ವಿಶ್ವದೆಲ್ಲೆಡೆ ಪ್ರೇಮಿಗಳ ದಿನಾಚರಣೆ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.. ನಾಡಿನಲ್ಲೂ ಕೂಡ ವ್ಯಾಲೆಂಟೈನ್ಸ್ ಡೇ ಸಂಭ್ರಮದಲ್ಲಿ ಅನೇಕರು ಇದ್ದರು.. ಆದರೆ ದೇಶದ ಕೆಲವು ಕುಟುಂಬಗಳು ಮಾತ್ರ ಇಂದು ಹೇಳಿಕೊಳ್ಳಲಾಗದಷ್ಟು ಸಂಕಟವನ್ನು ಅನುಭವಿಸುತ್ತಿದ್ದವು..

ಆ ಕುಟುಂಬಗಳು ಮತ್ಯಾವುದೂ ಅಲ್ಲ.. ಸರಿಯಾಗಿ ಒಂದು ವರ್ಷದ ಹಿಂದೆ ಭಾರತಾಂಬೆಯ ಮಡಿಲು ಸೇರಿದ ವೀರರ ಕುಟುಂಬಗಳು.. ಆ ವೀರರಲ್ಲಿ ಮಂಡ್ಯದ ಮಗ ಗುರು ಕೂಡ ಒಬ್ಬರು.

ಅವರು ಇಲ್ಲವಾದಾಗ ಇಡಿ ನಾಡೇ ಕಣ್ಣೀರಿಟ್ಟಿತ್ತು.. ಆ ಎರಡು ದಿನ ನಾಡಿಗೆ ನಾಡೇ ಗುರುಗಾಗಿ ಆತನ ಕುಟುಂಬಕ್ಕೆ ಭಗವಂತ ಶಕ್ತಿ ನೀಡಲಿ ಎಂದು ಬೇಡಿಕೊಂಡಿತ್ತು.. ಆದರೆ ಈಗ ಗುರು ಅವರ ಪತ್ನಿ ಯಾರ ಜೊತೆ ಇದ್ದಾರೆ ಗೊತ್ತಾ?

ಅಂದು ಆ ಘಟನೆ ನಡೆದಾಗ ಗುರು ಅವರ ಪತ್ನಿ ಕಲಾವತಿ ಅವರು ಗರ್ಭಿಣಿ ಎನ್ನಲಾಗುತಿತ್ತು.. ಆದರೆ ನಂತರ ಏನಾಗಿದೆಯೋ ಆ ಮಾಹಿತಿ ಯಾರಿಗೂ ಲಭ್ಯವಿಲ್ಲ.. ಆದರೆ ಆ ಸಮಯದಲ್ಲಿ ಕೋಟಿಗಳ ಲೆಕ್ಕದಲ್ಲಿ ಗುರು ಕುಟುಂಬಕ್ಕೆ ನೆರವು ಹರಿದು ಬಂದಿತ್ತು.. ಸರ್ಕಾರದಿಂದಲೂ ಪರಿಹಾರ ರೂಪದಲ್ಲಿ ಕುಟುಂಬಕ್ಕೆ ಸಹಾಯವಾಗಲಿ ಎಂದು ಹಣವನ್ನು ನೀಡಲಾಗಿತ್ತು..

ಸುಮಲತಾ ಅಂಬರೀಶ್ ಅವರೂ ಕೂಡ ತಮ್ಮ ಅರ್ಧ ಎಕರೆ ಜಮೀನನ್ನು ಗುರು ಕುಟುಂಬಕ್ಕೆ ನೀಡಿದ್ದರು.. ಆನಂತರ ನೋವಿನಲ್ಲಿದ್ದ ಕುಟುಂಬದಲ್ಲಿ ಪರಿಹಾರದ ಹಣಕ್ಕಾಗಿ ಮನಸ್ತಾಪ ಶುರುವಾಗಿತ್ತು.. ಆ ಸಮಯದಲ್ಲಿ ಮಧ್ಯರಾತ್ರಿಯಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ ಎಂಬ ಸುದ್ದಿಯೂ ಹರಡಿತ್ತು.. ಪೊಲೀಸರು ಬುದ್ದಿ ಹೇಳಿ ಕಳುಹಿಸಿದ್ದರು ಎನ್ನಲಾಗಿತ್ತು..

ನಂತರ ಹಲವು ದಿನಗಳ ಬಳಿಕ ಗುರು ಅವರ ಪತ್ನಿ ಹಾಗೂ ಗುರು ತಂದೆ ತಾಯಿಯನ್ನು ಸಂಬಂಧಿಕರು ಕೂರಿಸಿಕೊಂಡು ನೆರವಿನ ರೂಪದಲ್ಲಿ ಬಂದ ಹಣವನ್ನು ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ..

ಇದೀಗ ಒಂದು ವರ್ಷ ಕಳೆದಿದೆ.. ಆ ಮನೆ ಮನೆಯಾಗಿಲ್ಲ.. ಗುರು ಇದ್ದಾಗ ಸಂತೋಷದಲ್ಲಿ ತುಂಬಿ ತುಳುಕುತ್ತಿದ್ದ ಮನೆ ಈಗ ಸೂತಕದ ಮನೆಯಂತಾಗಿದೆ.. ಕಲಾವತಿ ಅವರು ತಮ್ಮ ತಾಯಿಯ ಮನೆಯಲ್ಲಿದ್ದಾರೆ.. ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದಾರೆ.. ಇತ್ತ ಅಪ್ಪ ಅಮ್ಮ ಎರಡನೇ ಮಗನ ಜೊತೆ ಇದ್ದಾರೆ.. ಆದರೆ ದುರ್ವಿಧಿ ಎಂದರೆ ಗುರು ಅವರ ಪುಣ್ಯ ಕಾರ್ಯ ಮಾಡುವ ಸಮಯದಲ್ಲೂ ಒಟ್ಟಿಗೆ ಮಾಡಿಲ್ಲ..

ಕಲಾವತಿ ಅವರ ತಾಯಿ ಹೇಳುವ ಪ್ರಕಾರ.. ಕಳೆದ ತಿಂಗಳು ಕಲಾವತಿ ಅವರು ಗುರು ಅವರ ತಾಯಿಗೆ ಫೋನ್ ಮಾಡಿ ಕಾರ್ಯ ಮಾಡುವ ವಿಚಾರವಾಗಿ ಮಾತನಾಡಿದ್ದಾರೆ.. ಆದರೆ ಗುರು ಅವರ ತಾಯಿ ನಾವ್ ಯಾವ ಕಾರ್ಯವನ್ನೂ ಮಾಡಲ್ಲ ಏನಾದ್ರು ಮಾಡ್ಕೊಳಿ ಎಂದಿದ್ದರಂತೆ.. ಅದೇ ಕಾರಣಕ್ಕೆ ಶಾಸ್ತ್ರ ಕೇಳಿ ಫೆಬ್ರವರಿ 16 ರಂದು ವರ್ಷದ ಕಾರ್ಯವನ್ನು ಕಲಾವತಿ ಅವರು ಮಾಡಲು ತೀರ್ಮಾನಿಸಿ.. ಕಾರ್ಡ್ ಕೂಡ ಪ್ರಿಂಟ್ ಹಾಕಿಸಿ ಹಂಚಿದ್ದಾರೆ..

ಇತ್ತ ಕಾರ್ಯ ಮಾಡಲ್ಲ ಎಂದಿದ್ದ ಗುರು ಅವರ ತಂದೆ ತಾಯಿ ಇಂದೇ ಗುರು ಅವರ ಪುಣ್ಯ ಕಾರ್ಯ ಮಾಡಿದ್ದಾರೆ.. ಇದೇ ಸಂದರ್ಭದಲ್ಲಿ ಮಾತನಾಡಿದ ಗುರು ಅವರ ತಾಯಿ.. ಕಲಾವತಿ ಅವರ ತಾಯಿ ಮನೇಲಿದ್ದಾಳೆ.. ನಮಗು ಅವರಿಗು ಯಾವುದೇ ಜಗಳವಿಲ್ಲ.. ಅವರದ್ದು ಅವರು ತೆಗೆದುಕೊಂಡ್ರು.. ನಮ್ಮದು ನಾವು ತೆಗೆದುಕೊಂಡ್ವಿ.. ಎಲ್ಲಾ ಹಂಚಿಕೊಂಡಾಗಿದೆ.. ಯಾವುದೇ ಜಗಳ ಇಲ್ಲ ಎಂದು ಬೇರೆ ಮಾತನಾಡಲು ಇಷ್ಟ ಪಡದೆ ಮಾತು ಮುಗಿಸಿದ್ದಾರೆ..

ಗುರು ಎಂಬ ಒಂದು ಜೀವ ಇದ್ದಾಗ ಎಲ್ಲರೂ ಒಂದೇ ಕುಟುಂಬ ಒಂದೇ ಮನೆ.. ಆದರೆ ಆತನೊಬ್ಬ ಇಲ್ಲವಾದಾಗ ಏನೇನೆಲ್ಲಾ ಆಗಿಹೋಯಿತು.. ಪ್ರಪಂಚವೇ ಹೀಗೆ.. ಜೀವನವೇ ಇಷ್ಟು.. ಇದ್ದಾಗ ಒಂದು ಇಲ್ಲದಾಗ ಮತ್ತೊಂದು.. ಅದೇನಾದರೂ ಆಗಲಿ ಭಾರತಾಂಬೆಗಾಗಿ ಜೀವ ಕೊಟ್ಟವ ಆತ.. ಅವನ ಕುಟುಂಬ ಸದಾ ಸಂತೋಷವಾಗಿರುವಂತಾಗಲಿ..