ಜೀ ವಾಹಿನಿಯಲ್ಲಿ ಪ್ರಸಾರವಾಗುವ ಪಾರು ಧಾರಾವಾಹಿ ಅತ್ಯಂತ ಶ್ರೀಮಂತಿಕೆಯಿಂದ ಮೂಡಿ ಬರುತ್ತಿದೆ. ಧಾರಾವಾಹಿಯಲ್ಲಿನ ಪ್ರಮುಖ ಆಕರ್ಷಣೆ ಅದು ಅಖಿಲಾಂಡೇಶ್ವರಿ ಪಾತ್ರ ಮಾಡುತ್ತಿರುವ ವಿನಯಾ ಪ್ರಸಾದ್ ಅವರು ಹಾಗೂ ಅವರ ಅರಸನ ಕೋಟೆ.. ಆ ಅರಸನ ಕೋಟೆಯ ಮನೆ ಒಬ್ಬ ಕನ್ನಡದ ಸೂಪರ್ ಸ್ಟಾರ್ ನ ಮನೆ ಅನ್ನೋದು ಬಹುತೇಕರಿಗೆ ತಿಳಿದಿಲ್ಲ..

ಹೌದು ಧಾರಾವಾಹಿಯ ಶೂಟಿಂಗ್ ಗಾಗಿ ಆ ಮನೆಯನ್ನು ಬಳಸಲಾಗುತ್ತಿದೆ. ಆದರೆ ಆ ವ್ಯಕ್ತಿ ಈಗ ನಮ್ಮೊಂದಿಗೆ ಇಲ್ಲ.. ಹೌದು ಅವರು ಮತ್ಯಾರೂ ಅಲ್ಲ ಕನ್ನಡದ ಹೆಸರಾಂತ ಗಾಯಕ ಎಲ್ ಎನ್ ಶಾಸ್ತ್ರೀ ಅವರು..

ಹೌದು ಎಲ್.ಎನ್.ಶಾಸ್ತ್ರೀ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾಗ ಚಿಕಿತ್ಸೆಗೆ ಹಣದ ಅವಶ್ಯಕತೆ ಇದೆ ಎಂಬ ಸುದ್ದಿ ಹರಿದಾಡಿತ್ತು. ಆಗ ಇಡೀ ನಾಡೇ ಸಹಾಯ ಮಾಡಲು ಮುಂದಾಗಿತ್ತು. ಆದರೆ ಇದೆಲ್ಲದಕ್ಕೂ ಶಾಸ್ತ್ರೀ ಅವರ ಮಡದಿ ತೆರೆ ಎಳೆದು ನಮ್ಮ ಇಂಡಸ್ಟ್ರಿಯಲ್ಲಿ ತುಂಬ ಜನ ಆತ್ಮೀಯರು ಇದ್ದಾರೆ. ಹಾಗೆಯೇ ನಮ್ಮ ಸಂಬಂಧಿಕರೂ ಕೂಡ ಇದ್ದಾರೆ. ಸದ್ಯ ಹಣದ ಅವಶ್ಯಕತೆ ಇಲ್ಲ.. ಇದ್ದರೆ ಖಂಡಿತವಾಗಿಯೂ ತಿಳಿಸುತ್ತೇನೆ. ನಾಡಿನ ಜನರ ಪ್ರೀತಿ ಕಾಳಜಿಗೆ ಧನ್ಯವಾದಗಳನ್ನು ತಿಳಿಸಿ ಯಾರಿಂದಲೂ ಯಾವುದೇ ಸಹಾಯ ಪಡೆಯದೆ ದೊಡ್ಡತನ ತೋರಿದ್ದರು.

ಆದರೆ ವಿಧಿಯ ಆಟ ಶಾಸ್ತ್ರೀ ಅವರು ಹೆಚ್ಚು ದಿನ ಉಳಿಯಲಿಲ್ಲ.. ಆನಂತರ ಮನೆಯ ಜವಾಬ್ದಾರಿ ಶಾಸ್ತ್ರೀ ಅವರ ಮಡದಿ ಸುಮಾ ಅವರ ಮೇಲೆ ಬಿತ್ತು.. ಸುಮಾ ಅವರೂ ಕೂಡ ಹಿನ್ನೆಲೆ ಗಾಯಕಿ.. ಆದರೆ ಮನೆಯ ನಿರ್ವಹಣೆ ಸುಲಭದ ಮಾತಾಗಿರಲಿಲ್ಲ.. ಆಗ ದಿಟ್ಟವಾಗಿ ನಿರ್ಧಾರ ಮಾಡಿದರು..

ಶಾಸ್ತ್ರೀ ಅವರು ಹಾಗೂ ಸುಮಾ ಅವರು ಬಹಳಷ್ಟು ಕನಸು ಕಂಡು ಕಟ್ಟಿದ್ದ ಅದ್ಭುತವಾದ ಮನೆ ಅದು.. ತುಂಬಾ ದೊಡ್ಡ ಮನೆ, ಸುತ್ತ ಹಸಿರು, ನೆಮ್ಮದಿಯ ವಾತಾವರಣ.. ಮನೆಯ ಒಂದು ಭಾಗದಲ್ಲಿ ಸುಮಾ ಶಾಸ್ತ್ರೀ ಅವರ ಕುಟುಂಬ ಇದ್ದುಕೊಂಡು ಮನೆಯ ಉಳಿದ ಭಾಗವನ್ನು ಶೂಟಿಂಗ್ ಗಾಗಿ ನೀಡಲು ನಿರ್ಧರಿಸಿದರು.. ಈ ವಿಷಯ ಪಾರು ಧಾರಾವಾಹಿ ನಿರ್ಮಾಪಕ ದಿಲೀಪ್ ರಾಜ್ ಅವರಿಗೆ ತಿಳಿದು ಮನೆ ನೋಡಲು ಹೋದರು..

ಅವರ ಕತೆಗೆ ತಕ್ಕನಾದ ಅರಸನ ಕೋಟೆ ಇದೇ ಮನೆ ಎಂದು ತೀರ್ಮಾನಿಸಿ ಇಲ್ಲಿಯೇ ಶೂಟಿಂಗ್ ಮಾಡುತ್ತೇವೆ ಎಂದರು. ಆ ಸಮಯದಲ್ಲಿ ಮನೆಯಲ್ಲಿ ಸುಮಾ ಶಾಸ್ತ್ರೀ ಅವರ ಫೋಟೋ ನೋಡಿದ ದಿಲೀಪ್ ರಾಜ್ ಅವರು ತಮ್ಮ ಹೆಂಡತಿ ವಿದ್ಯಾ ಅವರ ಬಳಿ ಸುಮಾ ಅವರು ಆಕ್ಟ್ ಮಾಡುತ್ತಾರಾ ಕೇಳು ಎಂದು ಕೇಳಿಸಿದ್ದರು.. ಆದರೆ ಸುಮಾ ಅವರು ನನಗೆ ಆಕ್ಟಿಂಗ್ ಬರುವುದಿಲ್ಲ ಎಂದು ಹಿಂದೆ ಸರಿದಿದ್ದರು.

ಆನಂತರ ಈ ಧಾರಾವಾಹಿಯಲ್ಲಿ ವಿನಯಾ ಪ್ರಸಾದ್ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ಕೇಳಿದ ಕೂಡಲೆ ಸುಮಾ ಶಾಸ್ತ್ರೀ ಅವರು ಧಾರಾವಾಹಿಯಲ್ಲಿ ಅಭಿನಯಿಸಲು ಒಪ್ಪಿಗೆ ಸೂಚಿಸಿದರು. ಇದಕ್ಕೆ ಕಾರಣ ವಿನಯಾ ಪ್ರಸಾದ್ ಅವರು ಹಾಗೂ ಸುಮಾ ಶಾಸ್ತ್ರೀ ಅವರು ಕಾಲೇಜಿನ ಸ್ನೇಹಿತೆಯರು..

ಕೊನೆಗೆ ಧಾರಾವಾಹಿಯಲ್ಲಿ ಅರಸನ ಕೋಟೆಯ ಕುಕಿಂಗ್ ಹೆಡ್ ಸಾವಿತ್ರಿ ಪಾತ್ರದಲ್ಲಿ ಸುಮ ಶಾಸ್ತ್ರೀ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಕೈಲಾಗದು ಎಂದು ಸುಮ್ಮನೆ ಕೂತರೆ ಜೀವನ ಮುಂದೆ ಸಾಗುವುದಿಲ್ಲ.. ವಿಧಿ ನಡೆಸಿಕೊಂಡು ಹೋದ ಹಾಗೆ ನಾವುಗಳು ಸಾಗುತ್ತಿರಬೇಕು ಎಂಬುದಕ್ಕೆ ಸುಮಾ ಶಾಸ್ತ್ರೀ ಅವರು ನೈಜ್ಯ ಉದಾಹರಣೆ.. ಶುಭವಾಗಲಿ ಮೇಡಂ ನಿಮಗೆ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ