ಕನ್ನಡದ ಹೆಸರಾಂತ ನಟಿ ರಾಧಿಕಾ ಕುಮಾರಸ್ವಾಮಿ ಅವರ ತಂದೆ ನಿಧನರಾಗಿದ್ದರೆ.. ರಾಧಿಕಾ ಕುಮಾರಸ್ವಾಮಿ ಅವರ ತಂದೆಯ ಹೆಸರು ದೇವರಾಜ್.. ಇವರೇ ನೋಡಿ ದೇವರಾಜ್..

ದೇವರಾಜ್ ಅವರು ನಿನ್ನೆ ಬೆಳಗ್ಗೆ ಆಸ್ಪತ್ರೆಯಲ್ಲಿ ನಿಧರಾಗಿದ್ದಾರೆ.. ರಾಧಿಕಾ ಕುಮಾರಸ್ವಾಮಿ ಅವರ ತಂದೆ ಕಿಡ್ನಿ ಸಮಸ್ಯೆ ಮತ್ತು ವಿಪರೀತ ಜ್ವರದಿಂದ ಬಳಲುತ್ತಿದ್ದರು.. ಇದೇ ಕಾರಣಕ್ಕೆ ರಾಧಿಕಾ ಅವರು ತಮ್ಮ ತಂದೆಯನ್ನು ಮೊನ್ನೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು.. ಆದರೆ ಅಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿರದೇ ಹೋದ ಕಾರಣ.. ಬೆಂಗಳೂರಿನ ಎನ್ ಯು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಇಲ್ಲೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ರಾಧಿಕಾ ಕುಮಾರಸ್ವಾಮಿ ಅವರ ತಂದೆ ದೇವರಾಜ್ ಮೃತಪಟ್ಟಿದ್ದಾರೆ..

ಕಳೆದ 4 ದಿನಗಳಿಂದ ರಾಧಿಕಾ ಅವರ ಮಂಗಳೂರಿನ ಸೋಲೆತ್ತೂರು ಗ್ರಾಮದಲ್ಲಿ ನೇಮ, ಕೋಲ ಸಂಭ್ರಮದಲ್ಲಿ ಇಡೀ ಕುಟುಂಬ ಸಂಭ್ರಮಿಸುತ್ತಿತ್ತು.. ಆದರೆ ದುರ್ವಿಧಿ.. ತಂದೆಯನ್ನೇ ಕರೆಸಿಕೊಂಡಿತು..

ನಿನ್ನೆ ಬೆಂಗಳೂರಿನ ಆಸ್ಪತ್ರೆಯಿಂದ ಮೃತದೇಹವನ್ನು ಮಂಗಳೂರಿಗೆ ತೆಗೆದುಕೊಂಡು ಹೋಗಿದ್ದು, ಅಲ್ಲಿಯೇ ಅಂತ್ಯಸಂಸ್ಕಾರ ನಡೆದಿದೆ.. ಮೃತರ ಆತ್ಮಕ್ಕೆ ಶಾಂತಿ ಸಿಗಲಿ.. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ