ಈ ಬಾರಿಯ ವೀಕೆಂಡ್ ವಿತ್ ರಮೇಶ್ ಕೊಂಚ ವಿಶೇಷವಾಗಿತ್ತು.. ಖ್ಯಾತ ನಟಿ ಖ್ಯಾತ ನಟನನ್ನು ವರಿಸಿ ಆತ ಇಲ್ಲದ ಸಮಯದಲ್ಲಿ ರಾಜಕೀಯ ಪ್ರವೇಶ ಮಾಡಿ ಇಲ್ಲ ಸಲ್ಲದ ಮಾತು ಕೇಳಿ ನೊಂದುಕೊಂಡರೂ ಗಟ್ಟಿತನದಿಂದ ನಿಂತು ಕೊನೆಗೆ ವಿಜಯಮಾಲೆ ಧರಿಸಿ ಸಂಸದೆಯಾದ ಸುಮಲತಾ ಅವರ ಕಥೆಯ ಅನಾವರಣವನ್ನ ನಾವು ನೋಡಿದೆವು..

ಸುಮಲತಾ ಅವರು ರಾಜಕೀಯ ಪ್ರವೇಶ ಮಾಡುವ ಸಂದರ್ಭದಲ್ಲಿ ಹಲವರು ಹಲವಾರು ರೀತಿಯಲ್ಲಿ ಮಾತನಾಡಿದ್ರು.. ಅವರೆಲ್ಲರ ಮಾತಿಗೆ ಪ್ರಬುದ್ಧರಾಗಿ ನಡೆದುಕೊಂಡ ಸುಮಲತಾ ಅವರು ಬಹಳ ಗಟ್ಟಿಗಿತ್ತಿ ಎಂದುಕೊಂಡೆವು.. ಆದರೆ ಅಲ್ಲಿ ನಿಜವಾಗಿ ನಡೆದದ್ದೇ ಬೇರೆ..

ಪ್ರಚಾರ ಸಂದರ್ಭದಲ್ಲಿ ಅತ್ತರೆ ಅದನ್ನು ಕೆಲವರು ಸಿಂಪತಿಗಾಗಿ ಎಂದುಕೊಂಡು ಬಿಟ್ಟಾರು ಎಂದು ಕಣ್ಣೀರನ್ನು ನುಂಗಿ ಪ್ರಚಾರ ಮಾಡುತ್ತಿದ್ದರು.. ನಂತರ ರಾತ್ರಿ ಕಾರ್ಯಕರ್ತರೊಂದಿಗೆ ಕೂತಾಗಲು ಈ ತಾಯಿ ಕಣ್ಣೀರು ಇಡುತ್ತಿರಲಿಲ್ಲ.. ಆದರೆ ಮಧ್ಯರಾತ್ರಿಯಲ್ಲಿ ಮಾಡುತ್ತಿದ್ದದ್ದೇ ಬೇರೆ..

ಹೌದು ಇದೆಲ್ಲವನ್ನು ಸ್ವತಃ ಅಂಬಿ ಕುಟುಂಬದ ಪ್ರತಿಯೊಂದು ಮಹತ್ವದ ಘಟ್ಟದಲ್ಲಿ ಮನೆಮಗನಂತೆ ನಿಂತು ಸುಮಲತಾರಿಗೆ ಸದಾ ತಮ್ಮನಂತೆ ಬೆನ್ನೆಲುಬಾಗಿ ನಿಂತಿದ್ದ ರಾಕ್ ಲೈನ್ ವೆಂಕಟೇಶ್ ಅವರೇ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ..

ಹೌದು ನಾನು ಅಳಲು ಶುರು ಮಾಡಿದರೆ ಕಾರ್ಯಕರ್ತರು ಮಂಕಾಗುತ್ತಾರೆ.. ಅವರಿಗೆ ನೋವಾಗುತ್ತದೆ ಎಂದು ಎಲ್ಲವನ್ನು ಸಹಿಸಿಕೊಂಡು ನಗುತ್ತಲೇ ಮಾತನಾಡಿ ಕಳುಹಿಸುತ್ತಿದ್ದರಂತೆ ಸುಮಲತಾ..

ನಂತರ ರಾತ್ರಿಯೆಲ್ಲಾ ಯೋಚಿಸಿ ಯೋಚಿಸಿ ಅಳು ತಡೆಯಲಾರದೆ ಮಧ್ಯ ರಾತ್ರಿ 3 ಗಂಟೆಗೆ ರಾಕ್ ಲೈನ್ ಅವರಿಗೆ ಕರೆ ಮಾಡಿದ್ದರಂತೆ.. ಈ ಸಮಯದಲ್ಲಿ ಅಕ್ಕ ಕಾಲ್ ಮಾಡಿದ್ದಾರಲ್ಲಾ ಎಂದು ಗಾಭರಿಯಾಗಿ ಫೋನ್ ರಿಸೀವ್ ಮಾಡಿ ರಾಕ್ ಲೈನ್ ವೆಂಕಟೇಶ್ ಕೇಳುವಾಗ.. ಸುಮಲತಾ ಅವರು ಬಿಕ್ಕಿ ಬಿಕ್ಕಿ ಅಳುತ್ತಿದ್ದರಂತೆ.. ನನಗೆ ಇದು ಬೇಕಿರಲಿಲ್ಲವೇನೋ ರಾಕ್.. ಈ ರೀತಿಯ ಚಿತ್ರಹಿಂಸೆ ಸಹಿಸೋಕೆ ಆಗ್ತಾ ಇಲ್ಲಾ.. ಅಳುವುದಕ್ಕೂ ಸ್ವಾತಂತ್ರ್ಯವಿಲ್ಲ ಎಂದು ನೊಂದು ಕಣ್ಣೀರು ಇಡುತ್ತಿದ್ದರಂತೆ..

ಆ ಸಮಯದಲ್ಲಿ ರಾಕ್ ಲೈನ್ ಸಮಾಧಾನ ಪಡಿಸಿ ಹಿಂದಡಿ ಇಡದಂತೆ ನೋಡಿಕೊಳ್ಳುತ್ತಿದ್ದರು‌. ಆಗ ರಾಕ್ ಲೈನ್ ದೇವರಲ್ಲಿ ಬೇಡಿಕೊಳ್ಳುತ್ತಿದ್ದದ್ದು ಒಂದೇ ಮಾತು ಅದು ಗೆಲುವು ಕೊಡು ಎಂದು.. ಸುಮಲತಾ ಅಂಬರೀಶ್ ಅವರಿಗಲ್ಲ.. ಒಂದು ಹೆಣ್ಣಿಗೆ ಗೆಲುವು ಕೊಡು ಎಂದು ಬೇಡಿಕೊಳ್ಳುತ್ತಿದ್ದರಂತೆ..

ನಿಜಕ್ಕೂ ಮಂಡ್ಯದ ಜನರೇ ದೇವರಾಗಿ ಗೆಲುವನ್ನು ಕರುಣಿಸಿಯೇ ಬಿಟ್ಟ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ