ರಾಜ್ಯದ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯವೆದ್ದು ನಿನ್ನೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ 14 ಶಾಸಕರು ರಾಜಿನಾಮೆ ನೀಡಿದ್ದು.. ಅದರಲ್ಲೂ ಎಲ್ಲಾ ಘಟಾನುಗಟಿ ಹಿರಿಯ ನಾಯಕರೇ ಇದ್ದದ್ದು… ಕಾಂಗ್ರೆಸ್ ಹಾಗೂ ಜೆಡಿಎಸ್ ವರ್ಷ್ಟರಿಗೆ ತಲೆನೋವಾಗಿ ಪರಿಣಮಿಸಿದೆ..

ಬೆಂಗಳೂರಿನಲ್ಲಿ ಕಾಂಗ್ರೆಸ್ ಅಸ್ತಿತ್ವವನ್ನು ಕಾಪಾಡಿದ ರಾಮಲಿಂಗಾ ರೆಡ್ಡಿ ಹಾಗೂ ಅವರ ಮಗಳು ಸೌಮ್ಯ ರೆಡ್ಡಿ, ಶಾಸಕ ಮುನಿರತ್ನ,ರಮೇಶ್ ಜಾರಕಿಹೋಳಿ, ಬಿಸಿ ಪಾಟಿಲ್.. ಜೆಡಿಎಸ್ ನ ವಿಶ್ವನಾಥ್ ಸೇರಿದಂತೆ ಒಟ್ಟು 14 ಮಂದಿ ಸ್ಪೀಕರ್ ಅವರ ಆಪ್ತ ಕಾರ್ಯದರ್ಶಿಗೆ ರಾಜಿನಾಮೆ ಸಲ್ಲಿಸಿ ನಂತರ ರಾಜಪಾಲರಿಗೂ ರಾಜಿನಾಮೆ ಪತ್ರ ನೀಡಿ ರಾಜಿನಾಮೆಯನ್ನು ಅಂಗೀಕರಿಸುವಂತೆ ಮನವಿ ಮಾಡಿದ್ದಾರೆ..

ಅಷ್ಟೇ ಅಲ್ಲದೆ ರಾಜ್ಯಪಾಲರಿಗೆ ಮತ್ತೊಂದು ಸ್ಫೋಟಕ ಮಾಹಿತಿಯನ್ನು ಬಹಿರಂಗಗೊಳಿಸಿದ್ದು ಇಂದು 8 ಶಾಸಕರು ರಾಜಿನಾಮೆ ನೀಡಲಿದ್ದಾರೆ ಎಂಬುದನ್ನು ತಿಳಿಸಿದ್ದಾರೆ..

ಈಗಾಗಲೇ ನಿನ್ನೆ ತುರ್ತು ಕಾಂಗ್ರೆಸ್ ನಾಯಕರ ಸಭೆ ನಡೆದಿದ್ದು ಡಿಸಿಎಂ ಪರಮೇಶ್ವರ್ ಅವರು ಸಿದ್ದರಾಮಯ್ಯ ಅವರ ಮೇಲೆ ಕೆಂಡಾಮಂಡಲರಾಗಿದ್ದಾರೆ.. ನಿಮ್ಮಿಂದಲೇ ಇಷ್ಟೆಲ್ಲಾ ಆಗಿದ್ದು… ನಿಮ್ಮ ಬೆಂಬಲವಿಲ್ಲದೆ ಬಂಡಾಯ ಹೇಳಲು ಸಾಧ್ಯವಿಲ್ಲ.. ನೀವು ಶಾಸಕರನ್ನ ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದು ಸಿದ್ದರಾಮಯ್ಯ ಅವರ ವಿರುದ್ಧ ಗರಂ ಆಗಿದ್ದಾರೆ.. ಅಷ್ಟೇ ಅಲ್ಲದೆ ಈ ತಕ್ಷಣ ನಿಮ್ಮ ಆಪ್ತರಾದ ಮುನಿರತ್ನ.. ಬೈರತಿ ಬಸವರಾಜು ಅವರನ್ನು ಕರೆಸಿ ಎಂದು ಒತ್ತಡ ಹಾಕಿದ್ದಾರೆ..

ಇದೀಗ ನಿನ್ನೆ ಅತೃಪ್ತ ಶಾಸಕರು ಹೇಳಿರುವಂತೆ ಇಂದು ಶಾಸಕಿ ಅಂಜಲಿ ನಿಂಬಾಳ್ಕರ್ ಸೇರಿದಂತೆ ಮತ್ತೆ 7 ಜನ ಶಾಸಕರು ರಾಜಿನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ..

ಇತ್ತ ಕೋಲಾರಕ್ಕೆ ತೆರಳಿರುವ ಸ್ಪೀಕರ್ ಸೋಮವಾರ ರಜೆ ಇರುವ ಕಾರಣ ಮಂಗಳವಾರ ತಮ್ಮ ಕೆಲಸಕ್ಕೆ ಹಾಜರಾದ ನಂತರವೇ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಿದೆ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ