ಶಿವು ಉಪ್ಪಾರ್ ಎಂಬ ಹೆಸರು ಹತ್ತು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಉತ್ತರ ಕರ್ನಾಟಕದಿಂದ ಹಿಡಿದು ದಕ್ಷಿಣ ಕರ್ನಾಟಕದವರೆಗೂ ಕೇಳಿ ಬರುತ್ತಿದೆ..

ಎಲ್ಲರೂ ಹೇಳುತ್ತಿರುವುದು ಒಂದೇ ಮಾತು ಅದು ಈತನ ಸಾವಿಗೆ ನ್ಯಾಯ ಸಿಗಲಿ ಎಂದು.. ಅಷ್ಟಕ್ಕೂ ಯಾರೀತ?? ಇವನಿಗೇಕೆ ಎಲ್ಲರೂ ನ್ಯಾಯ ಕೇಳಬೇಕು..

ಹೌದು ಇನ್ನೂ ಚಿಗುರು ಮೀಸೆಯ ಹುಡುಗ ಈತ.. ಇವನ ವಯಸ್ಸು ಕೇವಲ 19.. ಸಾಯುವ ವಯಸ್ಸಾ?? ಬದುಕಿ ಬಾಳಿ.. ಮುಂದೆ ಹೆತ್ತ ಅಪ್ಪ ಅಮ್ಮನಿಗೆ ಹೆಗಲು ಕೊಟ್ಟು ನಿಲ್ಲಬೇಕಾದವ ಹರೆಯದಲ್ಲೆ ಬಸ್ ಸ್ಟ್ಯಾಂಡಿನಲ್ಲಿ ಹೆಣವಾದನೆಂದರೆ ಎಂತಹ ಕಲ್ಲು ಕೂಡ ಕರಗುತ್ತದೆ..

ಶಿವು ಉಪ್ಪಾರ್.. ಬದುಕಿದ್ದು ಕೆಲ ವರ್ಷಗಳೇ ಇರಬಹುದು ಆದರೆ ಬದುಕಿದಷ್ಟು ದಿನ ನಿಜಕ್ಕೂ ಹುಲಿಯಂತೆಯೇ ಬದುಕಿದ.. ಆತ ಮಾಡಿದ್ದ ಡಬ್ ಸ್ಮಾಶ್ ಆಗಿರಬಹುದು.. ಆತನ ಮಾತುಗಳಿರಬಹುದು.. ಯಾರಿಗೂ ಅಂಜದೇ.. ಯಾರಿಗೂ ಅಳುಕದೆ ಬದುಕಿದವ..

ಅವನು ಇದ್ದಷ್ಟು ದಿನ ಅದೆಷ್ಟು ಗೋವುಗಳನ್ನು ರಕ್ಷಿಸಿದ್ದನೋ.. ಅದೆಷ್ಟು ಜೀವಗಳನ್ನು ಕಾಪಾಡಿದ್ದನೋ.. ಪಾಪ ಕೊನೆಗೆ ತನ್ನನ್ನೇ ತಾನು ಅರ್ಪಿಸಿಕೊಂಡುಬಿಟ್ಟ..

ಇಷ್ಟೆಲ್ಲಾ ಭಯವಿಲ್ಲದೇ ಮಾತನಾಡ್ತಿದ್ದಾನೆ ಅವನೊಬ್ಬ ಶ್ರೀಮಂತನೇ ಇರಬೇಕು ಎಂದುಕೊಳ್ಳಬೇಡಿ.. ಆತನದ್ದು ಮಿಡಲ್ ಕ್ಲಾಸ್ ಫ್ಯಾಮಿಲಿ.. ತನ್ನ ತಂಗಿ ಅಪ್ಪ ಅಮ್ಮ ಎಲ್ಲರೊಂದಿಗೆ ಮಗುವಿನಂತೆಯೇ ಇದ್ದವ.. ಹೊರ ಜಗತ್ತಿನಲ್ಲಿ ಹುಲಿಯಂತೆ ಗೋಕಳ್ಳರನ್ನು ಬೇಟೆಯಾಡುತ್ತಿದ್ದ..

ಅವನ ನೆನಪು ಪಾಪ ಆ ಗೋವುಗಳಿಗೂ ಇರಬೇಕು… ಅದಕ್ಕಾಗಿಯೇ ಶ್ರದ್ಧಾಂಜಲಿ ಸಲ್ಲಿಸಿರುವ ಅತನ ಭಾವಚಿತ್ರಗಳನ್ನು ಹಲವಾರು ಕಡೆ ಗೋವುಗಳು ಬಂದು ತಮ್ಮ ನಾಲಗೆಯಲ್ಲಿ ಸವರಿ ಕಣ್ಣೀರಿಡುತ್ತಿದ್ದಾವೆ..

ಆತನ ರಕ್ತದ ಪ್ರತಿ ಕಣವೂ ಧರ್ಮದ ಮೇಲಿನ ಪ್ರೀತಿಯನ್ನು ತೋರುತಿತ್ತು ಎಂಬುದಕ್ಕೆ ಆತನ ಮೈಮೇಲಿನ ಟ್ಯಾಟೂಗಳೇ ಹೇಳುತ್ತಿದ್ದವು‌‌.. ಒಂದು ಕಡೆ ಹನುಮನ ಮುಖ.. ಮತ್ತೊಂದು ಕಡೆ ಭಜರಂಗಿಯ ಗಧೆ.. ಆತನ ಕತ್ತಿನಲ್ಲಿ ರಾರಾಜಿಸುತ್ತಿದ್ದವು‌…

ಇಷ್ಟೆಲ್ಲಾ ಧೈರ್ಯಶಾಲಿಯಾಗಿದ್ದ ಶಿವು ಒಂದು ದಿನ ಬಸ್ ಸ್ಟ್ಯಾಂಡಿನಲ್ಲಿ ನೇಣಿಗೆ ಶರಣಾಗಿದ್ದಾನೆ ಎಂಬ ಸುದ್ದಿಯೂ ಬಂತು.. ಆದರೆ ಇದು‌ ಆತ್ಮಹತ್ಯೆಯಲ್ಲ ಕೊಲೆ ಎಂದು ಇನ್ನೂ ಕೂಡ ಹೋರಾಟಗಳು ನಡೆಯುತ್ತಲೇ ಇವೆ.. ಬಿಜೆಪಿ ಪಕ್ಷದ ಹಲವಾರು ಮುಖಂಡರು ಕೂಡ ಶಿವು ಉಪ್ಪಾರ್ ಸಾವಿನ ತನಿಖೆಯನ್ನು ಸಿಐಡಿಗೆ ವಹಿಸಿ ಎಂದು ಕೇಳಿಕೊಂಡಿದ್ದಾರೆ..

ಆದರೆ ಆತನ ಮೈಮೇಲೆ ಯಾವುದೇ ಗಾಯಗಳಾಗದೇ ಇದ್ದದ್ದರಿಂದ ಇದನ್ನು ಪೊಲೀಸರು ಆತ್ಮಹತ್ಯೆ ಎಂದಿದ್ದಾರೆ..

ಆದರೆ ಇಷ್ಟೆಲ್ಲಾ ಹೋರಾಟಗಳು ಇಷ್ಟೆಲ್ಲಾ ಜನರ ಕೂಗಿಗಾದರೂ ಸರ್ಕಾರ ಈ ಸಾವಿನ ತನಿಖೆಯನ್ನ ಸಿಐಡಿ ಗೆ ವಹಿಸಲಿ.. ಆತ್ಮಹತ್ಯೆಯಾದರೂ ಕೂಡ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದವರಿಗೆ ಶಿಕ್ಷೆಯಾಗಲಿ..

ಇನ್ನೂ ಪ್ರಪಂಚವನ್ನು ಸರಿಯಾಗಿ ಎರಡು ದಶಕವೂ ನೋಡದೇ ಕಣ್ಮುಚ್ಚಿದ ಆ ಜೀವಕ್ಕೆ ನ್ಯಾಯ ಸಿಗಲಿ.. ಪ್ರತಿ ಕಣವೂ ದೇಶ ಧರ್ಮ ಗೋಮಾತೆ ಎನ್ನುತ್ತಿದ್ದ ಮುಗ್ಧ ಜೀವದ ಅತ್ಮಕ್ಕೆ ಶಾಂತಿ ಸಿಗಲಿ..

ಆದರೆ ಈ ಸಮಯದಲ್ಲಿ ಒಂದನ್ನು ನೆನೆಸಿಕೊಳ್ಳಲೇ ಬೇಕು.. ಶಿವು ಇಲ್ಲದಿದ್ದರೂ ಆತನ ಕುಟುಣ್ಬಕ್ಕೆ ಮಕ್ಕಳಾಗಿ ನಿಂತು ಬಹಳಷ್ಟು ಜನರು ಲಕ್ಷಗಟ್ಟಲೆ ಹಣವನ್ನು ಸಂಗ್ರಹ ಮಾಡಿ ಆ ಕುಟುಂಬಕ್ಕೆ ನೆರವಾಗಿದ್ದಾರೆ.. ನೆರವಾಗುತ್ತಿದ್ದಾರೆ.. ನಿಜಕ್ಕೂ ಪ್ರತಿಯೊಬ್ಬರಿಗೂ ಧನ್ಯವಾದಗಳು..

error: ಕಾಪಿ ಮಾಡೋದು ಬಿಟ್ಟು, ಶೇರ್ ಮಾಡಿ