ಕಾಲ ಕೆಟ್ಟೋಯ್ತು ಅಂತ ದೊಡ್ಡವರು ಹೇಳೋ ಮಾತು ಅಕ್ಷರಶಃ ನಿಜ ಎನಿಸುತ್ತದೆ. ಮೊದಲೆಲ್ಲಾ ಗಂಡನೇ ದೈವ ಗಂಡನೇ ಜೀವ ಎನ್ನುತ್ತಿದ್ದರು. ಈಗಲೂ ಗಂಡನಿಗೆ ಮಾತೃ ಪ್ರೀತಿ ಕೊಟ್ಟು ಜೀವನ ನಡೆಸುವ ದೆಷ್ಟೋ ಹೆಣ್ಣು ಮಕ್ಕಳನ್ನು ನೋಡಿದ್ದೇವೆ. ಆದರೆ ಇದೆಲ್ಲದಕ್ಕೂ ಅಪವಾದವೆಂಬಂತೆ ಕೋಲಾರದಲ್ಲಿ ಒಂದು ಘಟನೆ ನಡೆದಿದೆ.

ಈತನ ಹೆಸರು ನಾರಾಯಣ ರೆಡ್ಡಿ, ಇವನ ಪತ್ನಿಯ ಹೆಸರು ಭಾಗ್ಯಲಕ್ಷ್ಮಿ, ೧೦ ವರ್ಷಗಳ ಹಿಂದೆ ಗುರು-ಹಿರಿಯರೆಲ್ಲ ಸೇರಿ ಭಾಗ್ಯಲಕ್ಷ್ಮಿಯನ್ನು ನಾರಾಯಣ ರೆಡ್ಡಿಗೆ ಮದುವೆ ಮಾಡಿದ್ದರು. ಸಂಸಾರ ಚೆನ್ನಾಗಿಯೇ ಇತ್ತು. ಈ ಸಂಸಾರಕ್ಕೆ ಒಂದು ಗಂಡು ಮಗವೂ ಇದೆ. ಆದರೆ ಬಾಗ್ಯಲಕ್ಷ್ಮಿ ತನ್ನೂರಿನ ಪಕ್ಕದ ಗ್ರಾಮದ ನಾಗರಾಜ್ ಎಂಬುವವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಪುಣ್ಯಾತ್‌ಗಿತ್ತಿ. ಮ್ಮೆ ಗಂಡನೊಂದಿಗೆ ಜಗಳ ಮಾಡಿಕೊಂಡು ತವರು ಮನೆಗೆ ಹೋಗಿ ಬಿಟ್ಟಿದ್ದಳು. ಆಗ ಅವರವರ ಪಾಡಿಗೆ ಅವರವರು ಇರಲಿ ಎಂದು ಬಿಟ್ಟುಬಿಟ್ಟಿದ್ದರೆ ಇಂದು ಇಂತಹ ದುರ್ಗತಿ ಬರುತ್ತಿರಲಿಲ್ಲವೇನೋ.. ಆದರೆ ಹಿರಿಯರೆಲ್ಲಾ ಸೇರಿ ನ್ಯಾಯ ಪಂಚಾಯತಿ ಮಾಡಿ ಇಬ್ಬರನ್ನು ಮತ್ತೆ ಒಂದು ಮಾಡಿದ್ದರು.

ನಾರಾಯಣ ರೆಡ್ಡಿ ಹೋಗಾರ್ಡ್ ಆಗಿ ಕೆಲಸ ಮಾಡುತ್ತಿದ್ದನು. ಭಾಗ್ಯಲಕ್ಷ್ಮಿ ಮನೆಯಲ್ಲೆ ಇದ್ದಳು. ಆದರೆ ತನ್ನ ಅಕ್ರಮ ಸಂಬಂಧವನ್ನು ನಿಲ್ಲಿಸಿರಲಿಲ್ಲ. ಈ ಕಾರಣಕ್ಕಾಗಿಯೇ ಅತ್ತೆ ಮಾವನನ್ನು ಕೂಡ ಮನೆಯಿಂದ ಹೊರ ಹಾಕಿದ್ದಳು. ಆನಂತರ ತನ್ನ ಪ್ರಿಯಕರನೊಂದಿಗೆ ಅನೈತಿಕ ಸಂಬಂಧವಿರಿಸಿಕೊಂಡಿದ್ದಳು.

ಇಷ್ಟೆಲ್ಲಾ ಸಾಲದು ಎಂಬಂತೆ, ನಾರಾಯಣ ರೆಡ್ಡಿ ತಮ್ಮ ಅಕ್ರಮ ಸಂಬಂಧಕ್ಕೆ ಮುಳುವಾಗುತ್ತಾನೆ ಎಂದು ಭಾಗ್ಯಲಕ್ಷ್ಮಿ ತನ್ನ ಪ್ರಿಯಕರ ನಾಗರಾಜನೊಂದಿಗೆ ಸೇರಿ ಸ್ವಂತ ಗಂಡನನ್ನೇ ಅಮಾನವೀಯತೆಯಿಂದ ಕೊಂದೇ ಬಿಟ್ಟಿದ್ದಾಳೆ ಪಾಪಿ..

ಹೌದು ಅತಿಯಾಗಿ ನಂಬಿ ಪ್ರೀತಿಸುತ್ತಿದ್ದ ಗಂಡನನ್ನು ಪತ್ನಿ ಭಾಗ್ಯಲಕ್ಷ್ಮಿ ಮತ್ತು ಪ್ರಿಯಕರ ನಾಗರಾಜ್ ಸೇರಿ ಕತ್ತು ಹಿಸುಕಿ ಕೊಲೆ ಮಾಡಿ ಬೈಕಿನಲ್ಲಿದ್ದ ಪೆಟ್ರೋಲ್ ಸುರಿದು ಅರೆಬರೆ ಬೇಯಿಸಿ ಸಾಕ್ಷಿ ಸಿಗಬಾರದೆಂದು ಪರಾರಿಯಾಗಿದ್ದಾರೆ ಪಾಪಿಗಳು.. ಈ ಮನಕಲಕುವ ಘಟನೆ ಕೋಲಾರದ ಮುಳಬಾಗಲಿನ ಅಲ್ಲಾಲಸಂದ್ರದ ಬಳಿ ನಡೆದಿದೆ.

ಬುಧವಾರ ಮಧ್ಯಾಹ್ನ ಮುಳಬಾಗಲು ತಾಲೂಕಿನ ಅಲ್ಲಾಲಸಂದ್ರ ಗೇಟ್ ಬಳಿ ಅಪರಿಚಿತ ಅರೆಬೆಂದ ಸ್ಥಿತಿಯಲ್ಲಿ ನಾರಾಯಣ ರೆಡ್ಡಿ ಶವ ಪತ್ತೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಮುಳಬಾಗಲು ಗ್ರಾಮಾಂತರ ಪೊಲೀಸರಿಗೆ ಅದೊಂದು ಕೊಲೆ ಎಂಬ ಅನುಮಾನ ಮೂಡಿ, ಸ್ಥಳಕ್ಕೆ ಕೋಲಾರ ಎಸ್‌ಪಿ ರೋಹಿಣಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಕೊಲೆ ಆರೋಪಿಗಳಿಗೆ ಬಲೆ ಬೀಸಿ ಇಬ್ಬರನ್ನು ಬಂಧಿಸಿದ್ದಾರೆ.

ಮೊದಲು ಪೊಲೀಸರು ಸಂಬಂಧಿಕರನ್ನು ವಿಚಾರಣೆ ಮಾಡಿದ್ದು, ಆ ಸಮಯದಲ್ಲಿ ಭಾಗ್ಯಲಕ್ಷ್ಮಿ ಮತ್ತು ನಾಗರಾಜ್ ಬಗ್ಗೆ ವಿಷಯ ತಿಳಿದು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಇಬ್ಬರೂ ಕೂಡ ತಪ್ಪೊಪ್ಪಿಕೊಂಡಿದ್ದಾರೆ.

ಸುಂದರ ಸಂಸಾರವನ್ನು ಹಾಳು ಮಾಡಿಕೊಳ್ಳುವುದು ಎಂದರೆ ಇದೇ ಇರಬೇಕು. ನೆಮ್ಮದಿಯಿಂದ ಗಂಡನೊಂದಿಗೆ ಜೀವನ ಮಾಡಿದ್ದಿದ್ದರೆ ಈಗ ಜೈಲಿನ ಹಿಂದೆ ನಿಂತು ಕಂಬಿ ಎಣಿಸುವ ಪರಿಸ್ಥಿತಿ ಬರುತ್ತಿರಲಿಲ್ಲ.

ಇವರಿಬ್ಬರ ಮೋಜಿಗೆ ಪಾಪ ನಾರಾಯಣ ರೆಡ್ಡಿ ಮೃತಪಟ್ಟ ಆ ಜೀವಕ್ಕೆ ಬೆಲೆಯೇ ಇಲ್ಲವಾ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ