ಇಂದು ರಾಜ್ಯದಲ್ಲಿ ನಡೆದ ಧಿಡೀರ್ ಬೆಳವಣಿಗೆಯಿಂದ ರಾಜ್ಯದಲ್ಲಿ 14 ಅತೃಪ್ತ ಶಾಸಕರು ರಾಜಿನಾಮೆ ಸಲ್ಲಿಸಿದ್ದು.. ಸರ್ಕಾರ ಅಲ್ಪ ಸಂಖ್ಯಾಬಲಕ್ಕೆ ಕುಸಿದಿದೆ..

ಹೌದು ಜೆಡಿಎಸ್ ಹಾಗೂ ಕಾಂಗ್ರೆಸ್ ನ ಒಟ್ಟು 14 ಶಾಸಕರು ಇಂದು ಸ್ಪೀಕರ್ ಅವರಿಗೆ ರಾಜಿನಾಮೆ ನೀಡಲು ತೆರಳಿದಾಗ.. ಸ್ಪೀಕರ್ ರಮೇಶ್ ಕುಮಾರ್ ಅವರು ಇರದ ಕಾರಣ ಅವರ ಆಪ್ತ ಕಾರ್ಯದರ್ಶಿಗೆ ರಾಜಿನಾಮೆ ನೀಡಿ ಅವರಿಂದ ಸ್ವೀಕೃತಿ ಪತ್ರವನ್ನು ಪಡೆದು ನಂತರದಲ್ಲಿ ರಾಜ್ಯಪಾಲರ ಬಳಿಯೂ ತೆರಳಿ ಅವರಿಗೂ ರಾಜಿನಾಮೆ ಪತ್ರ ನೀಡಿದ್ದಾರೆ..

ಅಷ್ಟೇ ಅಲ್ಲದೆ ರಾಜ್ಯಪಾಲರೊಂದಿಗೆ ಸ್ಫೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ.. ಹೌದು.. ಈಗ ನಾವು ಹದಿನಾಲ್ಕು ಜನ ಶಾಸಕರು ರಾಜಿನಾಮೆ ನೀಡುತ್ತಿದ್ದೇವೆ.. ಇನ್ನೂ ಎಂಟು ಜನ ಶಾಸಕರು ಸದ್ಯದಲ್ಲಿಯೇ ರಾಜೀನಾಮೆ ನೀಡಲಿದ್ದಾರೆ ಎಂಬ ಸ್ಫೋಟಕ ಮಾಹಿತಿಯನ್ನು ತೆರೆದಿಟ್ಟಿದ್ದರೆ..

ಇನ್ನು 8 ಶಾಸಕರು ಯಾರು ಎಂಬುದೇ ಯಕ್ಷ ಪ್ರಶ್ನೆಯಾಗಿದ್ದು.. ಈಗಿನ ರಾಜಕೀಯ ಬೆಳವಣಿಗೆ ನೋಡಿದರೆ ಇವರು ಹೇಳಿದ ಮಾತು ಸತ್ಯವಾದರೂ ಆಶ್ಚರ್ಯ ಪಡಬೇಕಿಲ್ಲ..

ವಿಶ್ವನಾಥ್ ಅವರ ನೇತೃತ್ವದಲ್ಲಿ ಇಂದು ರಾಜಿನಾಮೆ ಸಲ್ಲಿಸಿದ ಅತೃಪ್ತ ಶಾಸಕರ ಜೊತೆಗೆ ಇನ್ನು 8 ಜನ ಶಾಸಕರು ರಾಜಿನಾಮೆ ನೀಡಿದರೆ ಸರ್ಕಾರ ಪತನವಾಗುವುದು ಖಚಿತವಾಗಲಿದೆ..

ಆದರೆ ಇಂದು ರಾಜಿನಾಮೆ ನೀಡಲು ಬಂದಿದ್ದ ಮುನಿರತ್ನ ಅವರ ರಾಜಿನಾಮೆ ಪತ್ರವನ್ನು ಹರಿದು ಹಾಕಿದ್ದು, ಈ ಕುರಿತು ಡಿ ಕೆ ಶಿವಕುಮಾರ್ ಅವರು ಸಮರ್ಥಿಸಿ ಕೊಂಡಿದ್ದಾರೆ.. ಹೌದು ನನ್ನ ಹಾಗೂ ಮುನಿರತ್ನನ ಒಡನಾಟ 30 ವರ್ಷದ್ದು.. ಅದಕ್ಕೆ ಹರಿದುಹಾಕಿದೆ ಎಂದು ತಿಳಿಸಿದ್ದಾರೆ..

ಬೆಳಿಗ್ಗೆ ಕೋಲಾರ ಕಡೆಯಿಂದಲೂ ಒಂದು ತಂಡ ರಾಜಿನಾಮೆ ನೀಡಲು ಬರುತ್ತಿದೆ ಎಂಬ ಸುದ್ದಿ ಕೂಡ ಕೇಳಿ ಬಂದಿತ್ತು.. ಈಗಾಗಲೇ ರಾಜಿನಾಮೆ ನೀಡಿದ ಶಾಸಕರು ತಿಳಿಸಿದಂತೆ ಇನ್ನಷ್ಟು ಶಾಸಕರು ರಾಜಿನಾಮೆ ನೀಡುವರ ಕಾದು ನೋಡಬೇಕಿದೆ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ