ಕನ್ನಡದ ಪ್ರಖ್ಯಾತ ಸಿಂಗಿಂಗ್ ಶೋ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 16 ಅಂತ್ಯಗೊಂಡಿದ್ದು.. ಓಂಕಾರ್ ವಿನ್ನರ್ ಎಂಬ ಪಟ್ಟದೊಂದಿಗೆ.. ಬರೋಬ್ಬರಿ 30 ಲಕ್ಷದ ಸೈಟ್ ಕೂಡ ಪಡೆದು ಅಪ್ಪ ಅಮ್ಮನಿಗೆ ಚಿಕ್ಕ ವಯಸ್ಸಿನಲ್ಲಿಯೇ ದೊಡ್ಡ ಉಡುಗೊರೆ ನೀಡಿದ್ದಾರೆ..

ಆದರೆ ಅಷ್ಟಕ್ಕೂ ವಿಜೇತರಿಗೆ ಅಷ್ಟೊಂದು ಬೆಲೆ ಬಾಳುವ ಸೈಟ್ ಕೊಟ್ಟವರು ಯಾರು?? ಇಲ್ಲಿದೆ ನೋಡಿ.. ಇವರ ಹೆಸರು ಮಂಜುನಾಥ್.. ವಯಸ್ಸಿನ್ನು ಕೇವಲ 34.. ಆದರೆ ವಯಸ್ಸಿಗೆ ಮೀರಿದ ಸಾಧನೆ ಈ ಪುಣ್ಯಾತ್ಮನದ್ದು. ಇವರೇನೂ ಹುಟ್ಟುತ್ತಲೇ ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡವರಲ್ಲ.. ಹುಟ್ಟಿದ್ದು ಅತ್ಯಂತ ಬಡ ಕುಟುಂಬದಲ್ಲಿ.. ಬೆಳೆದಿದ್ದು ಅಪ್ಪ ಅಮ್ಮನ ಕಷ್ಟಗಳನ್ನು ನೋಡುತ್ತಾ.. ಆದರೆ ಬಡವನಾಗಿಯೇ ಸಾಯಬಾರದೆಂದು ಚಿಕ್ಕ ವಯಸ್ಸಿನಲ್ಲಿಯೇ ಬ್ಯುಸಿನೆಸ್ ಮಾಡಿ ಕೇವಲ 30 ವರ್ಷಕ್ಕೆ ದೊಡ್ಡ ಮಟ್ಟಕ್ಕೆ ಬೆಳೆದು ನಿಂತರು..

ತಾನು ಬೆಳೆದದ್ದಷ್ಟೇ ಅಲ್ಲದೆ..‌ ತನ್ನಂತೆ ಕಷ್ಟದ ನಡುವೆ ಬೆಳೆಯುತ್ತಾ.. ಏನನ್ನಾದರೂ ಸಾಧಿಸಬೇಕೆಂಬ ಛಲ ತೊಟ್ಟ ಅದೆಷ್ಟೋ ಜನರಿಗೆ ಇವರು ನೆರವಾಗಿ ನಿಂತಿದ್ದಾರೆ.. ನೂರಾರು ವಿದ್ಯಾರ್ಥಿಗಳ ವಿಧ್ಯಾಭ್ಯಾಸಕ್ಕೆ ಟೊಂಕ ಕಟ್ಟಿ ನಿಂತಿದ್ದಾರೆ.. ಬಡವರಿಗೆ ಕಡಿಮೆ ಬೆಲೆಗೆ ಸೈಟ್ ಗಳನ್ನೂ ನೀಡುತ್ತಿದ್ದಾರೆ..

ಅದಿರಲಿ.. ಸರಿಗಮಪ ಗೆದ್ದವರಿಗೆ ಇವರೇಕೆ ಸೈಟ್ ಕೊಟ್ಟರು ಗೊತ್ತಾ? ಹೀಗೆ ಒಮ್ಮೆ ಪತ್ನಿಯೊಡನೆ ಟಿವಿ ಮುಂದೆ ಕೂತು ಶೋ ನೋಡುವಾಗ.. ಸರಿಗಮಪ ಶೋ ಗೆ ಬಂದ ಅನೇಕ ಸ್ಪರ್ಧಿಗಳು ಬಡ ವರ್ಗದವರೇ ಎಂಬುದು ಇವರಿಗೆ ತಿಳಿಯುತ್ತದೆ.. ಅದನ್ನು ನೋಡಿದ ಮಂಜುನಾಥ್ ದಂಪತಿ.. ಇವರಿಗೆ ಏನನ್ನಾದರೂ ಮಾಡಲೇ ಬೇಕು ಎಂದೆನಿಸಿ.. ಜ಼ೀ ಕನ್ನಡ ಚಾನಲ್ ಅನ್ನು ಸಂಪರ್ಕಿಸಿ ಬೇರೇನನ್ನೂ ಯೋಚಿಸದೇ 30 ಲಕ್ಷದ ಸೈಟ್ ಕೊಡುವುದಾಗಿ ಹೇಳಿಯೇ ಬಿಡುತ್ತಾರೆ.. ಲಕ್ಷವಿದ್ದವನೇ ಅಹಂಕಾರ ತುಂಬಿ ಮದದಿಂದ ಮಾತನಾಡುವ ಸಮಾಜದಲ್ಲಿ ಕೋಟಿ ಕೋಟಿ ಒಡೆಯನಾದರೂ ಅತ್ಯಂತ ವಿನಯದಿಂದ ಫಿನಾಲೆ ವೇದಿಕೆಯಲ್ಲಿ 30 ಲಕ್ಷದ ಸೈಟ್ ಕೊಟ್ಟು.. ಎಲ್ಲರೂ ಬೆಳೆಯಬೇಕು ಎಂದ ಮಂಜುನಾಥ್ ಅವರದ್ದು ನಿಜಕ್ಕೂ ದೊಡ್ಡ ಗುಣವೆನ್ನಬಹುದು.‌..

ಇನ್ನೊಂದು ಕಾಕತಾಳಿಯವೆಂದರೆ ಗೋಕಾಕ್ ಪ್ರವಾಹದಲ್ಲಿ ಓಂಕಾರ್ ಅವರ ಮನೆ ಕೊಚ್ಚಿ ಹೋಗಿದೆ.. ಆ ದೇವರೆ ಮಂಜುನಾಥ್ ಅವರ ಮೂಲಕ ಓಂಕಾರ್ ಹಾಗೂ ಕುಟುಂಬಕ್ಕೆ ಸಹಾಯವಾಗುವಂತೆ ಮಾಡಿದ್ದಾನೆ ಎನಿಸುತ್ತದೆ.. ಇಂತಹವರು ಬೇಕು ನಮ್ಮ ಸಮಾಜಕ್ಕೆ.. ನಿಮಗೆ ನಮ್ಮೆಲ್ಲಾ ಕನ್ನಡಿಗರ ಪರವಾಗಿ ಧನ್ಯವಾದಗಳು ಸರ್.. ನಿಮ್ಮ ಈ ಸಮಾಜದ ಮೇಲಿನ ಕಳಕಳಿ ಹೀಗೆ ಮುಂದುವರೆಯಲಿ ಎಂದು ಆಶಿಸುತ್ತೇವೆ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ