ನಮಸ್ಕಾರ ರಮೇಶ್ ಅರವಿಂದ್ ಸರ್, ಹಾಗೂ ರಮೇಶ್ ಅರವಿಂದ್ ಅವರ ಇನ್ನೊಂದು ಮುಖ ನೋಡಲು ಖಾತುರದಿಂದ, ಕುತೂಹಲದಿಂದ ಈ ಪತ್ರ ಓದುತ್ತಿರುವ ಎಲ್ಲರಿಗೂ ನಮಸ್ಕಾರ..

ಯಾರೀ ರಮೇಶ್ ಅರವಿಂದ್?? ನಟನಾ?? ನಿರೂಪಕನಾ?? ಅಥವಾ ನಿರ್ದೇಶಕನಾ????? ಹೌದು ರಮೇಶ್ ಅರವಿಂದ್ ಅವರು ನಟನೂ ಹೌದು, ನಿರೂಪಕನೂ ಹೌದು, ನಿರ್ದೇಶಕನೂ ಹೌದು.. ಅದಕ್ಕಿಂತ ಮಿಗಿಲಾಗಿ ನೀವು ಈ ಮನುಷ್ಯನ ಬಗ್ಗೆ ತಿಳಿದುಕೊಳ್ಳಬೇಕಾದದ್ದು ಬೇರೇನೆ ಇದೆ..

ಸಿನಿಮಾಗಳಲ್ಲಿ ನಿರಾಶೆಯ ಪಾತ್ರದಲ್ಲಿಯೇ ಹೆಚ್ಚು ಕಾಣಿಸಿಕೊಂಡವರು ರಮೇಶ್.. ಜೀವನದಲ್ಲಿ ಸೋತ ಪಾತ್ರಗಳಿಗೆ ಜೀವ ತುಂಬಿದವರೇ ರಮೇಶ್, ಆನಂತರ ಇತ್ತೀಚೆಗೆ ಕೆಲ ವರ್ಷಗಳಿಂದೀಚೆಗಷ್ಟೇ ರಮೇಶ್ ಅವರ ಪಾತ್ರಗಳಲ್ಲಿ ಹಾಸ್ಯ ಮಿಶ್ರಿತಗೊಂಡದ್ದು.. ಅದಿರಲಿ ಬಿಡಿ.. ಈಗ ಟ್ರೆಂಡ್ ನಲ್ಲಿ ಇರುವಂತಹ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಜೀವ ತುಂಬುತ್ತಿರುವ ರಮೇಶ್ ಜನರ ಕಣ್ಣಿಗೆ ಕೇವಲ ನಿರೂಪಕನಾಗಿ ಕಾಣಸಿಗಬಹುದೇನೋ..

ಸಾಧಕರ ಜೀವನದ ಸಾಲುಗಳನ್ನು ಕಂಠಪಾಠ ಮಾಡಿ ಹೇಳುತ್ತಿದ್ದಾರೆ ಎಂದು ಕೆಲವರು ಅಂದುಕೊಳ್ಳಬಹುದೇನೋ.. ಆದರೆ ರಮೇಶ್ ಎಂದರೆ ಅದಲ್ಲಾ..

ಈಗ ನಾನು ಹೇಳುತ್ತಿರುವ ರಮೇಶ್ ಸೋಲುವ ಪಾತ್ರಗಳನ್ನೇ ಮಾಡಿಕೊಂಡು ಜೀವನದಲ್ಲಿ ಗೆದ್ದ ನಟನೂ ಅಲ್ಲ.. ಇನ್ನೊಬ್ಬರ ಸಾಧನೆಯ ಅದ್ಭುತ ವರ್ಣನೆಗೆ ಹೆಸರಾಗಿರುವ ನಿರೂಪಕನೂ ಅಲ್ಲ.. ನಿರ್ದೇಶಕನೂ ಅಲ್ಲ..

ರಮೇಶ್ ಎಂದರೆ ಬೇರೆನೇ ಅರ್ಥವಿದೆ.. ತಾವು ನಟನೆ ಮಾಡಿದ ಪಾತ್ರಗಳ ಪೈಕಿ ಶೇ.80 ರಷ್ಟು ಸೋತು ನಿರಾಶರಾಗುವ ಪಾತ್ರಗಳೇ ಇರಬಹುದು.. ಆದರೆ ಪಾತ್ರದಿಂದ ಹೊರ ಬಂದು ನೋಡಿದರೆ, ನೂರಾರು, ಸಾವಿರಾರು, ಕ್ಷಮಿಸಿ ಲಕ್ಷಾಂತರ ವಿದ್ಯಾರ್ಥಿಗಳ ಗೆಲುವಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ ರಮೇಶ್..

ಅನೇಕರಿಗೆ ಇದೇನು ಹೊಸ ವಿಷಯ ಎಂದೆನಿಸಬಹುದು.. ಆದರೆ ಕೆಲವರಿಗೆ ಮಾತ್ರ ಗೊತ್ತು.. ರಮೇಶ್ ನಿಜ ಜೀವನದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳನ್ನು ಓದಿನ ಕಡೆ ಸೆಳೆಯಲು, ಜೀವನದಲ್ಲಿ ಏನನ್ನಾದರೂ ಸಾಧಿಸಿ ಎಂದು ಹುರಿದುಂಬಿಸಲು ತಮ್ಮ ಮಾತನ್ನೇ ಅಸ್ತ್ರವನ್ನಾಗಿಸಿ ವಿದ್ಯಾರ್ಥಿಗಳ ಮನಸ್ಸಿಗೆ ನಾಟುವಂತೆ.. ಎದೆಯಲ್ಲಿ ಛಲವನ್ನು ತುಂಬಿ ಸಾಧನೆಯ ಹಾದಿಗೆ ನೂಕುತ್ತಿದ್ದಾರೆ ಎನ್ನಲೇ ಬೇಕು..

ಜೀವನದಲ್ಲಿ ಏನೂ ಬೇಡ ಸಿಂಪಲ್ ಜೀವನ ಸಾಗಿಸಿಕೊಂಡು ಹೋದರೆ ಸಾಕು.. ಎಂದುಕೊಳ್ಳುವವರು ಒಮ್ಮೆ ರಮೇಶ್ ಅವರ ಮಾತುಗಳನ್ನ ಕೇಳಿ ನೋಡಿ.. ನನ್ನ ಜೀವನ ಇದಲ್ಲ.. ಇದಕ್ಕಿಂತ ಒಳ್ಳೆಯ ಜೀವನ ನನ್ನದು.. ನನಗೆ ಅಷ್ಟು ಸಾಮರ್ಥ್ಯವಿದೆ ಎಂದೆನಿಸುತ್ತದೆ..

ರಮೇಶ್ ಅವರು ಮಾಡೋ ಕೆಲಸ ಒಂದಲ್ಲಾ, ಎರಡಲ್ಲಾ.. ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಮಕ್ಕಳಿಗೆ ಉರಿದುಂಬಿಸುತ್ತಾರೆ, ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಮೂಲಕ ಏನಾದರು ಸಾಧಿಸಿ ಎಂದು ಮನಸ್ಸಿಗೆ ನಾಟುವಂತೆ ಮಾತನಾಡುತ್ತಾರೆ..

ಫೇಸ್ ಬುಕ್ ಹಾಗೂ ಯೂಟ್ಯೂಬ್ ಗಳಲ್ಲಿ ರಮೇಶ್ ಅರವಿಂದ್ ಎಂದು ಸರ್ಚ್ ಮಾಡಿದರೆ ನಿಮಗೆ ಅವರ ವೀಡಿಯೋಗಳು ಸಿಗಲಿವೆ.. ನೀವೂ ಕೇಳಿ.. ನಿಮ್ಮ ಮಕ್ಕಳಿಗೂ ಕೇಳಿಸಿ.. ಕಿರಿಯರಾಗಲಿ, ಹಿರಿಯರಾಗಲಿ ರಮೇಶ್ ಅವರ ಮಾತಿಗೆ ಕೂತ ಜಾಗದಿಂದ ಒಂದು ಕ್ಷಣ ಎದ್ದು ನಾನೇನಾದರೂ ಮಾಡಲೇಬೇಕು ಎಂದುಕೊಳ್ಳುವುದಂತೂ ಸತ್ಯ..

ರಮೇಶ್ ಅವರು ಯಾವುದಾದರೂ ದೇವಸ್ಥಾನದ ಕಾರ್ಯಕ್ರಮಕ್ಕೆ ಹೋದರೂ ಕೂಡ.. ಅಲ್ಲಿ ದೇವರ ಬಗ್ಗೆ ಮಾತನಾಡದೇ ಜೀವನದಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ಮಾತನಾಡುತ್ತಾರೆ.. ಇದಕ್ಕೊಂದು ಸಣ್ಣ ಉದಾಹರಣೆ.. ಇತ್ತೀಚೆಗೆ ಧರ್ಮಸ್ಥಳದಲ್ಲಿ ನಡೆದ ಬಾಹುಬಲಿ ಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ರಮೇಶ್ ಅವರನ್ನ ಅತಿಥಿಯನ್ನಾಗಿ ಕರೆಸಿದರೆ.. ಈ ಪುಣ್ಯಾತ್ಮ ಅಲ್ಲಿ ಮೈಕ್ ಹಿಡಿದು ಮಾತನಾಡಿದ್ದೇನು ಗೊತ್ತಾ?? ಅದ್ಭುತವಾಗಿದೆ.. ಇಲ್ಲಿದೆ ನೋಡಿ..

” ದೇವಸ್ಥಾನಗಳಲ್ಲಿ ದೇವರ ಮೂರ್ತಿಗಳು ಯಾಕೆ ತುಂಬಾ ಎತ್ತರ ಇರುತ್ತವೆ ಅಂತ ಗೊತ್ತಾ?? ಆ ದೇವಸ್ಥಾನಕ್ಕೆ ಬರುವ ಜನರೂ ಜೀವನದಲ್ಲಿ ಅಷ್ಟೇ ಎತ್ತರಕ್ಕೆ ಬೆಳೆಯಬೇಕು ಎಂದು ದೇವರ ಮೂರ್ತಿಯ ಮೂಲಕ ತಿಳಿಸಲಾಗಿದೆ” ಎಂದರು..

ಇದಿಷ್ಟು ಸಾಕಲ್ಲವೇ ರಮೇಶ್ ಅವರಿಗೆ ಸಮಾಜದ ಮೇಲೆ ಎಷ್ಟು ಕಳಕಳಿ ಇದೆ ಎಂದು ತಿಳಿಯಲು.. ರಮೇಶ್ ಅವರು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ತಮ್ಮ ಬಿಡುವಿಲ್ಲದ ಸಮಯದಲ್ಲಿಯೂ ವಿದ್ಯಾರ್ಥಿಗಳಿಗಾಗಿ ವೀಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡುತ್ತಿರುತ್ತಾರೆ..

ಸತ್ಯ ಹೇಳಬೇಕೆಂದರೆ ಇದರಿಂದ ಅವರಿಗೆ ಏನೂ ಲಾಭವಿಲ್ಲ.. ಆದರೆ ಆತ್ಮ ತೃಪ್ತಿ ಇದೆ..‌ಕ್ಷಮಿಸಿ ಆತ್ಮ ತೃಪ್ತಿ ಗಿಂತ ದೊಡ್ಡ ಲಾಭ ಮತ್ತೊಂದಿದೆಯೇ?

ರಮೇಶ್ ಅವರ ವೀಡಿಯೋಗಳನ್ನು ಪ್ರತಿಯೊಬ್ಬರೂ ನೋಡಿ.. ಅದರಲ್ಲೂ ಕಾಲೇಜಿನಲ್ಲಿ ಪ್ರೀತಿ ಪ್ರೇಮ ಎಂದು ಜೀವನವನ್ನು ಹಾಳು ಮಾಡಿಕೊಳ್ಳುವ ಪ್ರತಿಯೊಬ್ಬರೂ ರಮೇಶ್ ಅವರ ಮಾತುಗಳನ್ನ ಕೇಳಿದರೆ ನಿಜಕ್ಕೂ ಜೀವನದಲ್ಲಿ ಮೊದಲು ಏನನ್ನಾದರು ಸಾಧಿಸಿ ನಂತರವಷ್ಟೇ ಪ್ರೀತಿ ಮಾಡಲು ಮುಂದಾಗುತ್ತಾರೆ..

ಇದೇ ರಮೇಶ್ ಅವರ ನಿಜವಾದ ಮುಖ.. ನಿಜ ಜೀವನದ ಮುಖ.. ಬೆಳ್ಳೆತೆರೆಯ ನಟನೂ ಅಲ್ಲ.. ಕಿರುತೆರೆಯ ನಿರೂಪಕನೂ ಅಲ್ಲ.. ತೆರೆಯ ಹಿಂದಿನ ನಿರ್ದೇಶಕನೂ ಅಲ್ಲ.. ನಿಜ ಜೀವನದಲ್ಲಿ ವಿದ್ಯಾರ್ಥಿಗಳ ಸ್ಫೂರ್ತಿಯ ಸೆಲೆ.. ನಿಜ ಜೀವನದ ಜೆಂಟಲ್ ಮ್ಯಾನ್..

ನಿಮ್ಮ ಈ ನಿಸ್ವಾರ್ಥ ಕಾಯಕ ಹೀಗೆ ಮುಂದುವರೆಯಲಿ ಸರ್.. ಶುಭವಾಗಲಿ.. ಎಲ್ಲಾ ಕನ್ನಡಿಗರ ಕಡೆಯಿಂದ ನಿಮಗೊಂದು ಹ್ಯಾಟ್ಸ್ ಆಫ್ ಸರ್.. -ರಮ್ಯ ಜಗತ್, ಮೈಸೂರು..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ