ತಂದೆಯ ಸ್ಥಾನವೇ ಅಂತದ್ದು, ಎಲ್ಲಾ ತಂದೆಯರಿಗೂ ಮಗಳ ಮದುವೆಯನ್ನು ಹಾಗೆ ಮಾಡಬೇಕು ಹೀಗೆ ಮಾಡಬೇಕು ಎಂಬ ಕನಸಿರುತ್ತದೆ. ಅವರು ಸ್ಟಾರ್ ಆಗಲಿ ಅಥವಾ ಸಾಮಾನ್ಯ ಮನುಷ್ಯನಾಗಲಿ.. ಅಪ್ಪನ ಕಣ್ಣಲ್ಲಿ ಮಗಳ ಮದುವೆಯ ಕನಸು ಸದಾ ಇರುತ್ತದೆ.

ಇದೀಗ ಮಗಳ ಮದುವೆ ಸಂಭ್ರಮದಲ್ಲಿರುವ ಕ್ರೇಜಿಸ್ಟಾರ್ ಮನಸಲ್ಲಿ ನೂರಾರು ಭಾವುಕ ಸಂಗತಿಗಳು ಅಡಗಿವೆ.

ಹೌದು ಇದೇ ಮೇ 28, 29 ರಂದು ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ.. ಮದುವೆಯ ತಯಾರಿ ಹೇಗೆ ನಡೆಯುತ್ತಿದೆ ಎಂದು ಊಹಿಸಲೂ ಸಾಧ್ಯವಿಲ್ಲ.. ಇದಕ್ಕೆ ಕಾರಣ.. ಇತ್ತೀಚೆಗೆ ನಡೆದ ನಿಶ್ಚಿತಾರ್ಥ ಸಮಾರಂಭವನ್ನು ಸ್ವರ್ಗದಲ್ಲಿ ನಡೆಯುತ್ತಿರುವ ಹಾಗೆ ಭಾಸವಾಗುವಂತೆ ಮಾಡಿದ್ದರು ರವಿ ಚಂದ್ರನ್ ಅವರು..

ಇದೀಗ ಮದುವೆಗಾಗಿ ಅದ್ಧೂರಿಯಾಗಿ ಗಾಜಿನ ಸ್ಟೇಜ್ ಅನ್ನು ಸ್ವತಃ ರವಿಚಂದ್ರನ್ ಅವರೇ ನಿಂತು ರೆಡಿ ಮಾಡಿಸುತ್ತಿದ್ದಾರೆ.. ಹೌದು ಮಗಳು ಮದುವೆಯ ದಿನ ಸೆಲಿಬ್ರೆಟಿಯಂತೆ ಇರಬೇಕು.. ನಾನು ಸಾಮಾನ್ಯ ತಂದೆ ಯಂತೆ ಇರಬೇಕು ಎನ್ನುತ್ತಾರೆ ಕ್ರೇಜಿ ಸ್ಟಾರ್..

ಮಗಳ ಮದುವೆಯ ಬಗ್ಗೆ ಮಾತನಾಡಿರುವ ರವಿ ಚಂದ್ರನ್ ಅವರು ಮದುವೆಗೆ ಖರ್ಚಾಗಿರುವುದರ ಬಗ್ಗೆ ಮಾತನಾಡಿದ್ದಾರೆ. ಹೌದು ಆಶ್ಚರ್ಯ ಪಡಬೇಡಿ.. ಅವರು ಹೇಳಿದ ಮಾತುಗಳು ಎಂತಹವರ ಮನಸ್ಸನ್ನು ಕರಗಿಸುತ್ತವೆ.. ಇಲ್ಲಿದೆ ನೋಡಿ..

“ನಾನು ಮದುವೆಗೆ ದುಡ್ಡು ಖರ್ಚು ಮಾಡಿಲ್ಲ.. ನಾನು ನನ್ನ ಪ್ರೀತಿ ಮತ್ತು ತಲೆಯನ್ನಷ್ಟೇ ಖರ್ಚು ಮಾಡಿದ್ದೇನೆ.. ನನ್ನ ಮಗಳ ಮದುವೆಗೆ ಬೆಲೆ ಕಟ್ಟಬೇಡಿ.. ಮದುವೆ ಆಹ್ವಾನ ಪತ್ರಿಕೆಗೆ ಖರ್ಚಾಗಿರುವುದು ನನ್ನ ತಲೆ ಅಷ್ಟೇ ಎಂದಿದ್ದಾರೆ.. ಅಷ್ಟೇ ಅಲ್ಲದೆ, ಮದುವೆಗೆ ಬರುವ ಪ್ರತಿಯೊಬ್ಬರೂ ಆರಾಮಾಗಿ ಇರಬೇಕು.. ಅದಕ್ಕಾಗಿಯೇ ಒಳ್ಳೆಯ ವಾತಾವರಣ ಕ್ರಿಯೇಟ್ ಮಾಡಿದ್ದೇನೆ.. ಮದುವೆ ಮನೆಯಲ್ಲಿ ನನ್ನ ಮಗಳು ಸೆಲೆಬ್ರಿಟಿ ತರ ಇರಬೇಕು ಅನ್ನೋ ಆಸೆ ಇದೆ.. ಆದರೆ ನಾನು ಮಾತ್ರ ಕೇವಲ ಸಾಮಾನ್ಯ ತಂದೆಯಾಗಿದ್ದಾರೆ ಸಾಕು.. ಎಲ್ಲಾ ತಂದೆಯರಂತೆ ಮಗಳಿಗೆ ಒಳ್ಳೆಯ ಜೀವನ ರೂಪಿಸುವ ಜವಾಬ್ದಾರಿ ನನ್ನ ಮೇಲೆಯೂ ಇದೆ.. ಅದರಂತೆ ಮಾಡುತ್ತಿದ್ದೇನೆ ಎಂದರು.. ಮಗಳಿಗೆ ಉತ್ತಮ ಜೀವನ ರೂಪಿಸುವ ಜವಾಬ್ದಾರಿ ನನ್ನ ಮೇಲಿದ್ದು ಅದನ್ನು ಮಾಡುತ್ತಿದ್ದೇನೆ.

ನಿಜಕ್ಕೂ ಒಬ್ಬ ಜವಾಬ್ದಾರಿಯುತ ತಂದೆಯ ಗುಣ ತಿಳಿಯುವುದೇ ತನ್ನ ಮಗಳ ಮದುವೆ ಸಂದರ್ಭದಲ್ಲಿ ಎನ್ನುವುದಕ್ಕೆ ರವಿಚಂದ್ರನ್ ಅವರು ಹೊರತಾಗಿಲ್ಲ.. ಗೀತಾಂಜಲಿ ಹಾಗೂ ಅಜಯ್ ಅವರಿಗೆ ಶುಭವಾಗಲಿ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ