ಮನುಷ್ಯ ಕುಲ ಅತ್ಯಂತ ಕೆಳ ಮಟ್ಟಕ್ಕೆ ಹೋಗುತ್ತಿದೆ ಎನ್ನುವುದಕ್ಕೆ ಇಂತ ನೀಚರು ಮಾಡುತ್ತಿರುವ ಕೃತ್ಯಗಳೇ ಸಾಕ್ಷಿ.. ಸಾಮಸ್ಕರತಿಕ ನಗರಿ ಮೈಸೂರಿನಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಮಗು ತನಗೆ ಹುಟ್ಟಿಲ್ಲವೆಂದು ಮಗುವನ್ನೇ ಕೊಂದಿರುವ ಅಮಾನುಷ ಕೃತ್ಯ ಸ್ವಂತ ತಂದೆಯಿಂದಲೇ ನಡೆದಿದೆ.
ಆದರೆ ಇನ್ನೊಂದು ಮುಖ್ಯ ವಿಷಯ ಎಂದರೆ ಈ ದಂಪತಿ ಪ್ರೀತಿಸಿ ಮದುವೆಯಾದವರು.. ಹೌದು ಪ್ರೀತಿಸಿ ನೀನಿಲ್ಲದಿದ್ದರೆ ಬದುಕುವುದಿಲ್ಲ ಎನ್ನುವ ಮಾತುಗಳನ್ನಾಡಿ ಮದುವೆಯಾಗುತ್ತಾರೆ. ಕೊನೆಗೆ ಇಂತಹ ಕೃತ್ಯಗಳನ್ನು ಎಸಗಿ ಪವಿತ್ರ ಪ್ರೀತಿಗೆ ಅವಮಾನ ಮಾಡುತ್ತಾರೆ.

ಹೆಚ್.ಡಿ.ಕೋಟೆ ತಾಲೂಕಿನ ಸವ್ವೆ ಗ್ರಾಮದ ಶಿಶಿಕುಮಾರ್ ಹಾಗೂ ಪರಿಮಳಾ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ 4 ವರ್ಷದ ಖಷಿ ಎಂಬ ಹೆಣ್ಣು ಮಗಳು ಹಾಗೂ 2 ವರ್ಷದ ಕುಷಾಲ್ ಎಂಬ ಗಂಡು ಮಗುವಿತ್ತು.. ಆದರೆ ಈ ಪಾಪಿ ತಂದೆ ಕುಷಾಲ್ ನನಗೆ ಹುಟ್ಟಿಲ್ಲ ಎಂದು ಯಾವಾಗಲೂ ಜಗಳ ಮಾಡುತ್ತಲೇ ಇದ್ದ, ಕೊನೆಗೆ ನನ್ನ ಗಂಡನಿಗೆ ಇಷ್ಟವಿಲ್ಲದ ಮಗು ನನಗೂ ಬೇಡ ಎಂದು ಈ ಪಾಪಿ ತಾಯಿಯೂ ನಿರ್ಧರಿಸಿದ್ದಾಳೆ..

ಮಗು ಏನಾದರೂ ಹಟ ಮಾಡಿದರೆ, ಅತ್ತರೆ ಮಗುವಿಗೆ ಚೆನ್ನಾಗಿ ಹೊಡೆಯುತ್ತಿದ್ದಳು ಎಂದು ತಿಳಿದುಬಂದಿದೆ. ಕೊನೆಗೆ ಇವರ ಹೊಡೆತಕ್ಕೆ ಮಗು ಕೊನೆಯುಸಿರನ್ನೇ ಎಳೆದಿದೆ. ನಿಮ್ಮಂತವರ ಹೊಟ್ಟೆಯಲ್ಲಿ ಹುಟ್ಟಿ ಬಿಟ್ಟೆನ್ನಲ್ಲಾ ಎಂದು ಈ ಲೋಕವನ್ನೇ ತ್ಯಜಿಸಿ ಹೋಗಿದೆ.

ಶಶಿಕುಮಾರ್ ಹಾಗೂ ಪರಿಮಳಾ ದಂಪತಿ ಜೂನ್ ೩೦ರಂದು ರಾತ್ರಿ ಮಗುವಿಗೆ ಹೊಡೆದಿದ್ದಾರೆ. ಆಗ ಮಗುವಿಗೆ ಗಾಯಗಳಾಗಿತ್ತು. ಗಾಯಗೊಂಡ ಮಗುವನ್ನು ಮೈಸೂರಿನ ಚಲುವಾಂಬ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ. ಈ ಸಂಬಂಧ ಪರಿಮಳಾ ಸಹೋದರ ಗೋವಿಂದ ರಾಜು ದೂರು ದಾಖಲಿಸಿದ್ದಾರೆ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಗುವನ್ನು ಸಾಯಿಸಲು ನಾಣು ಭಾಗಿಯಾಗಿದ್ದೇನೆ ಎಂದು ಪರಿಮಳ ಪೋಲೀಸರ ಮುಂದೆ ಒಪ್ಪಿಕೊಂಡಿದ್ದು ಸದ್ಯ ಇಬ್ಬರನ್ನು ಪೊಳಿಸರು ಬಂಧೀಸಿದ್ದಾರೆ.ಯಾಋಇಗೆ ಬೇಕು ಹೇಳಿ ಇಂತಹ ಅಪ್ಪ ಅಮ್ಮ? ನಿಮ್ಮಗಳ ತೀಟೆ ತೀರಿಸಿಕೊಳ್ಳಲು ಮಕ್ಕಳಿಗೆ ಜನ್ಮ ನೀಡಿ ಕೊನೆಗೆ ಈ ರೀತಿ ಆ ಜೀವಗಳನ್ನು ಹೊಡೆದು ಬಡಿದು ಸಾಯಿಸುವುದು ಎಷ್ಟು ಸರಿ? ಸಾಕಲು ಯೋಗ್ಯತೆ ಇಲ್ಲದಿದ್ದರೆ ಯಾವುದಾದರೂ ಅನಾಥಾಶ್ರಮಕ್ಕೆ ನೀಡಿ, ಅಥವಾ ಮಕ್ಕಳು ಇಲ್ಲದೆ ಕೊರಗುತ್ತಿರುವ ದಂಪತಿಗಳಿಗೆ ದತ್ತು ನೀಡಿ ಪುಣ್ಯ ಕಟ್ಟಿಕೊಳ್ಳಿ.. ಇನ್ನೇನು ಹೇಳಲಾರೆ.. ದೇವರು ಸತ್ತರೂ ನಿಮಗೆ ನರಕವನ್ನೇ ಪ್ರಾಪ್ತಿ ಮಾಡಲಿ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ