ಶಂಕರ್ ನಾಗ್ ಎಂಬ ಹೆಸರಷ್ಟೇ ಸಾಕು ಜಡತ್ವ ತುಂಬಿದ ಮನುಷ್ಯನೂ ಕೂಡ ಒಂದು ಕ್ಷಣ ಮೈಕೊಡವಿ ಎದ್ದು ತನ್ನ ಕೆಲಸಗಳತ್ತ ಗಮನ ನೀಡ್ತಾನೆ. ಇದಕ್ಕೆ ಕಾರಣ ಕೇವಲ ಶಂಕರ್ ನಾಗ್ ಅವರು ಮಾಡಿದ ಸಿನಿಮಾಗಳು ಮಾತ್ರವಲ್ಲ.. ಅವರ ನಿಜ ಜೀವನ.. ಅವರ ನಿಜ ಜೀವನದ ವ್ಯಕ್ತಿತ್ವ ಎಷ್ಟು ಬಣ್ಣಿಸಿದರೂ ಸಾಲದು..

ಹೌದು ಶಂಕರ್ ನಾಗ್ ಅವರು ಮುಂದೆ ಇನ್ನತ್ತು ವರ್ಷಗಳ ನಂತರ ಸಮಾಜಕ್ಕೆ ಏನು ಬೇಕು ಎಂಬುದನ್ನು ಆಗಲೇ ಚಿಂತಿಸಿದ್ದ ಮಹಾನ್ ಚಾಣಕ್ಯ ಎನ್ನಬಹುದು.. ಮುಂದೆ ಮಲಗುವುದು ಇದ್ದೇ ಇದೆ.. ಬದುಕಿದ್ದಾಗ ಏನಾದರೂ ಸಾಧನೆ ಮಾಡಬೇಕು ಎನ್ನುತ್ತಿದ್ದವರು ಶಂಕರ್ ನಾಗ್..

ಹೀಗೆ ಒಮ್ಮೆ ರವಿ ಬೆಳೆಗೆರೆ ಅವರೊಂದಿಗೆ ಶಂಕರ್ ನಾಗ್ ಯಾವುದೋ ವಿಷಯವನ್ನು ಚರ್ಚೆ ಮಾಡುತ್ತಾ ಕೂತಿರುವ ಸಮಯದಲ್ಲಿ ರವಿ ಬೆಳೆಗೆರೆ ಅವರು ಒಂದು ನಿಮಿಷ ಶಂಕರ, ಟಾಯ್ಲೆಟ್ ಗೆ ಹೋಗಿ ಬರ್ತೀನಿ ಎಂದರಂತೆ.. ಆಗ ಶಂಕರ್ ನಾಗ್ ಅವರು ಹೇಯ್ ಏನು ಬರಿ ಕೈಗಳಲ್ಲಿ ಹೋಗ್ತಾ ಇದ್ದೀಯಾ ಎಂದು ಕೇಳಿದರಂತೆ.. ಆಗ ರವಿ ಬೆಳೆಗೆರೆ ಅವರು ಹು ಬಾತ್ ರೂಮಿನಲ್ಲಿ ನೀರಿನ ವ್ಯವಸ್ಥೆ ಇದೆ ಎಂದರಂತೆ..

ಆಗ, ಅದಲ್ಲಾಪ ಬಾತ್ ರೂಮ್‌ಗೆ ಯಾವುದಾದರೂ ಪುಸ್ತಕ ಅಥವಾ ನ್ಯೂಸ್ ಪೇಪರ್ ತೆಗೆದುಕೊಂಡು ಹೋಗಿ ಓದು ಎನ್ನುತ್ತಿದ್ದರಂತೆ.. ಅಂದಿನಿಂದ ಇಂದಿನವರೆಗೂ ಟಾಯ್ಲೆಟ್ ಗೆ ಹೋಗುವಾಗ ಪುಸ್ತಕ ಓದುವ ಅಭ್ಯಾಸ ರವಿ ಬೆಳೆಗೆರೆ ಅವರಿಗಷ್ಟೇ ಅಲ್ಲ ಬಹುತೇಕ ಶಂಕರ್ ನಾಗ್ ಅವರ ಸ್ನೇಹಿತರಿಗೆ ಇದೆ.. ಇದು ಕೇಳಲು ಅಪಹಾಸ್ಯದಂತೆ ಕಂಡರೂ ಕೂಡ ಶಂಕರ್ ನಾಗ್ ಅವರು ಸಮಯಕ್ಕೆ ಎಷ್ಟು ಬೆಲೆ ಕೊಡ್ತಾ ಇದ್ರು ಅನ್ನೋದು ತಿಳಿಯುತ್ತದೆ..

ಅಷ್ಟೇ ಅಲ್ಲ ಆಗಲೇ ಮೆಟ್ರೋ ಕನಸು ಕಂಡಿದ್ದ ಶಂಕರ್ ನಾಗ್ ಅವರು ನಂದಿ ಬೆಟ್ಟಕ್ಕೆ ರೋಪ್ ವೇ ಅನ್ನು ನಿರ್ಮಿಸಬೇಕು ಎಂದು ಚಿಂತನೆ ನಡೆಸಿ ಚರ್ಚೆ ಕೂಡ ಮಾಡಿದ್ದರಂತೆ..‌

ಶಂಕರ್ ನಾಗ್ ಅವರು ಯಾವಗ ವಿಮಾನದಲ್ಲಿ ಪ್ರಯಾಣ ಮಾಡಿದರೂ ಕೂಡ ಅವರು ಏರ್ ಪೋರ್ಟ್ ಗೆ ಹೋಗುವ ಮುನ್ನ ತಮ್ಮ ಸಹಯಾಕನಿಗೆ ಫೋನ್ ಮಾಡಿ ಏರ್ ಪೋರ್ಟ್ ಗೆ ಬರ ಹೇಳುತ್ತಿದ್ದರಂತೆ.. ಜೊತೆಗೆ ಏರ್ ಪೋರ್ಟ್ ಹೋಗುವ ಮಾರ್ಗ ಪೂರ ಕಾರ್ ನಲ್ಲಿ ಕೂತು ಒಂದಷ್ಟು ಚೀಟಿಗಳನ್ನು ಬರೆಯುತ್ತಿದ್ದರಂತೆ..

ಅವರ ಸಹಾಯಕ ಏರ್ ಪೋರ್ಟ್ ಗೆ ಬಂದ ತಕ್ಷಣ ಆ ಚೀಟಿಗಳನ್ನೆಲ್ಲಾ ನೀಡಿ ಅದರಲ್ಲಿರುವ ಕೆಲಸಗಳನ್ನು ಮಾಡಲು ತಿಳಿಸುತ್ತಿದ್ದರಂತೆ.. ಅಷ್ಟೂ ಸಮಯಕ್ಕೆ ಬೆಲೆ ಕೊಡುತ್ತಿದ್ದ ಶಂಕರ್ ನಾಗ್ ಅವರ ಬುದ್ಧಿ ಶಕ್ತಿಗೆ ಅವರನ್ನು ನೋಡಿದವರೆಲ್ಲಾ ಹ್ಯಾಟ್ಸ್ ಆಫ್ ಹೇಳುತ್ತಿದ್ದರು..

ಈ ಬಗ್ಗೆ ರವಿ ಬೆಳೆಗೆರೆ ಅವರು ನೂರಕ್ಕೆ ನೂರರಷ್ಟು ಸತ್ಯದ ಮಾತೊಂದನ್ನು ಹೇಳುತ್ತಾರೆ.. ಹೌದು ಇಂದೇನಾದರೂ ಶಂಕರ್ ನಾಗ್ ಬದುಕಿದ್ದಿದ್ದರೆ ಅವ ಖಂಡಿತ ಕರ್ನಾಟಕದ ಮುಖ್ಯಮಂತ್ರಿ ಆಗಿರ್ತಿದ್ದ ಎನ್ನುತ್ತಾರೆ..

ಒಂದೇ ಸಮಯದಲ್ಲೊ ಎರಡರಿಂದ ಮೂರು ಕೆಲಸಗಳನ್ನು ಒಟ್ಟೊಟ್ಟಿಗೆ ಮಾಡುತ್ತಿದ್ದ ಶಂಕರ್ ನಾಗ್ ಕಂಡರೆ ಅದ್ಯಾಕೋ ದೇವರಿಗೂ ಹೊಟ್ಟೆ ಕಿಚ್ಚು ಬಂದಿತೋ ಏನೋ.. ಈತ ಇನ್ನೂ ಹೆಚ್ಚು ದಿನ ಭೂಮಿ‌ಮೇಲೆ ಇದ್ದರೆ ಇನ್ನೇನು ಮಾಡಿ ಬಿಡುತ್ತಾನೋ ಎಂದು ಭಾವಿಸಿ ಬೇಗ ತನ್ನ ಬಳಿ ಕರೆಸಿಕೊಂಡು ಬಿಟ್ಟನೆಂದು ಕಾಣುತ್ತದೆ..

ಅದೇನಾದರೂ ಆಗಲಿ ಶಂಕರ್ ನಾಗ್ ಎಂದೂ ಅಭಿಮಾನಿಗಳ ಮನಸ್ಸಿನಲ್ಲಿ ಅಮರ..‌ಸಾಧನೆಯ ಹಾದಿ ಹಿಡಿಯುವವರಿಗೆ ಸ್ಫೂರ್ತಿಯ ಚಿಲುಮೆ ಶಂಕರ… ದಯವಿಟ್ಟು ಮತ್ತೆ ಹುಟ್ಟಿ ಬನ್ನಿ ಸಾರ್..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ