ಸ್ಯಾಂಡಲ್ವುಡ್ ನಟ ಕೋಮಲ್ ಅವರ ಮೇಲೆ ಬೆಂಗಳೂರಿನ ಸಂಪಿಗೆ ಥಿಯೇಟರ್ ಬಳಿ ಬೈಕ್ ಸವಾರರಿಬ್ಬರು ಹಲ್ಲೆ ಮಾಡಿ ಮುಖದ ತುಂಬಾ ರಕ್ತ ಬರುವಂತೆ ಹೊಡೆದಿದ್ದಾರೆ..

ಹೌದು ಇತ್ತೀಚೆಗೆ ಕೋಮಲ್ ಅವರ ಕೆಂಪೇಗೌಡ 2 ಸಿನಿಮಾ ಬಿಡುಗಡೆಯಾಗಿತ್ತು ಆದರೆ ಕುರುಕ್ಷೇತ್ರ ಸಿನಿಮಾ ಕೂಡ ಇದೇ ದಿನ ಬಿಡುಗಡೆಯಾದ್ದರಿಂದ ಸಿನಿಮಾ ಅಷ್ಟಾಗಿ ಸಕ್ಸಸ್ ಕಾಣಲಿಲ್ಲ.. ಇದೀಗ ಅವೆಲ್ಲಾ ಟೆನ್ ಷನ್ ಗಳ ನಡುವೆ ಮಗಳನ್ನು ಟ್ಯೂಷನ್ ಗೆ ಬಿಟ್ಟು ಸಂಒಇಗೆ ಥಿಯೇಟರ್ ಬಳಿ ಕಾರ್ ನಲ್ಲಿ ಹೋಗುವಾಗ.. ಇದ್ದಕ್ಕಿದ್ದ ಹಾಗೆ ಬೈಕ್ ಸವಾರರು ಅವರನ್ನು ಅಡ್ಡಗಟ್ಟಿ ಬೈಕ್ ಗೆ ಟಚ್ ಮಾಡಿದ್ದೀಯಾ ಎಂದು ಇಳಿಸಿದ್ದಾರೆ..

ಕೋಮಲ್ ಅವರು ಇಳಿಯುತ್ತಿದ್ದಂತೆ.. ನಾಲ್ಕು ಜನ ಕೋಮಲ್ ಅವರನ್ನು ಹಿಡಿದುಕೊಂಡರಂತೆ.. ಒಬ್ಬ ಹೊಡೆಯಲು ಶುರು ಮಾಡಿದ್ದಾನೆ.. ಮುಖದಲ್ಲಿ ರಕ್ತ ಬರಲು ಶುರುವಾಗಿದೆ.. ತಕ್ಷಣ ಅಕ್ಕಪಕ್ಕದಲ್ಲಿದ್ದ ಸಾರ್ವಜನಿಕರು ಅವರುಗಳನ್ನು ಹಿಡಿದು ಟ್ರಾಫಿಕ್ ಪೋಲೀಸರಿಗೆ ಒಪ್ಪಿಸಿದ್ದಾರೆ.. ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ..

ಈ ಕುರಿತು ಮಾತನಾಡಿರುವ ಕೋಮಲ್ ಅವರು.. ಮಗಳನ್ನು ಟ್ಯೂಶನ್ ಗೆ ಬಿಟ್ಟು ಬರುವಾಗ ಏಕಾಏಕಿ ಈ ರೀತಿ ಮಾಡಿದ್ದಾರೆ.. ನಾನು ಹೊರಗೆ ಬಂದೇ 3 ವರ್ಷ ಆಗಿದೆ.. ಸಿನಿಮಾ ಮಾಡೋದೆ ತಪ್ಪಾ ಎನಿಸಿಬಿಟ್ಟಿದೆ.. ಯಾಕೆ ಹೀಗೆ ನನಗೆ ಮಾಡ್ತಿದ್ದಾರೆ.. ನಾನು ಈಗಾಗಲೇ ಬಹಳ ಟೆಂಷನ್ ನಲ್ಲಿ ಇದ್ದೇನೆ.. ಈಗ ಈ ರೀತಿ ಹೊಡೆದಿದ್ದಾರೆ.. ಯಾಕೆ ಅಂತ ಮಾತ್ರ ತಿಳಿತಿಲ್ಲ ಎಂದಿದ್ದಾರೆ..

ನಟ ಜಗ್ಗೇಶ್ ಕೂಡ ಈ ಬಗ್ಗೆ ಮಾತನಾಡಿ ಬೆಂಗಳೂರನ್ಂಜ್ ಅವರಪ್ಪನದ್ದು ಎಂದುಕೊಂಡಿದ್ದಾರೆ.. ತಕ್ಷಣ ಇಂತವರಿಗೆ ಬೆಂಗಳೂರು ಪೊಲೀಸರು ತಕ್ಕ ಪಾಟ ಕಲಿಸಬೇಕು ಎಂದಿದ್ದಾರೆ.. ಅಷ್ಟೇ ಅಲ್ಲದೆ ತಮ್ಮನ ಮೇಲೆ ನಡೆದ ಈ ಹಲ್ಲೆ ಮಾತನಾಡಿ ಇದನ್ನ ಸಿನಿಮಾ ಇಂಡಸ್ಟ್ರಿ ಅವರೇ ಮಾಡಿದ್ದರೆ ಅದನ್ನ ನಾನು ಹೇಗೆ ಹ್ಯಾಂಡಲ್ ಮಾಡಬೇಕು ಅನ್ನೋದು ಗೊತ್ತು.. ನಾನು‌ ಕೂಡ ಚಿತ್ರರಂಗಕ್ಕೆ ಬಂದು 30 ವರ್ಷ ಆಗಿದೆ.. ಕೋಮಲ್ ಬಹಳ ಒಳ್ಳೆಯವನು. ಸಭ್ಯಸ್ತ.. ನಾನಾಗಿದ್ದರೆ ಬೇರೆ ರೀತಿಯಲ್ಲಿ ಹ್ಯಾಂಡಲ್ ಮಾಡುತ್ತಿದ್ದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ