ಮೈಸೂರು ರಾಜ ಮನೆತನ ಎಂದರೆ ಒಂದು ಕ್ಷಣ ಮನಸ್ಸಿನಲ್ಲಿ ಏನೋ ಆನಂದ, ಅದರಲ್ಲೂ ಮೈಸೂರಿಗರಿಗಷ್ಟೇ ಅಲ್ಲದೇ ಎಲ್ಲಾ ಕನ್ನಡಿಗರಿಗೆ ಮೈ ರೋಮಗಳು ಒಂದು ಕ್ಷಣ ಎದ್ದು ನಿಲ್ಲುವುದಂತು ಸತ್ಯ.. ನಾಡಿನ ಜನರ ಪ್ರೀತಿಯನ್ನು ಹಾಗೆಯೇ ಉಳಿಸಿಕೊಂಡು ಬಂದವರು ನಮ್ಮ ಮೈಸೂರು ರಾಜ ಮನೆತನದವರು..

ರಾಜಮಾತೆ ಪ್ರಮೋದ ದೇವಿ ಒಡೆಯರ್ ಅವರು ಶ್ರೀ ಯಧುವೀರ್ ಅವರನ್ನು ದತ್ತು ಸ್ವೀಕರಿಸಿ ಉತ್ತರಾಧಿಕಾರಿಯನ್ನಾಗಿ ಮಾಡಿದ ನಂತರ, ಯಧುವೀರ್ ಅವರೂ ಕೂಡ ರಾಜಮನೆತನದ ಹೆಸರನ್ನು ಉಳಿಸಿಕೊಂಡು ಹಿಂದಿನ ರಾಜ ಮಹಾರಾಜರನ್ನು ನೆನಪಿಸುವಂತೆಯೇ ಜನರ ನೆರವಿಗೆ ಬರುತ್ತಿರುವುದು ವಿಶೇಷ..

ಹಾಗೆಯೇ ಮೈಸೂರಿನ ಮಹಾರಾಜರಾಗಿ ಪಟ್ಟಾಭಿಷೇಕವಾದ ನಂತರ 2016ರ ಜೂನ್ 27 ಹಾಗೂ 28ರಂದು ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ರಾಜ ಮನೆತನದ ವಿವಾಹ ಅದ್ಧೂರಿಯಾಗಿ ನೆರವೇರಿತು.. ನಂತರ 2017 ಡಿಸೆಂಬರ್ 6 ರಂದು ತ್ರಿಷಿಕಾ ದೇವಿ ಅವರು ಶ್ರೀ ಆಧ್ಯವೀರ್ ಒಡೆಯರ್ ಅವರಿಗೆ ಜನ್ಮ ನೀಡಿದರು.. ಆದರೆ ಮಹಾರಾಣಿ ತ್ರಿಷಿಕಾ ದೇವಿ ಅವರ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ.. ತ್ರಿಷಿಕಾ ಕುಮಾರಿಯಾಗಿದ್ದ ಇವರೂ ಕೂಡ ರಾಜ ಮನೆತನದವರು.. ಹೌದು ರಾಜಸ್ಥಾನದ ದುಂಗಾರ್ಪುರ್ ರಾಜ ಮನೆತನದವರಾಗಿದ್ದ ತ್ರಿಷಿಕಾ ಕುಮಾರಿ ಸಿಂಗ್ ಅವರು ಚಿಕ್ಕ ವಯಸ್ಸಿನಿಂದಲೇ ಶ್ರೀ ಯಧುವೀರ್ ಅವರಿಗೆ ಪರಿಚಯ..

ಯಧುವೀರ್ ಅವರು ತಮ್ಮ ಬಾಲ್ಯದ ಶಿಕ್ಷಣವನ್ನು ಬೆಂಗಳೂರಿನ ವಿದ್ಯಾನಿಕೇತನ ಶಾಲೆಯಲ್ಲಿ ಪಡೆದಿದ್ದರು.. ತ್ರಿಷಿಕಾ ದೇವಿ ಅವರು ಬಾಲ್ಡವಿನ್ ಶಾಲೆಯಲ್ಲಿ ಓದಿ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಪಡೆದಿದ್ದರು. ನಂತರ ಯಧುವೀರ್ ಅವರು ಅಮೇರಿಕಾದ ಮಾಸ್ಸಚುಸೆಟ್ಸ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ಹಾಗೂ ಇಂಗ್ಲೀಷಿನಲ್ಲಿ ಪದವಿ ಪಡೆದರು.. ತ್ರಿಷಿಕಾ ದೇವಿ ಅವರು ಬಾಸ್ಟನ್ ವಿಶ್ವವಿದ್ಯಾನಿಲಯದಲ್ಲಿ ಪದವಿ ಪಡೆದಿದ್ದಾರೆ. ಅಮೇರಿಕಾದಲ್ಲಿ ವ್ಯಾಸಂಗ ಮಾಡುವ ವೇಳೆ ಇಬ್ಬರು ಮತ್ತಷ್ಟು ಹತ್ತಿರವಾದರು. ನಂತರ ಮೈಸೂರು ಮಹಾರಾಜರಾಗಿ ಶ್ರೀ ಯಧುವೀರ್ ಅವರಿಗೆ ಪಟ್ಟಾಭಿಷೇಕವಾದ ನಂತರ ಗುರು ಹಿರಿಯರು ನಿಶ್ಚಯಿಸಿ ಮೈಸೂರಿನ ಅರಮನೆಯಲ್ಲಿ ಇವರ ವಿವಾಹ ನೆರವೇರಿತು.

ನಂತರ ಮೈಸೂರಿನ ರಾಜಮನೆತನಕ್ಕೆ ಹೊಂದಿಕೊಂಡ ತ್ರಿಷಿಕಾ ದೇವಿ ಅವರು, ನಮ್ಮ ನಾಡಿನ ರಾಜ ವಂಶದ ಮಹಿಳೆಯರಂತೆ ಅತ್ಯಂತ ಸರಳವಾಗಿ ಶ್ರೀ ಸಾಮಾನ್ಯರ ಜೊತೆ ಬೆರೆತು ಅವರ ಕಷ್ಟ ಸುಖಗಳಿಗೆ ನೆರವಾಗಲು ಮುಂದೆ ಬಂದಿದ್ದು ನಿಜಕ್ಕೂ ಹೆಮ್ಮೆಯ ವಿಷಯವೇ ಸರಿ..
ತ್ರಿಷಿಕಾ ದೇವಿ ಅವರು ಗರ್ಭಿಣಿಯಾಗಿದ್ದಾಗ ಸಾಮಾನ್ಯರಂತೆ ರೈಲಿನಲ್ಲಿ ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣ ಬೆಳೆಸಿದ್ದು ನಿಜಕ್ಕೂ ಆಶ್ಚರ್ಯದ ಸಂಗತಿಯಾಗಿತ್ತು. ಆರೋಗ್ಯದ ದೃಷ್ಟಿ ಇರಬಹುದು. ಆದರೆ ರಾಜ ಮನೆತನದವರು ಮನಸ್ಸು ಮಾಡಿದ್ದರೆ ವಿಮಾನದ ಮೂಲಕವೇ ಹೋಗಬಹುದಾಗಿತ್ತು. ಆದರೆ ಸಾಮಾನ್ಯರಂತೆ ರೈಲಿನಲ್ಲಿ ಬಂದು ಅತ್ಯಂತ ಸರಳವಾಗಿ ಅರಮನೆ ತಲುಪಿದರು.

ನಂತರದ ದಿನಗಳಲ್ಲಿ ದಸರಾ ಸಂದರ್ಭದಲ್ಲಿ ಯಧುವೀರ್ ಅವರನ್ನು ಮಾವುತರು ತಂಗಿದ್ದ ಜಾಗಗಳಿಗೇ ಕರೆದುಕೊಂಡು ಹೋಗಿ ಅವರುಗಳನ್ನು ಮಾತನಾಡಿಸಿ, ಆನೆಗಳೊಂದಿಗೆ ಕೆಲ ಸಮಯ ಕಳೆದು ಸರಳತೆ ತೋರಿದರು. ಅಷ್ಟೇ ಅಲ್ಲದೆ ಇತ್ತೀಚೆಗೆ ದೇವರಾಜ ಮಾರುಕಟ್ಟೆಗೆ ಬೆಳ್ಳಂಬೆಳಿಗ್ಗೆ ತೆರಳಿ ವ್ಯಾಪಾರಿಗಳಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಸಾಮಾನ್ಯರಂತೆ ಸೊಪ್ಪು ತರಕಾರಿಗಳನ್ನು ಖರೀದಿಸಿ ಮಹಾರಾಣಿ ಎಂದು ಹಣ ಪಡೆಯದೆ ಇದ್ದ ವ್ಯಾಪಾರಿಗಳ ಬಳಿ ನಗುತ್ತಲೇ ಹಣ ಪಡೆಯಲೇ ಬೇಕು ಎಂದು ವಿನಂತಿಸಿಕೊಂಡು ಹಣ ಕೊಟ್ಟು ಬಂದರು.. ನಿಜಕ್ಕೂ ಮಹಾರಾಣಿ ತ್ರಿಷಿಕಾ ದೇವಿ ಅವರ ಈ ಸರಳತೆ ಜನಸಾಮಾನ್ಯರ ಮನಸ್ಸು ಮುಟ್ಟಿದೆ ಎನ್ನಬಹುದು. ನಮ್ಮ ರಾಜ ವಂಶಸ್ಥರು ನೂರ್ಕಾಲ ಸಂತೋಷವಾಗಿರಲಿ, ರಾಜ ಪರಂಪರೆ ಹೀಗೆ ಮುಂದುವರೆಯಲಿ ಎಂಬುದೇ ಎಲ್ಲಾ ಕನ್ನಡಿಗರ ಕೋರಿಕೆ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ