ಜೀ ಕನ್ನಡ ವಾಹಿನಿಯ ಬ್ಯುಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಅವರ ಬಗ್ಗೆ ಎಲ್ಲರಿಗೂ ತಿಳಿದೇ ಇದೆ.. ಬಹುಶಃ ಕಿರುತೆರೆಯ ಚಾಣಕ್ಯ ಎಂದರೂ ತಪ್ಪಾಗಲಾರದು.. ಅವರನ್ನು ಬಲ್ಲವರು ಸ್ಮಾಲ್ ಸ್ಕ್ರೀನ್ ಮಾಂತ್ರಿಕ ಎಂದೇ ಕರೆಯುತ್ತಾರೆ..

ಇನ್ನು ಸದ್ಯ ಕಿರುತೆರೆಯ ಸೆನ್ಸೇಷನ್ ಎನಿಸಿಕೊಂಡು ದಾಖಲೆ ನಿರ್ಮಿಸಿರುವ ಜೊತೆಜೊತೆಯಲಿ ಧಾರಾವಾಹಿ ಕೂಡ ಇವರ ಕನಸಿನ ಕೂಸೇ.. ಒಂದು ಚಾನಲ್ ಗೆ ಇಂತಹ ಯಶಸ್ಸು ಕೊಟ್ಟ ಈ ವ್ಯಕ್ತಿಗೆ ಸಿಕ್ಕಿದ್ದೇನು.. ಬಹುಶಃ ಒಬ್ಬ ಬುದ್ದಿವಂತ ಶ್ರಮ ಜೀವಿಗೆ ಸಲ್ಲಬೇಕಾದ ಗೌರವ ಈಗ ಸಿಕ್ಕಿದೆ ಎನ್ನಬಹುದು..

ಹೌದು ರಾಘವೇಂದ್ರ ಹುಣಸೂರು ಅವರಿಗೆ ಎಕ್ಸ್ಚೇಂಜ್ 4 ಮೀಡಿಯಾ ಗ್ರೂಪ್ ನ ಪ್ರತಿಷ್ಠಿತ 40 ಅಂಡರ್ 40 ಪ್ರಶಸ್ತಿ ಲಭಿಸಿದೆ.. ಹೌದು ಈ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಕನ್ನಡಿಗ ಕೂಡ ಇವರೇ..

ರಾಘವೇಂದ್ರ ಹುಣಸೂರು ಅವರ ಜರ್ನಿ ಹೂವಿನ ಹಾದಿಯದ್ದಾಗಿರಲಿಲ್ಲ.. ಬಹಳ ಕಷ್ಟಪಟ್ಟು, ಮಾಡುವ ಕೆಲಸವನ್ನು ಇಷ್ಟಪಟ್ಟು ಮೇಲೆ ಬಂದವರು ರಾಘವೇಂದ್ರ ಹುಣಸೂರು ಅವರು.. ನಮಗೆ ತಿಳಿದಿರುವಂತೆ ಸುವರ್ಣ ವಾಹಿನಿಯಲ್ಲಿ ಎಕ್ಸಿಕ್ಯುಟಿವ್ ಪ್ರಡ್ಯೂಸರ್ ಆಗಿ ಶುರುವಾದ ಇವರ ಜರ್ನಿ ಇದೀಗ ಒಂದು ಚಾನಲ್ ನ ಬ್ಯುಸಿನೆಸ್ ಹೆಡ್ ಆಗುವ ಮಟ್ಟಕ್ಕೆ ಬಂದು ನಿಂತಿದೆ ಎಂದರೆ ನಿಜಕ್ಕೂ ಇದು ಸಂಪೂರ್ಣ ಇವರ ಬುದ್ದಿ ಹಾಗೂ ಬೆವರಿನ ಫಲ ಮಾತ್ರ..

ಒಂದು ಕಾಲದಲ್ಲಿ ಕೋಟ್ಯಾಧಿಪತಿ ಎಂದರೆ ಎಲ್ಲರೂ ಓಡೋಡಿ ಬಂದು ಟಿ ವಿ ಮುಂದೆ ಹಾಜರಾಗುತ್ತಿದ್ದೆವು.. ಆ ಶೋ ಹಿಂದಿನ ಮ್ಯಾಜಿಕ್ ಮ್ಯಾನ್ ಇವರೇ.. ಅಷ್ಟೇ ಅಲ್ಲ ಪ್ಯಾಟೇ ಹುಡ್ಗೀರ್ ಹಳ್ಳಿ ಲೈಫು ಎಂಬ ವಿಭಿನ್ನ ಕಾನ್ಸೆಪ್ಟ್ ಮೂಲಕ ರಿಯಾಲಿಟಿ ಶೋ ಅನ್ನು ಪರಿಚಯಿಸಿದವರೂ ಕೂಡ ಇವರೇ..

ಇದೀಗ ಪಾರು, ಕಮಲಿ, ಜೊತೆಜೊತೆಯಲಿ, ಗಟ್ಟಿ ಮೇಳ ಹೀಗೆ ಅನೇಕ ಧಾರಾವಾಹಿಗಳ ಹುಟ್ಟಿನ ಹಿಂದೆ ಇರುವ ಮಾಂತ್ರಿಕ ಈತ.. ವೀಕೆಂಡ್ ವಿತ್ ರಮೇಶ್, ಸರಿಗಮಪ, ಡ್ರಾಮಾ ಜ್ಯೂನಿಯರ್ಸ್, ಕಾಮಿಡಿ ಕಿಲಾಡಿಗಳು, ಡಿಕೆಡಿ ಹೀಗೆ ಹತ್ತು ಹಲವು ಯಶಸ್ವಿ ಶೋಗಳನ್ನು ಕೊಟ್ಟದ್ದು ಇವರೇ..

ಇವರ ಬಗ್ಗೆ ಹೊಗಳಿದರೆ ಅದು ಎಂದಿಗೂ ಅತಿಶಯೋಕ್ತಿಯಲ್ಲ… ಕಾರಣ ಈತ ತಾನು ಬೆಳೆದಂತೆ ತನ್ನ ಜೊತೆ ಇದ್ದವರನ್ನು ಜೊತೆಜೊತೆಯಾಗಿಯೇ ಬೆಳೆಸಿಕೊಂಡು ಬಂದ ದೊಡ್ಡ ಗುಣದವ.. ಸದ್ಯ ಜೀ ವಾಹಿನಿ ನಂಬರ್ 1 ಪಟ್ಟಕ್ಕೆ ಏರಲು ಇವರು ಹಾಗೂ ಇವರ ತಂಡವೇ ಕಾರಣ ಎನ್ನಲೇ ಬೇಕು..

ದೊಡ್ಡ ಪೊಸಿಷನ್ ನಲ್ಲಿ ಇದ್ದರೂ ಕೂಡ ಈಗಲೂ ಎಲ್ಲಾ ಧಾರಾವಾಹಿಗಳನ್ನು ಖುದ್ದು ತಾವೇ ನೋಡಿ, ಅಲ್ಲಿ ಏನಾದರೂ ತಪ್ಪಿದ್ದರೇ ಜನರಿಗೆ ತೋರುವ ಮುನ್ನವೇ ತಿದ್ದಿ ನಂತರ ಟೆಲಿಕಾಸ್ಟ್ ಮಾಡಿಸುವ ಇವರ ಕೆಲಸದ ಮೇಲಿನ ಶ್ರದ್ಧೆಗೆ ಯಾವ ಪ್ರಶಸ್ತಿ ಕೊಟ್ಟರೂ ಅದು ಕಡಿಮೆಯೇ..

ಸದ್ಯ ಸೌತ್ ಕಿರುತೆರೆ ಇಂಡಸ್ಟ್ರಿಗಳು ಕನ್ನಡ ಕಿರುತೆರೆಯ ಕಡೆ ತಿರುಗಿ ನೋಡುವಂತೆ ಮಾಡಿದ ರಾಘವೇಂದ್ರ ಹುಣಸೂರು ಅವರಿಗೆ ಪ್ರತಿಷ್ಠಿತ ಇಂಪಾಕ್ಟ್ 40 ಅಂಡರ್ 40 ಪ್ರಶಸ್ತಿ ಲಭಿಸಿರುವುದು ಕನ್ನಡಿಗರು ಹೆಮ್ಮೆ ಪಡುವ ವಿಷಯವಾಗಿದೆ..

ಎಲ್ಲಾ ಕನ್ನಡಿಗರ ಪರವಾಗಿ ಅಭಿನಂದನೆಗಳು ಸರ್ ನಿಮಗೆ.. ಶುಭವಾಗಲಿ.. ನಿಮ್ಮ ಈ ಯಶಸ್ಸಿನ ಜರ್ನಿ ಹೀಗೆ ಮುಂದುವರೆಯಲಿ.. ಕನ್ನಡ ಕಿರುತೆರೆ ಇನ್ನಷ್ಟು ಹೆಸರು ಮಾಡುವಂತಾಗಲಿ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ