ವಿಶ್ವ ವಿಖ್ಯಾತ ಮೈಸೂರು ದಸರಾ 2019 ಕ್ಕೆ ತೆರೆಬಿದ್ದಿದ್ದು, ಎಂದಿನಂತೆ ಬನ್ನಿ ಮಂಟಪದಲ್ಲಿ ಪಂಜಿನ ಕವಾಯತಿನ ಮೂಲಕ 2020 ರ ದಸರಾಗೆ ಮುನ್ನುಡಿ ಬರೆಯಲಾಗಿದೆ.

ನಾಡಿನ ಅಧಿದೇವತೆ ಚಾಮುಂಡೇಶ್ವರಿ ತಾಯಿಯ ಆಶೀರ್ವಾದದಿಂದ ಅಂಬಾರಿ ಮೆರವಣಿಗೆ ಯಾವುದೇ ಅಡ್ಡಿಯಿಲ್ಲದೆ ಸರಾಗವಾಗಿ ನಡೆದಿದೆ. ಆದರೆ ನಿನ್ನೆ ವಿಜಯದಶಮಿಯ ಮೆರವಣಿಗೆಗೂ ಮುನ್ನ ಕೊಂಚ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ರಾಜಮಾತೆ ಪ್ರಮೋದ ದೇವಿಯವರ ಸಮಯ ಪ್ರಜ್ಞೆ ಯಿಂದ ಆಗಬಹುದಾಗಿದ್ದ ಅನಾಹುತ ತಪ್ಪಿದೆ.

ಹೌದು ನಿನ್ನೆ ಅಂಬಾರಿಯನ್ನು ಹೊರುವ ಅರ್ಜುನ ಸಿದ್ಧನಾಗಿ ಬಂದು ನಿಂತಾಗ ಅವನ ಮೇಲೆ ಅಂಬಾರಿಯನ್ನು ಕೂರಿಸಿ ಕಟ್ಟಲಾಯಿತು. ಆದರೆ ಅಂಬಾರಿ ಬಲಭಾಗಕ್ಕೆ ವಾಲಿ ಹೋಗಿತ್ತು. ಒಮ್ಮೆ ಅಂಬಾರಿಯನ್ನು ಆನೆಯ ಮೇಕೆ ಇಟ್ಟು ಕಟ್ಟಿದ ನಂತರ ಮತ್ತೆ ಅದನ್ನು ಬಿಚ್ವಿ ಕಟ್ಟುವುದು ಕಷ್ಟ.. ಹಾಗೆಯೇ ಅದು ಆನೆಗೂ ಕಷ್ಟವಾಗುತ್ತದೆ.

ಅಂಬಾರಿ ವಾಲಿರುವುದು ಹತ್ತಿರದಲ್ಲಿದ್ದವರಿಗೆ ಅಷ್ಟಾಗಿ ಕಾಣುವುದಿಲ್ಲ. ಆದ್ದರಿಂದ ಅಲ್ಲಿದ್ದ ಸಿಬ್ಬಂದಿ ಅಂಬಾರಿಯನ್ನು ಮುಂದೆಜ್ಜೆ ಇಡಿಸಿದರು. ಆದರೆ ಇದು ದೂರದಿಂದ ಸ್ಪಷ್ಟವಾಗಿ ಕಾಣುತ್ತಿತ್ತು. ನೋಡಿದವರಿಗೆ ಆತಂಕವೂ ಉಂಟಾಗಿತ್ತು. ಅರಮನೆ ಬಳಿಗೆ ಅಂಬಾರಿ ಹೊತ್ತ ಅರ್ಜುನ ಬಂದ ಕೂಡಲೆ, ಅಕ್ಕ ಪಕ್ಕದ ಸಿಬ್ಬಂದಿ ಅರಮನೆಯ ಕಿಟಕಿ ಬಳಿ ನಿಂತ ರಾಜಮಾತೆಯವರನ್ನು ನೋಡಿ ಮೌನವಾಗಿಯೇ ಅನುಮತಿ ಪಡೆದು ಮುಂದೆ ಸಾಗಲು ನೋಡಿದರು.

ಆದರೆ ರಾಜಮಾತೆ ಅಂಬಾರಿ ವಾಲಿರುವುದನ್ನು ಕೈ ಸನ್ನೆ ಮೂಲಕ ತಿಳಿಸಿ ಅದನ್ನು ಸರಿಪಡಿಸುವಂತೆಯೂ ಸೂಚಿಸಿದರು. ಇದನ್ನು ಅರಿತ ಸಿಬ್ಬಂದಿ ಅಂಬಾರಿಯ ಎಡ ಭಾಗಕ್ಕೆ ಎರಡು ಹಗ್ಗಗಳನ್ನು ಕಟ್ಟಿ ಅದನ್ನು ಅರ್ಜುನನ ಎಡ ಭಾಗದಲ್ಲಿ ಸಾಗುತ್ತಿದ್ದ ಕಾವೇರಿ ಆನೆಯ ಪಕ್ಕದಲ್ಲಿ ಇಬ್ಬರು ಸಿಬ್ಬಂದಿ ಮೆರವಣಿಗೆಯುದ್ದಕ್ಕೂ ಹಿಡಿದು ಸಾಗಿದರು..

ಆನಂತರ ಅಂಬಾರಿ ಒಂದು ಸಮತೋಲನಕ್ಕೆ ಬಂದು ಯಾವುದೇ ಅಡ್ಡಿಯಿಲ್ಲದ ಹಾಗೆ ಸಾಗಿತು.. ಅಂಬಾರಿ ವಾಲಿದರೆ ಅದು ನಾಡಿಗೆ ಶ್ರೇಯಸ್ಸಲ್ಲ ಎಂಬುದು ಹಿರಿಯರ ಮಾತು.. ಅದನ್ನು ತಕ್ಷಣ ಗಮನಿಸಿ ಸರಿಪಡಿಸುವಂತೆ ತಿಳಿಸಿದ ರಾಜಮಾತೆಯವರ ಸಮಯ ಪ್ರಜ್ಞೆ ನಿಜಕ್ಕೂ ರಾಜಮನೆತನದವರು ನಾಡನ್ನು ಕಾಯುವ ದೊಡ್ಡಗುಣವನ್ನು ತೋರುತ್ತದೆ.

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ