ಜ಼ೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಸಿಂಗಿಂಗ್ ಶೋ ಹಳ್ಳಿಗಾಡಿನ ಅನೇಕ ಪ್ರತಿಭೆಗಳನ್ನು ಹೊರತಂದಿದ್ದಷ್ಟೇ ಅಲ್ಲದೇ ಅನೇಕ ಭಾವನಾತ್ಮಕ ವಿಷಯಗಳಿಗೆ ಸಾಕ್ಷಿಯಾಗುತ್ತಿದೆ..

ಹೌದು ಸ್ಪರ್ಧಿಗಳನ್ನು ಆಯ್ಕೆ ಮಾಡುವಾಗ ಚಾನಲ್ ನವರು ಬಹಳಷ್ಟು ಬಡ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿರುವುದು ನಿಜಕ್ಕೂ ಮೆಚ್ಚುವಂತದ್ದು..

ಅದೇ ರೀತಿಯಾಗಿ ಈ ಬಾರಿ ಕಣ್ಣು ಕಾಣದ ಸಂಗೀತಳಿಗೆ ಬಡ ಮೋನಮ್ಮಳಿಗೆ..‌ ಸರ್ಕಾರಿ ಶಾಲೆಯ ರುಬಿನಾಳಿಗೆ ಹೀಗೆ ಅನೇಕ ಪ್ರತಿಭೆಗಳಿಗೆ ಅವಕಾಶ ನೀಡಿತ್ತು.. ಅದರಂತೆಯೇ ಸಂಗೀತ ಕಣ್ಣು ಕಾಣದಿದ್ದರೂ ಸಂಗೀತ ಸರಸ್ವತಿಯನ್ನು ಒಲಿಸಿಕೊಂಡು ಪ್ರೇಕ್ಷಕರ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬಳಾಗಿ ನಿಂತಿದ್ದಾಳೆ..

ಅದರಂತೆಯೇ ಈ ಬಾರಿ ಸೆಮಿ ಫಿನಾಲೆಯಲ್ಲಿ ಹಾಡಿದ ಸಂಗೀತಳಿಗೆ ಸರ್ಪ್ರೈಸ್ ಒಂದು ಕಾದಿತ್ತು.‌ ಹೌದು ಅನೇಕ ದಿನಗಳಿಂದ ತನ್ನ ತಾಯಿ ಹಾಗೂ ಅಜ್ಜಿಯನ್ನು ನೋಡಿರದ ಸಂಗೀತಳಿಗೆ.. ಅವಳ ತಾಯಿ ಹಾಗೂ ಅಜ್ಜಿಯನ್ನು ಬೆಂಗಳೂರೊಗೆ ಕರೆಸಿ ವೇದಿಕೆ ಮೇಲೆ ನಿಲ್ಲಿಸಲಾಯಿತು..

ಮಗಳಿಗಾಗಿ ಆ ತಾಯಿ ರೊಟ್ಟಿ ಹಾಗೂ ಇನ್ನಿತರ ಸಿಹಿ ತಿಂಡಿಗಳನ್ನು ಮಾಡಿಕೊಂಡು ಬುತ್ತಿಯಲ್ಲಿ ಹೊತ್ತು ತಂದಿದ್ದು ನಿಜಕ್ಕೂ ಪ್ರೀತಿಯಲ್ಲಿ ಬಡವರೆಂದೂ ಶ್ರೀಮಂತರೇ ಎನ್ನುವಂತಿತ್ತು..

ಬುತ್ತಿಯಲ್ಲಿನ ತಿಂಡಿಯನ್ನ ನೆರೆದಿದ್ದ ಎಲ್ಲರೂ ಹಂಚಿಕೊಂಡು ತಿಂದರು.. ಸಂದರ್ಭಕ್ಕೆ ತಕ್ಕಂತೆ ಮಹಾಗುರುಗಳು.. ಬಡವರ ಮನೆ ಊಟ ಚೆಂದ ಶ್ರೀಮಂತರ ಮನೆ ನೋಟ್ ಚೆಂದ ಎಂದು ಅರ್ಥಪೂರ್ಣವಾದ ಮಾತುಗಳನ್ನಾಡಿದರು..

ಇದೇ ಸಂದರ್ಭದಲ್ಲಿ ಸಂಗೀತಳಿಗೆ.. ಅಮ್ಮನಿಗೆ ಏನು ಹೇಳ್ತೀಯಾ ಎಂದು ಅನುಶ್ರಿ ಕೇಳಿದರು.. ಆ ಸಮಯದಲ್ಲಿ ಸಂಗೀತ ಆಡಿದ ಆ ಒಂದು ಮಾತು ಅಲ್ಲಿ‌ ನೆರೆದಿದ್ದ ಎಲ್ಲರನ್ನೂ ಮೌನಕ್ಲೆ ತಳ್ಳಿ‌ ಕಣ್ಣಂಚಲ್ಲಿ ನೀರು ತುಂಬಿಕೊಳ್ಳುವಂತೆ ಮಾಡಿತ್ತು.

ಹೌದು.. ಈ ಸಮಯದಲ್ಲಿ ಅಮ್ಮನಿಗೆ ಏನ್ ಹೇಳ್ತೀಯಾ ಅನ್ನೋ ಮಾತಿಗೆ ಸಂಗೀತ ಕೊಟ್ಟ ಉತ್ತರ.. “ನಿನ್ನ ನೋಡಿ ಬಹಳ ದಿನ ಆಯ್ತವ್ವ.. ನೋಡಿ ಖುಷಿ ಆಯ್ತು” ಅಂತಾರೆ..

ಇದರಲ್ಲೇನು ವಿಶೇಷ ಅಂತೀರಾ.. ವಿಶೇಷ ಬಹಳ ಇದೆ.. ಸಂಗೀತಳಿಗೆ ಕಣ್ಣು ಕಾಣೋದಿಲ್ಲ.. ಆದರೆ ಆಕೆ ತನ್ನ ಅಮ್ಮನಿಗೆ ಹೇಳಿದ ಮಾತು ನಿನ್ನ ನೋಡಿ ತುಂಬಾ ದಿನ ಆಯಿತು ಅಂತ.. ನಿಜಕ್ಕೂ ಆ ಪುಟ್ಟ ಹುಡುಗಿಯ ಒಳಗಣ್ಣಿನಿಂದ ಅಮ್ಮನನ್ನು ನೋಡಿದ್ದು ಬಹಳ ಸಂತೋಷ ಆಯ್ತು ಎಂದಾಗ ಇಡೀ ಶೋ ನ ಎಲ್ಲರೂ ಒಂದು ಕ್ಷಣ ಕಣ್ಣಂಚಲ್ಲಿ ನೀರು ತುಂಬಿಕೊಂಡು ಚಪ್ಪಾಳೆ ಮೂಲಕ ಸಂಗೀತಾಳ ಮಾತಿಗೆ ಹೌದೆಂದರು..‌

ಒಂದೆರೆಡು ನಿಮಿಷ ಕಣ್ಣಿಗೆ ಬಟ್ಟೆ ಕಟ್ಟಿಕೊಂಡರೆ ಇರೋದು ಕಷ್ಟ ಅಂತದರಲ್ಲಿ ಸಂಗೀತಳಂತ ಅದೆಷ್ಟೋ ಪ್ರತಿಭೆಗಳು ಎಲೆ ಮರೆ ಕಾಯಿಯಂತೆ ಸಾಧನೆ ಮಾಡುತ್ತಲೇ ಬರುತ್ತಿದ್ದಾರೆ.. ಇಂತಹ ಎಲ್ಲಾ ಪ್ರತಿಭಾವಂತ ಮಕ್ಕಳಿಗೆ ಶುಭವಾಗಲಿ..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ