಮಾಪಕ ಅಂತ ಹೇಳಿದ್ದೆ.. ಈಗ ರೋಹಿತ್ ನಿರ್ಮಾಪಕ ಅಂತ ಹೇಳಿಕೊಂಡು ಓಡಾಡುತ್ತಿದ್ದಾರೆ ಎಂದು ಪ್ರಶ್ನಿಸುತ್ತಿದ್ದರು ಎಂದರು..

ಅಷ್ಟೇ ಅಲ್ಲದೆ ಧಾರಾವಾಹಿ ಸೆಟ್ ಗೆ ರೋಹಿತ್ ಅವರು ಬಂದು ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದರು.. ಇಷ್ಟಕ್ಕೆ ಸುಮ್ಮನಾಗದೇ ಪ್ರತಿ ಸಂಚಿಕೆಗೂ ದುಡ್ಡು ಕೊಡುತ್ತಿದ್ದರೂ ಕೂಡ ಧಾರಾವಾಹಿ ಟಿ ಆರ್ ಪಿ ಇನ್ನೂ ಹೆಚ್ಚಾಗಬೇಕು ಅಂತ ನಮ್ಮ ಮೇಲೆ ಒತ್ತಡ ಹೇರಲು ಶುರು ಮಾಡಿದರು.. ಫೈನಾನ್ಸ್ ಕೊಟ್ಟಿದ್ದೇನೆ ಎಂದು ಈ ರೀತಿ ಒತ್ತಡ ಹಾಕುವುದು ಸರಿಯಲ್ಲ ಎನಿಸಿತು.. ಜೊತೆಗೆ ಧಾರಾವಾಹಿಯ ಹಣಕಾಸಿನ ವ್ಯವಹಾರವನ್ನು ತಮಗೆ ತೋರಿಸುವಂತೆ ಹೇಳಿದರು.. ಲೀಗಲ್ ನೋಟೀಸ್ ನೀಡಿದರು.. ಇವರು ಧಾರಾವಾಹಿ ಸಹ ನಿರ್ಮಾಪಕ ಎಂಬ ಹೆಸರನ್ನ ಮಿಸ್ ಯೂಸ್ ಮಾಡಿಕೊಳ್ಳುತ್ತಿದ್ದಾರೆ ಎನಿಸಿತು.. ಅದಕ್ಕಾಗಿ ರೋಹಿತ್ ಅವರ ಹೆಸರನ್ನು ತೆಗೆದು ಹಾಕಿದ್ವಿ ಎನ್ನುತ್ತಾರೆ ನಿರ್ದೇಶಕ ಅರವಿಂದ ಕೌಶಿಕ್..

ಅಷ್ಟೇ ಅಲ್ಲದೆ.. ಧಾರಾವಾಹಿ 9 ಟಿ ಆರ್ ಪಿ ಪಡೆಯುತ್ತಿದೆ.. ಆದರೆ ವಾಹಿನಿಯವರು 10 ರ ಮೇಲೆ ಬರಬೇಕು ಎಂದರು.. ಅವರ ನಿರೀಕ್ಷೆ ತಲುಪಲು ನಮ್ಮಿಂದ ಸಾಧ್ಯವಾಗಲಿಲ್ಲ.. ಅದೇ ಕಾರಣಕ್ಕೆ ನಾನು ಧಾರಾವಾಹಿಯಿಂದ ಹಿಂದೆ ಸರಿಯುತ್ತಿದ್ದೇನೆ ಎಂದೆ.. ಇದರಿಂದ ರೋಹಿತ್ ಅವರಿಗೆ ಹಣ ಬರುವುದಿಲ್ಲ ಅನ್ನೋ ಕಾರಣಕ್ಕೆ ಅವರು ಹೀಗೆ ದೂರು ನೀಡಿದ್ದಾರೆ ಎಂದು ಅರವಿಂದ ಕೌಶಿಕ್ ಅವರು ಮಾದ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ‌.‌.

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ