ಕೆಜಿಎಪ್, ಕುರುಕ್ಷೇತ್ರ, ಪೈಲ್ವಾನ್ ಹೀಗೆ ಕನ್ನಡದ ಸ್ಟಾರ್ ನಟರ ಸಿನಿಮಾಗಳು ಇದೀಗ ರಾಜ್ಯ ಮಾತ್ರವಲ್ಲ ದೇಶವೇ ಕನ್ನಡ ಸಿನಿ ಇಂಡಸ್ಟ್ರಿಯ ಬಗ್ಗೆ ತಿರುಗಿ ನೋಡುವಂತೆ ಮಾಡಿದೆ..

ಅದರಲ್ಲೂ ಕಳೆದ ವರ್ಷ ಬಿಡುಗಡೆಯಾದ ಕೆಜಿಎಫ್ ಸಿನಿಮಾ ಬಗ್ಗೆ ಇಡೀ ದೇಶವೇ ಚರ್ಚೆ ನಡೆಸಿದ್ದು ಸುಳ್ಳಲ್ಲ.. ಅಂತಹ ಸಿನಿಮಾದ ಹಿಂದೆ ಇದ್ದ ಮಾಂತ್ರಿಕ ಅದು ಪ್ರಶಾಂತ್ ನೀಲ್.. ಸಣ್ಣ ಕೆಲಸವಾಗಲಿ ದೊಡ್ಡ ಕೆಲಸವಾಗಲಿ ಶ್ರದ್ಧೆ ಇಟ್ಟು ಮಾಡಿದರೆ ಸಕ್ಸಸ್ ಖಂಡಿತ ಅನ್ನೋ ಪಾಲಿಸಿಯನ್ನು ಪ್ರಶಾಂತ್ ನೀಲ್ ಅವರು ಪಾಲಿಸಿದಂತೆ ಕಾಣುತ್ತದೆ.

ಆದರೆ ಕೆಜಿಎಫ್ ಅನ್ನೋ ಮ್ಯಾಜಿಕ್ ಮಾಡಿದ ಮೋಡಿಗಾರ, ಇದೀಗ ಕೆಜಿಎಫ್ 2 ನಲ್ಲಿ ಸಖತ್ ಬ್ಯುಸಿ.. ಇದೆಲ್ಲದರ ನಡುವೆ ಪ್ರಶಾಂತ್ ನೀಲ್ ಅವರ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ.

ಹೌದು ಪ್ರಶಾಂತ್ ನೀಲ್ ಅವರಿಗೆ ಕ್ಯಾಮರಾ ಮುಂದೆ ನೆಟ್ಟಗೆ ಒಂದು ಸಂದರ್ಶನ ಕೊಡೋಕೆ ಬರೊಲ್ಲ ಅನ್ನೋ ಮಾತು ಕೇಳಿ ಬರುತ್ತಿದೆ. ಈ ಮಾತು ಆಡಿದವರಾದರೂ ಯಾರು? ಅಂತಹ ದೊಡ್ಡ ನಿರ್ದೇಶಕನ ಬಗ್ಗೆ ಇಂತಹ ಮಾತಾ? ಎಂಬ ಆಲೋಚನೆ ಬರದೇ ಇರದು.. ಆದರೆ ಆ ಮಾತನ್ನು ಆಡಿದವರು ಬೇರೆ ಯಾರೂ ಅಲ್ಲ.. ಅದು ಸ್ವತಃ ಪ್ರಶಾಂತ್ ನೀಲ್ ಅವರೇ..

ಹೌದು ಸಾಮಾನ್ಯವಾಗಿ ನಿರ್ದೇಶಕರ ಸಿನಿಮಾ ಸ್ವಲ್ಪ ಸಕ್ಸಸ್ ಕಂಡರೂ ಮುಂದಿನ ಸಿನಿಮಾಗಳಲ್ಲಿ ನಿರ್ದೇಶಕರೇ ಹೀರೋಗಳಾಗುತ್ತಾರೆ. ಇನ್ನು ಕೆಜಿಎಫ್ ಸಿನಿಮಾದಂತ ದೊಡ್ಡ ಹಿಟ್ ಕೊಟ್ಟ ಪ್ರಶಾಂತ್ ನೀಲ್ ಅವರಿಗೆ ಮಾಧ್ಯಮದವರೊಬ್ಬರು ಮುಂದಿನ ಸಿನಿಮಾಗಳಲ್ಲಿ ನಟನೆಗೆ ಎಂಟ್ರಿ ಕೊಡುವ ಪ್ಲಾನ್ ಏನಾದ್ರೂ ಇದೆಯಾ ಎಂದು ಕೇಳಿದ್ದಾರೆ.

ತಕ್ಷಣ ಅಯ್ಯೋ ಎನ್ನುವಂತೆ ಮುಗುಳು ನಕ್ಕು ಉತ್ತರಿಸಿದ ಪ್ರಶಾಂತ್ ನೀಲ್ ಅವರು ಅಯ್ಯೋ ನಟನೆ ನಮಗಲ್ಲಾ ರೀ.. ನಮಗೂ ಅದಕ್ಕೂ ದೂರ.. ಕ್ಯಾಮರಾ ಮುಂದೆ ಸರಿಯಾಗಿ ಒಂದು ಸಂದರ್ಶನ ಕೊಡೋಕೆ ನನಗೆ ಬರಲ್ಲ.. ಅಂತಹವನಿಗೆ ಈ ಪ್ರಶ್ನೆ ಕೇಳ್ತೀರಲ್ಲಾ ಎಂದಿದ್ದಾರೆ..

ಅಷ್ಟೇ ಅಲ್ಲದೆ ಸಕ್ಸಸ್ ಬಂದ ಕ್ಷಣ ಎಲ್ಲಾ ನಮ್ಮಿಂದಲೇ ಎನ್ನುವವರ ನಡುವೆ ಪ್ರಶಾಂತ್ ನೀಲ್ ಅವರು ಭಿನ್ನ ಎನ್ನಬಹುದು, ದೊಡ್ಡ ಗುಣದ ಪ್ರಶಾಂತ್ ನೀಲ್ ಅವರು ನಟನೆಯ ಬಗ್ಗೆ ಅದ್ಭುತ ಮಾತುಗಳನ್ನಾಡಿದ್ದಾರೆ. ನಟನೆ ಅನ್ನೋದು ದೇವರು ಕೊಟ್ಟ ವರ.. ದೇವರು ಆ ವರವನ್ನು ಕೊಟ್ಟರೆ ನಟಿಸಬಹುದು.. ಇಲ್ಲದಿದ್ದರೆ ಇಲ್ಲ.. ನಿರ್ದೇಶನವನ್ನು ಎಲ್ಲರೂ ಕಲಿಯಬಹುದು ಆದರೆ ನಟನೆಯನ್ನಲ್ಲ.. ಕಲಾವಿದರು ದೇವರಿಂದ ವರ ಪಡೆದು ಬಂದವರು, ನನ್ನಿಂದ ನಟನೆ ಎಂದಿಗೂ ಸಾಧ್ಯವಿಲ್ಲ.. ಅನ್ನೋ ದೊಡ್ಡ ಮಾತುಗಳನ್ನು ಆಡಿದರು.

ಯಾವ ಮನುಷ್ಯನಿಗೆ ಅಹಂಕಾರ ಇರುವುದಿಲ್ಲವೋ.. ಗೆಲುವಿನ ಅಹಂ ಇರುವುದಿಲ್ಲವೋ ಅಂತಹ ಮನುಷ್ಯನನ್ನು ದೇವರು ಎಂದೂ ಕೈ ಬಿಡುವುದಿಲ್ಲ ಎನ್ನೋದಕ್ಕೆ ಪ್ರಶಾಂತ್ ನೀಲ್ ಅವರೇ ನೈಜ್ಯ ಉದಾಹರಣೆ.. ಕೆಜಿಎಫ್ ಎಂಬ ಸಿನಿಮಾ ತನ್ನ ಬುದ್ಧಿಶಕ್ತಿಯ ಕೂಸಾದರೂ ಕೂಡ ಅದರ ಸಕ್ಸಸ್ ವಿಷಯದಲ್ಲಿ ತಾನು ಹಿಂದೆ ಸರಿಯುವ ದೊಡ್ಡತನದವರು ಪ್ರಶಾಂತ್ ನೀಲ್.. ನಿಮ್ಮೆಲ್ಲಾ ಸಿನಿಮಾಗಳಿಗೆ ಶುಭವಾಗಲಿ ಎಂಬುದೇ ಕನ್ನಡಿಗರ ಹಾರೈಕೆ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ